ನಿಡ್ಪಳ್ಳಿ; ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಎಂಬಲ್ಲಿ ನೂತನ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸುವುದೆಂದು ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
ನೂತನ ಸಂಘ ಸ್ಥಾಪಿಸುವ ಬಗ್ಗೆ ಚರ್ಚಿಸಿ ನಿರ್ಣಯಿಸುವ ಬಗ್ಗೆ ಜು.1 ರಂದು ಕಕ್ಕೂರು ವಿನಾಯಕ ನಗರ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈಯವರ ಅಧ್ಯಕ್ಷತೆಯಲ್ಲಿ ಗ್ರಾಮಸ್ಥರ ಸಭೆ ನಡೆಯಿತು.
ದ.ಕ.ಜಿಲ್ಲಾ ಕೇಂದ್ರ ಸೇವಾ ಸಹಕಾರ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹಾಗೂ ದ.ಕ.ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ಇವರು ಜಂಟಿಯಾಗಿ ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ಸಂಘ ರಚನೆ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ.ಪಿ ಸಭೆಯ ನಿರ್ಣಯಗಳನ್ನು ದಾಖಲಿಸಿದರು.ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಪಾರ್ವತಿ ಲಿಂಗಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಲಿಂಗಪ್ಪ ಗೌಡ ಪಂಬೆಜಾಲು ಶ್ರೀ ಸಿದ್ದಿವಿನಾಯಕ ದೇವರಿಗೆ ಆರತಿ ಬೆಳಗಿ ಸಂಘದ ಶ್ರೇಯೋಭಿವೃದ್ದಿಗೆ ಪ್ರಾರ್ಥನೆ ಸಲ್ಲಿಸಿದರು.
ಕಕ್ಕೂರು ಕೇಂದ್ರ ಸ್ಥಾನ
ಕಕ್ಕೂರನ್ನು ಕೇಂದ್ರ ಸ್ಥಾನವಾಗಿರಿಸಿಕೊಂಡು ಸಂಘ ಕಾರ್ಯಾಚರಿಸಲು ನಿರ್ಣಯಿಸಿ ಕಕ್ಕೂರು, ಡೆಮ್ಮಂಗರ, ಆನಡ್ಕ, ತೋಟದ ಮೂಲೆ, ಕೂವೆಂಜ, ನಾಕಪ್ಪಾಡಿ, ಮೇಲಿನ ತಲಪ್ಪಾಡಿ, ಮೇಲಿನ ನುಳಿಯಾಲು, ಕೊಂತಿಮೂಲೆ, ಕೋಡಿ , ನೆಲ್ಲಿತ್ತಡ್ಕ ವ್ಯಾಪ್ತಿಯನ್ನು ಸಂಘಕ್ಕೆ ಸೇರಿಸುವುದೆಂದು ನಿರ್ಣಯಿಸಲಾಯಿತು.
ಸುಷ್ಮಾ, ಸ್ವಾತಿಕಾ ಭಟ್ ಪ್ರಾರ್ಥಿಸಿ, ಜಯಪ್ರಕಾಶ್ ರೈ ಚೆಲ್ಯಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿಕ ಅಚ್ಯುತ ಭಟ್ ಕಕ್ಕೂರು ವಂದಿಸಿದರು. ಲಕ್ಷ್ಮೀನಾರಾಯಣ ರೈ ಡೆಮ್ಮಂಗರ ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂದಿರದ ಕಾರ್ಯದರ್ಶಿ ಸುರೇಂದ್ರ ಕಕ್ಕೂರು ಸಹಕರಿಸಿದರು. ಗಣೇಶ ರೈ ಆನಡ್ಕ, ಸನತ್ ಕುಮಾರ್ ರೈ ತೋಟದ ಮೂಲೆ, ದಯಾನಂದ ರೈ ನುಳಿಯಾಲು, ಪ್ರೇಮಲತಾ ಜೆ ರೈ ಆನಡ್ಕ, ಲಿಂಗಪ್ಪ ಗೌಡ ಕಕ್ಕೂರು,ರಾಧಾಕೃಷ್ಣ ಭಟ್ ಕಕ್ಕೂರು,ಜಲಜಾಕ್ಷಿ ಕೋಡಿ ಅತಿಥಿಗಳಿಗೆ ಪುಷ್ಪಗುಚ್ಚ ನೀಡಿದರು.
ಸಂಘಕ್ಕೆ ಪ್ರವರ್ತಕರ ನೇಮಕ;
ಶ್ರೀದೇವಿಯವರನ್ನು ಮುಖ್ಯ ಪ್ರವರ್ತಕರನ್ನಾಗಿ ಹಾಗೂ ರಜಿತಾ.ಕೆ, ಸವಿತಾ, ಪ್ರೀತಿಕಾ ರೈ, ಪ್ರೇಮಲತಾ ಜೆ.ರೈ, ನಳಿನಿ.ಬಿ, ಶ್ರೀದೇವಿ, ನವೀನ ಡಿ ರೈ, ಲಲಿತಾ, ಗಿರಿಜಾ, ಅನ್ನಪೂರ್ಣ, ರಾಜೇಶ್ವರಿ, ಕುಸುಮಾವತಿ, ರವಿಕಲಾ ಒಟ್ಟು ಹದಿಮೂರು ಮಂದಿಯನ್ನು ಪ್ರವರ್ತಕರನ್ನಾಗಿ ಆರಿಸಲಾಯಿತು. ಶಾರದಾ ಕಕ್ಕೂರು ಇವರನ್ನು ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು.