ಪುತ್ತೂರು: ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಮತ್ತು ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕ ಸಂಘ ಪುತ್ತೂರು ದ.ಕ.ಜಿಲ್ಲೆಯ ಇದರ ವತಿಯಿಂದ ಜು.2ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಯ್ಯಪ್ಪ ಗುಡಿ, ನವಗ್ರಹ ಗುಡಿ, ನಾಗನಗುಡಿ ಹಾಗೂ ಪರಿಸರದಲ್ಲಿ ಸ್ವಚ್ಥತಾ ಕಾರ್ಯಕ್ರಮ ನಡೆಯಿತು.
ಸಂಘದ ಜಿಲ್ಲಾಧ್ಯಕ್ಷ ಕೆ.ಜಯರಾಮ ಕುಲಾಲ್, ಗೌರವ ಸಲಹೆಗಾರ ಎಂ.ಶೇಷಪ್ಪ ಕಲಾಲ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಮುಕ್ವೆ, ಉಪಾಧ್ಯಕ್ಷ ಮೋಹನ್ ಆಚಾರ್ಯ ಮತ್ತು ಈಶ್ವರ ನಾಯ್ಕ ಮತ್ತು ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಸೇಡಿಯಾಪು, ಜೊತೆ ಕಾರ್ಯದರ್ಶಿ ವೆಂಕಟೇಶ್ ಸೊನ್ನಜೆ ಮತ್ತು ಎರಡು ಸಂಘಟನೆಯ ಹಲವಾರು ಸದಸ್ಯರು ಉಪಸ್ಥಿತರಿದ್ದರು.
ಉಚಿತ ಬಸ್ ಯೋಜನೆ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆ :
ಸ್ವಚ್ಛತಾ ಕಾರ್ಯಕ್ರಮದ ಮೊದಲು ಅನುರಾಗ ವಠಾರದಲ್ಲಿ ಸಂಘದ ಮಾಸಿಕ ಸಭೆ ನಡೆಯಿತು. ಸಭೆಯಲ್ಲಿ ಸರಕಾರದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿರುವ ವಿದ್ಯಾರ್ಥಿ ವೇತನ ವಿಳಂಭವಾಗುತ್ತಿರುವ ಮತ್ತು ಸರಕಾರದ ಉಚಿತ ಬಸ್ ಯೋಜನೆಯಿಂದ ಕಾರ್ಮಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಸಂಘದ ಸದಸ್ಯರು ಪ್ರಸ್ತಾಪಿಸಿದರು. ಈ ಕುರಿತು ಸರಕಾರದ ಗಮನಕ್ಕೆ ತರುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.