ಶಾಂತಿನಗರ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ

0

ನೆಲ್ಯಾಡಿ: ಗುರುಗಳಲ್ಲೇ ಶ್ರೇಷ್ಠರಾದ ವೇದವ್ಯಾಸರ ಜನ್ಮದಿನವಾದ ಗುರುಪೂರ್ಣಿಮೆಯ ದಿನದಂದು ಗೋಳಿತ್ತಟ್ಟು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಂದ ಶಾಲೆಯ ಶಿಕ್ಷಕರಿಗೆ ಗುರುವಂದನೆ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಮುಖ್ಯಗುರು ಗಣಪಯ್ಯ ಭಟ್‌ರವರು ಮಾತನಾಡಿ, ಗುರುಗಳೆಂದರೆ ಶಾಲೆಗಳಲ್ಲಿ ಶಿಕ್ಷಣ ನೀಡುವವರು ಮಾತ್ರವಲ್ಲ. ಜೀವನದಲ್ಲಿ ನಮಗೆ ಒಳ್ಳೆಯ ಹಾದಿಯನ್ನು ತೋರಿಸುವ ಸರ್ವರೂ ಗುರುಗಳೇ ಎಂದು ತಿಳಿಸಿ ವ್ಯಾಸ ಭಾರತದ ಪ್ರಮುಖ ಘಟನೆಗಳನ್ನು ಉದಾಹರಿಸಿದರು.


ಮುಖ್ಯಶಿಕ್ಷಕ ಪ್ರದೀಪ್ ಬಾಕಿಲ ಅವರು ಮಾತನಾಡಿ, ಗುರುಪೂಣಿಮೆಯು ಆಷಾಢ ಮಾಸದ ಪುಣ್ಯದಿನವಾಗಿದ್ದು ಈ ದಿನ ಪ್ರಾರ್ಥಿಸಿದ ಎಲ್ಲಾ ಅಂಶಗಳು ಫಲಪ್ರದವಾಗುವುದು ಎಂಬ ನಂಬಿಕೆಯಿದ್ದು ನಮ್ಮನ್ನು ಈ ಹಂತಕ್ಕೆ ಬೆಳೆಸಿರುವ ಸಮಸ್ತ ಗುರುವರ್ಯರಿಗೆ ವಂದನೆ ಸಲ್ಲಿಸಲು ಸೂಕ್ತವಾದ ದಿನ ಎಂದರು.


ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಪುರುಷೋತ್ತಮ ಗುರುಂಪು ಅವರು ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾದ ಈ ಕಾರ್ಯವನ್ನು ಶಾಲೆಯಲ್ಲಿ ಆಯೋಜಿಸಿರುವುದು ಅತ್ಯುತ್ತಮ ಬೆಳವಣಿಗೆ ಎಂದರು. ಸಹಶಿಕ್ಷಕ ಮಂಜುನಾಥ ಮಣಕವಾಡ ಹಾಗೂ ಶಿಕ್ಷಕಿ ತಾರಾ ಶುಭಹಾರೈಸಿದರು.


ಎಲ್ಲಾ ವಿದ್ಯಾರ್ಥಿಗಳು ಗುರುಗಳ ಪಾದ ಮುಟ್ಟಿ ನಮಸ್ಕರಸಿ ಆಶೀರ್ವಾದ ಪಡೆದರು. ಸಂಪೂರ್ಣವಾಗಿ ವಿದ್ಯಾರ್ಥಿಗಳೇ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಚೈತ್ರಾ ಹಾಗೂ ಮಾನ್ವಿ ಪ್ರಾರ್ಥಿಸಿದರು. ವಿದ್ಯಾರ್ಥಿ ನಾಯಕ ಮನೀಷ್ ಸ್ವಾಗತಿಸಿ, ಉಪನಾಯಕಿ ಮಾನ್ಯ ವಂದಿಸಿದರು. ಬಳಿಕ ಶಿಕ್ಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಶಿಕ್ಷಕಿಯರಾದ ಪ್ರಮೀಳಾ, ವೀಕ್ಷಿತಾ, ಅಡುಗೆ ಸಿಬ್ಬಂದಿ ಮೀನಾಕ್ಷಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here