





ಪುತ್ತೂರು: ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇದರ ನಿಕಟ ಪೂರ್ವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಇದೀಗ 2023-24ನೇ ಸಾಲಿನ ಅಧ್ಯಕ್ಷೆಯಾಗಿ ಲೆರಿಸ್ಸಾ ಪ್ರಿನ್ಸಿ ಮಸ್ಕರೇನಸ್ ಆಯ್ಕೆಯಾಗಿದ್ದಾರೆ.



ಜೊತೆಗೆ 317D ಲಯನ್ಸ್ ಜೆಲ್ಲೆಯ ಜಿಲ್ಲಾ ಲಿಯೋ ಕ್ಯಾಬಿನೆಟ್ ಕೋಶಾಧಿಕಾರಿ ಯಾಗಿಯೂ ನೇಮಕಗೊಂಡಿದ್ದಾರೆ. ಇವರು ಶ್ರೀನಿವಾಸ್ ಕಾಲೇಜಿನಲ್ಲಿ ಬಿ ಫಾರ್ಮಾ ಪದವಿ ವಿದ್ಯಾರ್ಥಿನಿಯಾಗಿದ್ದು ಸೈಂಟ್ ವಿಕ್ಟರ್ಸ್, ಅಂಬಿಕಾ ವಿದ್ಯಾಲಯದ ಹಿರಿಯ ವಿದ್ಯಾರ್ಥಿನಿ. ಲಯನ್ಸ್ VI ರ ಪ್ರಾಂತೀಯ ಅಧ್ಯಕ್ಷರಾದ ಲ್ಯಾನ್ಸಿ ಮಸ್ಕರೇನ್ಹಸ್ ಮತ್ತು ಉಪ್ಪಿನಂಗಡಿ ಪದವಿ ಕಾಲೇಜು ಉಪನ್ಯಾಸಕಿ ಲಿಯೋ ಜಿಲ್ಲಾ ಎಡ್ವೈಸರ್ ಪ್ರಿಯಲತಾ ಡಿ ಸಿಲ್ವಾರವರ ಪುತ್ರಿ.











