ಮಾಜಿ ಶಾಸಕರ ಸಾಧನೆ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ-ಮಠಂದೂರು ಕಾಲೆಳೆದ ಶಾಸಕ ಅಶೋಕ್‌ ಕುಮಾರ್‌ ರೈ

0

ಪುತ್ತೂರು: ಹೊಸತಾಗಿ ಶಾಸಕನಾದ ಕಾರಣ ವಿಷಯ ಪ್ರಸ್ತಾಪಿಸುವಾಗ ಎಡವಿರಬಹುದು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ ಆದರೆ ಮಾಜಿ ಶಾಸಕ ಸಂಜೀವ ಮಠಂದೂರು ಮಾಡಿದ ಸಾಧನೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಅವರೇನು ಮಾಡಿದ್ದಾರೆಂದು ಕ್ಷೇತ್ರದ ಜನರಿಗೆ ತಿಳಿದಿದೆ.ನಾನು ಧ್ವೇಷದ ರಾಜಕೀಯ ಮಾಡುವುದಿಲ್ಲ ಪ್ರೀತಿಯ ರಾಜಕಾರಣ ಮಾತ್ರ ನನಗೆ ತಿಳಿದಿದೆ. ಎಲ್ಲವೂ ತಿಳಿದಿರುವ ಮಾಜಿ ಶಾಸಕರ ಸಾಧನೆ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಅಂತಹ ಸಾಧನೆ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿರುವ ಶಾಸಕ ಅಶೋಕ್ ಕುಮಾರ್ ರೈ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಶಾಸಕರು ಫಸಲ್ ಭೀಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಯಾವುದೆಂದು ತಿಳಿಯದೆ ಗೊಂದಲಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂಬ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಪುತ್ತೂರು ಹೊರವಲಯದ ಪುರುಷರ ಕಟ್ಟೆಯಲ್ಲಿ ನಡೆದ ಕಾರ್ಯಕರ್ತರಿಗೆ ಅಭಿನಂದನೆ ಮತ್ತು ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

LEAVE A REPLY

Please enter your comment!
Please enter your name here