ನೆಕ್ಕರೆ: ಆಕ್ಟಿವಾ-ಪಿಕಪ್ ಡಿಕ್ಕಿ, ಸವಾರನಿಗೆ ಗಾಯ

0

ರಾಮಕುಂಜ: ಆಕ್ಟಿವಾ ಹೊಂಡಾ ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಆಕ್ಟಿವಾ ಸವಾರ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆಲಂಕಾರು ಗ್ರಾಮದ ನೆಕ್ಕರೆ ಎಂಬಲ್ಲಿ ಜು.2ರಂದು ಬೆಳಿಗ್ಗೆ ನಡೆದಿದೆ.


ಆಕ್ಟಿವಾ ಸವಾರ ಅಣ್ಣು ಯಾನೆ ಅಶೋಕ ಗಾಯಗೊಂಡವರಾಗಿದ್ದಾರೆ. ಅಶೋಕ ಅವರು ತನ್ನ ಆಕ್ಟಿವಾ ಹೊಂಡಾ(ಕೆಎ 70 ಜೆ3862)ವನ್ನು ಹಳೆನೇರೆಂಕಿ ಕಡೆಯಿಂದ ಚಲಾಯಿಸಿಕೊಂಡು ನೆಕ್ಕರೆಯಲ್ಲಿ ರಾಜ್ಯ ರಸ್ತೆಗೆ ಬಂದು ಉಪ್ಪಿನಂಗಡಿ ಕಡೆಗೆ ಹೋಗುತ್ತಿರುವಾಗ ಉಪ್ಪಿನಂಗಡಿ ಕಡೆಯಿಂದ ಆಲಂಕಾರು ಕಡೆಗೆ ಬರುತ್ತಿದ್ದ ಪಿಕಪ್ ವಾಹನದ (ಕೆಎ 21 ಸಿ2250) ನಡುವೆ ಡಿಕ್ಕಿ ಸಂಭವಿಸಿದೆ. ಪಿಕಪ್ ಚಾಲಕ ಬಶೀರ್ ಪಿಕಪ್ ವಾಹನವನ್ನು ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಸ್ಕೂಟರ್‌ಗೆ ಡಿಕ್ಕಿ ಉಂಟುಮಾಡಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಆಕ್ಟಿವಾ ಸವಾರ ಅಣ್ಣು ಯಾನೆ ಅಶೋಕ್‌ರವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಉಮೇಶ್, ಪುರುಷೋತ್ತಮ, ಮನೋಹರರವರು ಗಾಯಾಳುವನ್ನು ಉಪಚರಿಸಿ ಚಿಕೆತ್ಸೆ ಬಗ್ಗೆ 108 ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಘಟನೆ ಕುರಿತಂತೆ ಕೋಡಿಲ ನಿವಾಸಿ ವಸಂತಿ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ 62/2023 ಕಲಂ:279.337 ಐಪಿಸಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here