ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ

0

ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿ ಕಾಲೇಜಿನಲ್ಲಿ ಜೂನ್ 22 ರಂದು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ವಿವಿಧ ಹುದ್ದೆಗಳಿಗೆ ಕಾಲೇಜು ಹಂತದ ಚುನಾವಣೆಯು ನಡೆಯಿತು.
ವಿದ್ಯಾರ್ಥಿ ನಾಯಕ ಹುದ್ದೆಗೆ ಒಟ್ಟು ನಾಲ್ಕು ವಿದ್ಯಾರ್ಥಿಗಳ ಪೈಕಿ ಮೊಹಮ್ಮದ್ ಮಾಝಾಮಿಲ್ ನಾಯಕನಾಗಿ ಹಾಗೂ ಕಾರ್ಯದರ್ಶಿ ಹುದ್ದೆಗೆ ಒಟ್ಟು ನಾಲ್ಕು ವಿದ್ಯಾರ್ಥಿಗಳ ಪೈಕಿ ಆಕಾಶ್
ಸಾಲಿಯಾನ್ ಆಯ್ಕೆಯಾಗಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರಾಗಿ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಸ್ವಾತಿ ಬಿ ಎಸ್ ನಡೆಸಿಕೊಟ್ಟರು ಹಾಗೂ ಪ್ರಾಂಶುಪಾಲ ಎಚ್ ಕೆ ಪ್ರಕಾಶ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಣಕಶಾಸ್ತ್ರ ಉಪನ್ಯಾಸಕ ವಿಘ್ನೇಶ್ ಎಚ್ ನಿರೂಪಿಸಿದರು.

LEAVE A REPLY

Please enter your comment!
Please enter your name here