ನೂಜಿಬಾಳ್ತಿಲ ಬೆಥನಿ ಪಿಯು ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ

0

ಕಡಬ: ನೂಜಿಬಾಳ್ತಿಲ ಬೆಥನಿ ಪಿಯು ಕಾಲೇಜ್‌ನ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘಕ್ಕೆ ಚುನಾವಣೆಯು ಜೂ.24ರಂದು ನಡೆಯಿತು.


ಚುನಾವಣೆಯಲ್ಲಿ ಒಟ್ಟು 10 ವಿದ್ಯಾರ್ಥಿಗಳು ಸ್ಪರ್ಧಿಸಿದ್ದು, ಶಾಲಾ ನಾಯಕಿಯಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಪರ್ಣಿಕಾ ಹಾಗೂ ಶಾಲಾ ವಿದ್ಯಾರ್ಥಿ ಪ್ರತಿನಿಧಿಯಾಗಿ ವಂಶಿತಾ .ಎಸ್ ಆಯ್ಕೆಯಾದರು. ಉಪನಾಯಕಿಯಾಗಿ ಹತ್ತನೇ ತರಗತಿಯ ನಿಶಾ ಜಿ.ಎಸ್., ಉಪನಾಯಕನಾಗಿ 9ನೇ ತರಗತಿಯ ಬಾಲಕೃಷ್ಣ ಆಯ್ಕೆಯಾದರು. ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿಗಳಾಗಿ ಅಂಕಿತಾ, ದೀಕ್ಷಾ, ವೀಕ್ಷಾ ಹಾಗೂ ಪಿಯುಸಿ ವಿದ್ಯಾರ್ಥಿಗಳಾದ ವಿನೀತ್, ನಿಕ್ಷಿತ್, ಸುದರ್ಶನ್ ಕಾರ್ಯನಿರ್ವಹಿಸಿದರು.


ಶಾಲಾ ಸಂಚಾಲಕ ವಿಜೋಯ್ ವರ್ಗೀಸ್ ಮಾರ್ಗದರ್ಶನದಲ್ಲಿ ಶಾಲಾ ಪ್ರಾಂಶುಪಾಲ ಜಾರ್ಜ್ ಟಿ.ಎಸ್, ಮುಖ್ಯಗುರು ತೋಮಸ್ ಎ.ಕೆ., ಸಹ ಶಿಕ್ಷಕರಾದ ಸುಬ್ರಹ್ಮಣ್ಯ ಎಸ್ ಭಟ್, ಬಿಜು ಕೆ.ಜೆ, ಶಿಲ್ಪಾ, ಸುಮಿತಾ ಬಿ.ಟಿ, ಶಾಂಭವಿ ಕೆ, ದಿಲ್‌ಷಾದ್, ಶ್ವೇತಾರಾಣಿ, ಬೀನಾ ಜೋರ್ಜ್, ಜಿನ್ಸಿ ಜೋಸೆಫ್, ಮತ್ತಾಯಿ ಓ.ಜೆ, ಪುನೀತ್ ಕೆ.ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು.

LEAVE A REPLY

Please enter your comment!
Please enter your name here