ಪುತ್ತೂರು: ಇಲ್ಲಿನ ದರ್ಬೆ ಜಂಕ್ಷನ್ ನಲ್ಲಿ ನಗರಸಭೆಯಿಂದ ಪರವಾನಿಗೆ ಪಡೆದು ನಿರ್ಮಿಸಲಾಗಿದ್ದ ಬಸ್ ಶೆಲ್ಟರ್ ಗೆ ಅಳವಡಿಸಲಾಗಿದ್ದ ಫ್ಲೆಕ್ಸ್ ಗಳಿಗೆ ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪುತ್ತೂರು ನಗರ ಸಭೆಯಿಂದ ಪರವಾನಿಗೆ ಪಡೆದು ಪೇಟೆಯ ಕೆಲವೆಡೆ ಹೈಟೆಕ್ ಬಸ್ ಶೆಲ್ಟರ್ ಅನ್ನು ನಿರ್ಮಿಸಲಾಗಿತ್ತು. ಈ ಪೈಕಿ ದರ್ಬೆಯಲ್ಲಿ ನಿರ್ಮಿಸಲಾಗಿರುವ ಬಸ್ ಶೆಲ್ಟರ್ ಗೆ ಅಳವಡಿಸಿದ ಫ್ಲೆಕ್ಸ್ ಗಳಿಗೆ ಕಿಡಿಗೇಡಿಗಳು ಹಾನಿಗೊಳಿಸಿದ್ದರು. ಈ ಬಗ್ಗೆ ಕೌಶಲ್ ಮೀಡಿಯಾದ ಸಿಬ್ಬಂದಿ ಭರತ್ ರವರು ಪುತ್ತೂರು ನಗರಸಭೆ ಹಾಗೂ ಪುತ್ತೂರು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ದೊಡ್ಡ ದೊಡ್ಡ ಪೇಟೆ ಪಟ್ಟಣಗಳಲ್ಲಿ ನಿರ್ಮಿಸುವಂತಹ ಮಾದರಿಯ ಬಸ್ಸು ಶೆಲ್ಟರ್ ಗಳನ್ನು ನಮ್ಮಲಿಯೂ ನಿರ್ಮಿಸಲಾಗಿದ್ದು, ಇದು ಪ್ರಯಾಣಿಕರಿಗೆ ಸಹಕಾರಿಯಾಗಿತ್ತು. ಇದೀಗ ಅದಕ್ಕೆ ಕಿಡಿಗೇಡಿಗಳು ಹಾನಿಗೊಳಿಸಿರುವುದು ನಾಗರೀಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಮಾತ್ರವಲ್ಲದೆ ಈ ಬಗ್ಗೆ ಇಲಾಖೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ನಾಗರೀಕರು ಆಗ್ರಹಿಸಿದ್ದಾರೆ.