ಪುತ್ತೂರು ಟೈಲರ್ ಎಸೋಸಿಯೇಶನ್ ಕ್ಷೇತ್ರ ಸಮಿತಿ ಸಾಮಾನ್ಯ ಸಭೆ

0

ಪುತ್ತೂರು: ಪುತ್ತೂರು ಕ್ಷೇತ್ರ ಸಮಿತಿಯ ಸಾಮಾನ್ಯ ಸಭೆಯು ಕ್ಷೇತ್ರ ಸಮಿತಿ ಅಧ್ಯಕ್ಷ ಜಯರಾಮ್ ಬಿ ಯನ್ ಅಧ್ಯಕ್ಷತೆಯಲ್ಲಿ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಜರಗಿತು.ಇತ್ತೀಚೆಗೆ ಅನಾರೋಗ್ಯದಿಂದ ನಿಧನ ಹೊಂದಿದ ನರಿಮೊಗರು ವಲಯದ ಸದಸ್ಯ ಜತ್ತಪ್ಪ ಗೌಡ ಇವರಿಗೆ ಕ್ಷೇತ್ರ ಸಮಿತಿ ವತಿಯಿಂದ ಶೃದ್ದಾಂಜಲಿ ಸಲ್ಲಿಸಲಾಯಿತು.

ಸಭೆಯಲ್ಲಿ ಕ್ಷೇತ್ರ ಸಮಿತಿ ರಚನೆಗೊಂಡು 2 ವರ್ಷ ಪೂರೈಸಿರುವುದರಿಂದ ಕ್ಷೇತ್ರ ಸಮಿತಿಯ ಮಹಾಸಭೆ ಜು.30 ರಂದು ನಡೆಸುವುದೆಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಕಾರ್ಯದರ್ಶಿ ಉಮಾ ಯು ನಾಯ್ಕ್,ಕೋಶಾಧಿಕಾರಿ ಸುಜಾತ, ಜಿಲ್ಲಾಧ್ಯಕ್ಷರಾದ ಜಯಂತ ಉರ್ಲಾಂಡಿ, ಜಿಲ್ಲಾ ಸದಸ್ಯರಾದ ವಿಶ್ವನಾಥ್ ರೈ ಕುಂಬ್ರ ಚಿತ್ರಾ ಕುಂಬ್ರ, ನಗರ ವಲಯ ಅಧ್ಯಕ್ಷರಾದ ದಿನೇಶ್ ಸಂಪ್ಯ,ನಿಕಟ ಪೂರ್ವ ಅಧ್ಯಕ್ಷರಾದ ಯಶೋಧರ ಜೈನ್,ರಮೇಶ್ ಕೆಮ್ಮಾಯಿ, ವನಿತಾ, ಪವಿತ್ರಾ, ನರಿಮೊಗರು ವಲಯದ ಆನಂದ ದಂಡ್ಯನಕುಕ್ಕು,ಜಯಲಕ್ಷ್ಮಿ ,ಕುಂಬ್ರ ವಲಯದ ಆನಂದ ರೈ,ಸವಣೂರು ವಲಯದ ಜಗನ್ನಾಥ, ಯಶೋದ,ಉಪ್ಪಿನಂಗಡಿ ವಲಯದ ಸುಜಾತ ಕೃಷ್ಣ,ಜಯಶ್ರೀ ಆಚಾರ್ಯ,ಈಶ್ವರಮಂಗಲ ವಲಯದ ರೇವತಿ,ಗಣೇಶ್,ಸೀತಾರಾಮ, ಪುಣಚ ವಲಯದ ನಿರ್ಮಲ ಉಪಸ್ಥಿತರಿದ್ದರು,ಕಾರ್ಯದರ್ಶಿ ಉಮಾ ಯು ನಾಯ್ಕ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here