ನೆಲ್ಯಾಡಿ: ನೆಲ್ಯಾಡಿ ಪೇಟೆಯಲ್ಲಿರುವ ನೈನಾನ್ ಕಾಂಪ್ಲೆಕ್ಸ್ನ ನೆಲಮಹಡಿಯಲ್ಲಿ ಮಿರಾಕಲ್ ಜನರಲ್ ಸರ್ವೀಸಸ್ ಜು.1ರಂದು ಬೆಳಿಗ್ಗೆ ಶುಭಾರಂಭಗೊಂಡಿತು.
ಉದನೆ ಸಂತ ತಾಮಸ್ ಪೊರೇನಾ ಚರ್ಚ್ನ ಧರ್ಮಗುರು ರೆ.ಫಾ.ಸಿಬಿ ಪನಚಿಕ್ಕಲ್ರವರು ಉದ್ಘಾಟಿಸಿ ಆಶೀರ್ವಾದ ವಿಧಿ ವಿಧಾನ ನೆರವೇರಿಸಿದರು. ನೈನಾನ್ ಕಾಂಪ್ಲೆಕ್ಸ್ನ ಮಾಲಕ, ನಿವೃತ್ತ ಯೋಧ ಒ.ಜೆ.ನೈನಾನ್, ನೆಲ್ಯಾಡಿ ತಾಮ್ಸನ್ ಎಲೆಕ್ಟ್ರಾನಿಕ್ಸ್ನ ಮಾಲಕ ಮನೋಜ್, ಸಲಿನ್ ಸೇರಿದಂತೆ ನೆಲ್ಯಾಡಿಯ ಉದ್ಯಮಿಗಳು, ಬೆಥನಿ ಐಟಿಐನ ಸಿಬ್ಬಂದಿಗಳು, ಉಪನ್ಯಾಸಕರು ಸಹಿತ ಹಲವು ಮಂದಿ ಗಣ್ಯರು ಭೇಟಿ ನೀಡಿ ಶುಭಹಾರೈಸಿದರು.
ಸಂಸ್ಥೆಯ ಕಾರ್ಯದರ್ಶಿ ಸುನೀಲ್ ಜೋಸೆಫ್ರವರು ಸ್ವಾಗತಿಸಿ ಮಾತನಾಡಿ, ನಮ್ಮ ಸಂಸ್ಥೆಯು ಕಳೆದ 8 ವರ್ಷಗಳಿಂದ ನೈನಾನ್ ಕಾಂಪ್ಲೆಕ್ಸ್ನ 2ನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದು ಗ್ರಾಹಕರಿಗೆ ಆನ್ಲೈನ್ ಸೇವೆ ನೀಡುತ್ತಿತ್ತು. ಇದೀಗ ಗ್ರಾಹಕರ ಅನುಕೂಲಕ್ಕಾಗಿ ಸಂಸ್ಥೆಯನ್ನು ನೈನಾನ್ ಕಾಂಪ್ಲೆಕ್ಸ್ನ ನೆಲ ಮಹಡಿಗೆ ಸ್ಥಳಾಂತರಿಸಿ ಶುಭಾರಂಭಗೊಳಿಸಿದ್ದೇವೆ. ಇದೀಗ ನಮ್ಮಲ್ಲಿ ಕಲರ್ ಮತ್ತು ಬ್ಲ್ಯಾಕ್ & ವೈಟ್ ಪ್ರಿಂಟ್, ಲ್ಯಾಮಿನೇಶನ್, ಸ್ಕ್ಯಾನಿಂಗ್, ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್, ರೆಸ್ಯೂಮ್ ಬರವಣಿಗೆ, ಸರಕಾರಿ ಸೇವೆಗಳಾದ ಪಿಎಫ್ ಹಿಂಪಡೆಯುವಿಕೆ, ಹೊಸ ಪಾನ್ಕಾರ್ಡ್, ವೋಟರ್ ಐಡಿ ಅಪ್ಡೇಟ್, ಐಡಿ, ಆಧಾರ್ ಕಾರ್ಡ್, ಉದ್ಯೋಗ ಅರ್ಜಿಗಳು, ಸ್ಕಾಲರ್ಶಿಪ್, ಆರ್ಟಿಸಿ, ಜಾತಿ ಮತ್ತು ಆದಾಯ ಸರ್ಟಿಫಿಕೇಟ್ಗೆ ಸಂಬಂಧಿಸಿದ ಸೇವೆಗಳು ಸಿಗಲಿದೆ. ಬಸ್, ರೈಲು, ವಿಮಾನ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯೂ ಇದೆ. ಅಲ್ಲದೇ ಅಮೆರಿಕಾ, ಕೆನಡಾ, ಬ್ರಿಟನ್ನಲ್ಲಿ ಉನ್ನತ ವ್ಯಾಸಾಂಗಕ್ಕೆ ಹಾಗೂ ಜಾರ್ಜಿಯಾ, ರಷ್ಯಾದಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು. ಅಮೆರಿಕಾ, ದುಬೈ, ಸೌದಿ ಅರೇಬಿಯಾ, ಸಿಂಗಾಪೂರ, ಮಲೇಷ್ಯಾಗೆ ವೀಸಾ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು. ಸಂಸ್ಥೆಯ ಮುಖ್ಯಸ್ಥ ಸಿಬಿ ಜೋಸೆಫ್ ವಂದಿಸಿದರು.