ಶಾಂತಿಗೋಡು ಅಂಚೆ ಕಚೇರಿಯ ಅಂಚೆ ವಿತರಕ ಬೊಳ್ಳಮೆ ಆನಂದರಿಗೆ ಬೀಳ್ಕೊಡುಗೆ

0

ಪುತ್ತೂರು: ಶಾಂತಿಗೋಡು ಅಂಚೆಕಚೇರಿಯಲ್ಲಿ 46ವರ್ಷ ಅಂಚೆ ವಿತರಕರಾಗಿ ಕಾರ್ಯನಿರ್ವಹಿಸಿ ಜೂ.24 ರಂದು ಸೇವಾ ನಿವೃತ್ತಿ ಹೊಂದಿದ ಶಾಂತಿಗೋಡು ಬೊಳ್ಳಮೆ ಆನಂದ ಗೌಡ ರವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ದರ್ಬೆ ಉಪ ಅಂಚೆ ಕಛೇರಿಯಲ್ಲಿ ಸಹಾಯಕ ಅಂಚೆ ಅಧೀಕ್ಷಕ ಎ.ಜಿ ಮರಡಿಯರ ಅಧ್ಯಕ್ಷತೆಯಲ್ಲಿ ಜೂ.28ರಂದು ನಡೆಯಿತು.


ದರ್ಬೆಯ ಅಂಚೆಪಾಲಕ ರಾಜೇಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನರಿಮೊಗ್ರುವಿನ ಪೋಸ್ಟ್‌ಮಾಸ್ಟರ್ ಸಂತೋಷ್ ಎಂ ಶುಭಹಾರೈಸಿದರು. ಸಮಾರಂಭದಲ್ಲಿ ಆನಂದ ಬಿ ಹಾಗೂ ಪತ್ನಿ ಲೀಲಾವತಿ ಬಿ ಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಆನಂದರರು ಸೇವಾನಿಷ್ಠೆ ಮತ್ತು ಕಾರ್ಯಾನುಭವವನ್ನು ಹಂಚಿಕೊಂಡರು. ದರ್ಬೆ ಅಂಚೆ ಕಚೇರಿಯ ಸಿಬ್ಬಂದಿಗಳು, ಪೋಸ್ಟ್‌ಮಾಸ್ಟರ್‌ಗಳಾದ ಕೂಸಪ್ಪ ಬಿ ಶಾಂತಿಗೋಡು, ಸಂತೋಷ್ ಎಂ ನರಿಮೊಗರು, ಸೀತಾರಾಮ ಪೂಜಾರಿ ಕಾಯಿಮಣ, ಜಯಾನಂದ ಮುಂಡೂರು, ದೇವಿಕಾ ಸವಣೂರು, ಅನಿರುಧ್ ಮೊಟ್ಟೆತ್ತಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here