ಬಂಟ್ವಾಳ: ಮಳೆಯಿಂದ ಹಲವೆಡೆ ಹಾನಿ, ಕಂಟ್ರೋಲ್ ರೂಂ ಸ್ಥಾಪನೆ

0

ವಿಟ್ಲ: ಬಂಟ್ವಾಳ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಿಂದ ಹಲವೆಡೆ ಹಾನಿಗಳು ಸಂಭವಿಸಿವೆ. ಈಗಾಗಲೇ ತಾಲೂಕು ಕಚೇರಿಯಿಂದ ಪ್ರಕೃತಿ ವಿಕೋಪಗಳು ಎದುರಾದಾಗ ಸಂಪರ್ಕಿಸಲು ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಪಾಯಗಳ ವಿವರವನ್ನು ನೀಡಬಹುದು. ಯಾವುದೇ ತುರ್ತು ಸಂದರ್ಭದಲ್ಲಿ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 08255230202 ಮತ್ತು ಮೊಬೈಲ್ ಸಂಖ್ಯೆ 9632219920ಗೆ ಕರೆ ಮಾಡಬಹುದಾಗಿದೆ. ಪ್ರಾಕೃತಿಕ ವಿಕೋಪದಡಿಯಲ್ಲಿ ಸಂಭವಿಸಬಹುದಾದ ಹಾನಿಗಳ ನಿರ್ವಹಣೆಗೆ ಸಂಬಂಧಿಸಿ ಈ ಕಂಟ್ರೋಲ್ ರೂಮ್ ಕಾರ್ಯಾಚರಿಸುತ್ತದೆ ಎಂದು ತಹಸೀಲ್ದಾರ್ ಎಸ್.ಬಿ.ಕೂಡಲಗಿ ತಿಳಿಸಿದ್ದಾರೆ.

ವೀರಕಂಭ ಗ್ರಾಮದ ಗುಡ್ಡ ತೋಟ ಖಾನ ಎಂಬಲ್ಲಿ ರೇವತಿ ಎಂಬವರ ಮನೆ ಮೇಲೆ ಮರ ಬಿದ್ದು ಭಾಗಶ: ಹಾನಿಯಾಗಿದೆ. ಬಂಟ್ವಾಳ ಕಸಬಾ ಗ್ರಾಮದ ಅರಬ್ಬಿಗುಡ್ಡೆ ಮನೆ ನಿವಾಸಿ ಈಶ್ವರ ಮೂಲ್ಯ ರವರ ಪುತ್ರ ಜಯ ಕುಲಾಲ್‌ರವರ ಮನೆ ಮೇಲೆ ಜೂ.29ರಂದು ಮುಂಜಾನೆ ತೆಂಗಿನ ಮರ ಬಿದ್ದು ಮನೆಗೆ ಭಾಗಶಃ ಹಾನಿ ಆಗಿದೆ. ಘಟನೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ.

ಬಂಟ್ವಾಳ ಬಿ.ಸಿ.ರೋಡಿನ ಅಜ್ಜಿಬೆಟ್ಟು ನಾರಾಯಣ ಆಳ್ವರವರ ಪುತ್ರ ರವಿರಾಜ್ ಆಳ್ವ ರವರ ಮನೆ ಸಮೀಪ ಮಣ್ಣು ಜರಿದು ಮನೆಗೆ ಅಪಾಯವಾಗುವ ಸಂಭವ ಇರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ವಿಟ್ಲ ಕಸಬಾ ಗ್ರಾಮದ ಉಕ್ಕುಡ, ಕಲ್ಲುರ್ಟಿಯಡ್ಕ ಗೌರಿ ಯಾನೆ ಸರೋಜರವರ ಮನೆ ಛಾವಣಿ ಭಾಗಶಃ ಹಾನಿಯಾಗಿದೆ.

LEAVE A REPLY

Please enter your comment!
Please enter your name here