ರಾಜ್ಯದ ಟಾಪ್ 10 ಶ್ರೀಮಂತ ದೇವಾಲಯಗಳಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪ್ರಥಮ

0

ವಾರ್ಷಿಕ ಆದಾಯ 123.64 ಕೋಟಿ ರೂ. ವೆಚ್ಚ 63.77 ಕೋಟಿ ರೂ.

ಪುತ್ತೂರು: ಅತಿ ಹೆಚ್ಚು ಆದಾಯ ತರುವ ರಾಜ್ಯದ ಟಾಪ್ 10 ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ರಾಜ್ಯ ಮುಜರಾಯಿ ಇಲಾಖೆ ಬಿಡುಗಡೆ ಮಾಡಿದ್ದು ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮೊದಲನೇ ಸ್ಥಾನದಲ್ಲಿದೆ.

2022-23ರ ಅವಧಿಯಲ್ಲಿ ದೇವಾಲಯಗಳು ಗಳಿಸಿರುವ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚದ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ.ಕಡಬ ತಾಲೂಕಿನಲ್ಲಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿದೆ.

ಮೊದಲ ಸ್ಥಾನದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 2022-23ನೇ ಸಾಲಿನ ಆದಾಯ 123.64 ಕೋಟಿ ರೂ.ಆಗಿದ್ದು ವೆಚ್ಚ 63.77 ಕೋಟಿ ರೂ.ಗಳಾಗಿವೆ.ಉಳಿದಂತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆದಾಯ 59.47 ಕೋಟಿ ರೂ.,ವೆಚ್ಚ 33.32 ಕೋಟಿ ರೂ., ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು ಆದಾಯ 52.40 ಕೋಟಿ ರೂ.,ವೆಚ್ಚ 52.40 ಕೋಟಿ ರೂ.,ನಾಲ್ಕನೇ ಸ್ಥಾನದಲ್ಲಿರುವ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದ ಆದಾಯ 36.48 ಕೋಟಿ ರೂ.,ವೆಚ್ಚ 35.68 ಕೋಟಿ ರೂ.,ಐದನೇ ಸ್ಥಾನದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆದಾಯ 32.10 ಕೋಟಿ ರೂ.,ಆರನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಆದಾಯ 26.71 ಕೋಟಿ ರೂ.,ವೆಚ್ಚ 18. 74 ಕೋಟಿ ರೂ.,ಏಳನೇ ಸ್ಥಾನದಲ್ಲಿರುವ ಸವದತ್ತಿ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನದ ಆದಾಯ 22.52 ಕೋಟಿ ರೂ.ವೆಚ್ಚ 11.51 ಕೋಟಿ ರೂ.,ಎಂಟನೇ ಸ್ಥಾನದಲ್ಲಿರುವ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆದಾಯ 14 .55 ಕೋಟಿ ರೂ.,ವೆಚ್ಚ 13.02 ಕೋಟಿ ರೂ.,ಒಂಭತ್ತನೇ ಸ್ಥಾನದಲ್ಲಿರುವ ದೊಡ್ಡಬಳ್ಳಾಪುರ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆದಾಯ 12.25 ಕೋಟಿ ರೂ.,ವೆಚ್ಚ 7.40 ಕೋಟಿ ರೂ.ಹಾಗೂ ಹತ್ತನೇ ಸ್ಥಾನದಲ್ಲಿರುವ ಬೆಂಗಳೂರು ಶ್ರೀ ಬನಶಂಕರಿ ದೇವಸ್ಥಾನದ ಆದಾಯ 10.58 ಕೋಟಿ ರೂ.,ವೆಚ್ಚ 19.41 ಕೋಟಿ ರೂ.ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here