ಕಿರಣ್ ಮಹಿಳಾ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ

0

ನೆಲ್ಯಾಡಿ: ಡಿ.ಕೆ.ಆರ್.ಡಿ.ಎಸ್ ಸಮಾಜ ಸೇವಾ ಸಂಸ್ಥೆ ಬೆಳ್ತಂಗಡಿಯ ಅಂಗ ಸಂಸ್ಥೆಯಾಗಿ 2017ರಲ್ಲಿ ಪ್ರಾರಂಭಗೊಂಡು ಮುನ್ನಡೆಯುತ್ತಿರುವ ಕಿರಣ್ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ ಇದರ 2023-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಕಾರ್ಯಕ್ರಮ ಕುಟ್ರಪ್ಪಾಡಿ ಸೈಂಟ್ ಮೇರಿಸ್ ಚರ್ಚ್‌ನ ಸಭಾಂಗಣದಲ್ಲಿ ನಡೆಯಿತು.


ನೂತನ ಅಧ್ಯಕ್ಷರಾಗಿ ಡೈಸಿ ಜಾಯ್, ಉಪಾಧ್ಯಕ್ಷರಾಗಿ ಗ್ರೇಸಿ ತೋಮಸ್, ಕಾರ್ಯದರ್ಶಿಯಾಗಿ ವಲ್ಸಮ್ಮ ಎಜೆ, ಜೊತೆ ಕಾರ್ಯದರ್ಶಿಯಾಗಿ ನಿಶಾ, ಕೋಶಾಧಿಕಾರಿಯಾಗಿ ಸೂಸಮ್ಮ ಇವರು ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಡಯಾನ, ಬೀನಾ,ಭವ್ಯ, ರೆಬೇಕಾ ಆಯ್ಕೆಯಾಗಿ ಜವಾಬ್ದಾರಿ ಸ್ವೀಕರಿಸಿದರು.

LEAVE A REPLY

Please enter your comment!
Please enter your name here