ಹನುಮಗಿರಿ:ಶಾಂತದುರ್ಗಾ ಸಂಪರ್ಕ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ- ಸಾರ್ವಜನಿಕರ ಆಗ್ರಹ

0

ಬಡಗನ್ನೂರು: ಹನುಮಗಿರಿ – ಶಾಂತದುರ್ಗಾ ಸಂಪರ್ಕ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ  ಬಡಗನ್ನೂರು ಭಾಗದಲ್ಲಿ ಮುಖ್ಯ ರಸ್ತೆಯಿಂದ ಕವಲು ರಸ್ತೆಯಾಗಿ ಮೈಂದನಡ್ಕ-  ಚೆಕ್ಕಿತ್ತಡಿ ಗ್ರಾ.ಪಂ ಸಂಪರ್ಕ  ರಸ್ತೆ ಹಾದುಹೋಗಿದೆ.  ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣಕ್ಕಾಗಿ ಚಿಕ್ಕ ಗಾತ್ರದ  ಮೋರಿ ತೆಗೆದು ದೊಡ್ಡ ಮೋರಿ ಹಾಕಿ ರಸ್ತೆ ಡಾಮರೀಕರಣ ಮಾಡಲಾಗಿದೆ. ಆದರೆ ಮೋರಿಯ ಎರಡು ಭಾಗದಲ್ಲಿ ಕಟ್ಟೆ ನಿರ್ಮಾಣ ಮಾಡದೆ ಇರುವುದರಿಂದ ರಸ್ತೆಯ ಮೇಲೆ ಮಳೆ ನೀರು ಹರಿದು ರಸ್ತೆ ಕೊಚ್ಚಿ ಕೊಂಡು ಹೋಗಿ ಮೈಂದನಡ್ಕ- ಚೆಕ್ಕಿತ್ತಡಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿದೆ.ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಗಮನಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಚೆಕ್ಕಿತ್ತಡಿ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹನುಮಗಿರಿ ಶಾಂತದುರ್ಗಾ ರಸ್ತೆ ಕಾಮಗಾರಿ ಕಳಪೆ:  ಸಾರ್ವಜನಿಕ ಅಕ್ರೋಶ 
ಹನುಮಗಿರಿ- ಶಾಂತದುರ್ಗಾ ಧಾರ್ಮಿಕ ಕೇಂದ್ರ ಕೊಂಡಿದ್ದು ಅಭಿವೃದ್ಧಿ ಕಾಮಗಾರಿ ತೀರಾ ಕಲಪೆ ಗುಣಮಟ್ಟದಾಗಿದೆ.ಎಂದು ಸಾರ್ವಜನಿಕರು  ಅಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯುದಕ್ಕೂ ಸಮಸ್ಯಗಳ ಸುರಿಮಳೆ, ರಸ್ತೆ ತಿರುವು ಭಾಗದಲ್ಲಿ ಘನ ವಾಹನ ಸಂಚಾರಕ್ಕೆ ತೀರಾ ಸಂಕಷ್ಟ ಸ್ಥಿತಿ ಹೊಂದಿದೆ ಮುಂದೆ ಧಾರ್ಮಿಕ ಕೇಂದ್ರಗಳ ಸಂಪರ್ಕ ಅನುಕೂಲಕ್ಕಾಗಿ ಈ ಭಾಗದಲ್ಲಿ ಸರ್ಕಾರಿ ಬಸ್ ಹಾಕುವ ಬಗ್ಗೆ ಪ್ರಸ್ತಾವನೆ ಬಂದಲ್ಲಿ  ತಿರುವು ಭಾಗದಲ್ಲಿ ಬಸ್ ಸಂಚಾರಕ್ಕೆ ತೀರಾ ಕಷ್ಟಕರ ಪರಿಸ್ಥಿತಿ ಉಂಟಾಗಬಹುದು. ರಸ್ತೆ ಅಗಲೀಕರಣಕ್ಕೆ ಭೂಮಾಲೀಕರಲ್ಲಿ ಮಾತನಾಡಿ ಜಾಗ ಬಿಟ್ಟು ಕೊಟ್ಟರು ಕೆಲವೊಂದು ಭಾಗದಲ್ಲಿ ಅಗಲೀಕರಣ ಆಗಿಲ್ಲ ಭವಿಷ್ಯದ ಚಿಂತನೆ ಮಾಡದೆ ಗುತ್ತಿಗೆದಾರರು ರಸ್ತೆ ನಿರ್ಮಾಣ ಮಾಡಿದ್ದಾರೆ ಕೆಲವೊಂದು ಭಾಗದಲ್ಲಿ ರಸ್ತೆ ಅಗಲೀಕರಣಗೊಂಡರು ಮೋರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಗಲ ಕಿರಿದಾಗಿ ನಿರ್ಮಾಣ ಮಾಡಲಾಗಿದೆ. ಮಳೆ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥಿತ ರೀತಿಯಲ್ಲಿ ಚರಂಡಿ ನಿರ್ಮಾಣ ಆಗಿಲ್ಲ ಒಟ್ಟಿನಲ್ಲಿ ಕಾಮಗಾರಿ ತೀರಾ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here