ವಿಟ್ಲದ ವೆಸ್ಟ್ ಕೋಸ್ಟ್ ಹೀರೋದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಫ್ಯಾಷನ್ ಪ್ಲಸ್ ದ್ವಿಚಕ್ರ ವಾಹನ ಬಿಡುಗಡೆ

0

5555 ರೂ. ಮುಂಗಡ ಪಾವತಿ -0% ಸಾಲ ಸೌಲಭ್ಯ – ಗ್ರಾಹಕರಿಗೆ ಕೊಡುಗೆಗಳ ಮಹಾಪೂರ

ವಿಟ್ಲ: ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಜಿಲ್ಲೆಯಾಧ್ಯಂತ ತನ್ನದೇ ಆದ ಛಾಪು ಮೂಡಿಸಿರುವ ಪ್ರತಿಷ್ಠಿತ ವೆಸ್ಟ್ ಕೋಸ್ಟ್ ಮೋಟರ್ಸ್ ನ ವಿಟ್ಲ ಶಾಖೆಯಲ್ಲಿ ನೂತನ ಮಾದರಿಯ ಫ್ಯಾಷನ್ ಪ್ಲಸ್ ಬೈಕ್ ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ವಿಟ್ಲದ ಬೈಕ್ ಪಾಯಿಂಟ್ ಗ್ಯಾರೇಜ್ ಮಾಲಕರಾದ ಮೋಹನ್ ಕುಮಾರ್ ಹಾಗೂ ವಿಟ್ಲದ ಲಿಯೋ ಗ್ಯಾರೇಜ್ ನ ಮಾಲಕರಾದ ಲಿಯೋ ರವರು ನೂತನ ಫ್ಯಾಶನ್ ಪ್ಲಸ್ ಬೈಕ್ ಅನ್ನು ಬಿಡುಗಡೆಗೊಳಿಸಿದರು. ಬಳಿಕ ಫ್ಯಾಶನ್ ಪ್ಲಸ್ ಬೈಕ್ ನ ಪ್ರಥಮ ಗ್ರಾಹಕರಿಗೆ ಅತಿಥಿಗಳು ಕೀ ಹಸ್ತಾಂತರ ಮಾಡಿದರು.
ಈ ಸಂದರ್ಭ ವೆಸ್ಟ್ ಕೋಸ್ಟ್ ಮೋಟಾರ್ಸ್ ಆಡಳಿತ ನಿರ್ದೇಶಕರಾದ ಮಹಮ್ಮದ್ ರಫೀಕ್ ಹಾಗೂ ಜಿ.ಎಂ ಸಂದೀಪ್ ಕುಮಾರ್ ಉಪಸ್ಥಿತರಿದ್ದರು.
ಕಳೆದ ಕೆಲ ವರುಷಗಳಿಂದ ವಿಟ್ಲದ ಮೇಗಿನ ಪೇಟೆಯಲ್ಲಿ ಹೀರೋ ದ್ವಿಚಕ್ರವಾಹನಗಳ ಮಾರಾಟ ಹಾಗೂ ಸರ್ವೀಸ್ ನಡೆಸುತ್ತಿರುವ ವೆಸ್ಟ್ ಕೋಸ್ಟ್ ಮೋಟರ್ಸ್ ಈ ಭಾಗದ ಜನರ ವಿಶ್ವಾಸನೀಯ ಸಂಸ್ಥೆಯಾಗಿದೆ. ಸದಾ ಒಂದಲ್ಲ ಒಂದು ಕೊಡುಗೆಗಳನ್ನು ನೀಡುತ್ತಾ ಜನಮಾನಸದಲ್ಲಿ ಚಿರಸ್ಥಾತಿಯಾಗಿರುವ ವೆಸ್ಟ್ ಕೋಸ್ಟ್ ಮೋಟರ್ಸ್ ಉತ್ತಮ ಸರ್ವೀಸ್ ನೀಡುವ ಮೂಲಕ ಜನಮನ್ನಣೆ ಗಳಿಸಿದೆ.

ಫ್ಯಾಷನ್ ಪ್ಲಸ್ ಬೈಕ್ ಲಾಂಚಿಂಗ್ ಕೊಡುಗೆ:
ಸಂಸ್ಥೆ ಫ್ಯಾಷನ್ ಪ್ಲಸ್ ಬೈಕ್ ನ ಬಿಡುಗಡೆ ಪ್ರಯುಕ್ತ ಗ್ರಾಹಕರಿಗೆ ಕೆಲವೊಂದು ಕೊಡುಗೆಗಳನ್ನು ನೀಡಲು ಮುಂದಾಗಿದೆ. 0% ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು. ಇಷ್ಟು ಮಾತ್ರವಲ್ಲದೆ ಹೆಲ್ಮೇಟ್, ರೈನ್ ಕೋಟ್ ಸಹಿತ ಕೆಲವೊಂದು ವಸ್ತುಗಳು ಉಚಿತವಾಗಿ ದೊರೆಯಲಿದೆ. 5555 ರೂಪಾಯಿ ಮುಂಗಡ ಪಾವತಿ ಮಾಡಿ ನಿಮ್ಮ ನೆಚ್ಚಿನ ವಾಹನವನ್ನು ಕೊಂಡೊಯ್ಯುವ ಸೌಲಭ್ಯವನ್ನು ಸಂಸ್ಥೆ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 8951420707 ಯನ್ನು ಸಂಪರ್ಕಿಸಬಹುದಾಗಿದೆ‌.

LEAVE A REPLY

Please enter your comment!
Please enter your name here