ಪುತ್ತೂರು: ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಮಕ್ಕಳಿಗೆ ವಿದ್ಯಾರ್ಥಿಗಳಲ್ಲಿ ಹಲವು ರೀತಿಯ ಪಠ್ಯೇತರ ಚಟುವಟಿಕೆಗಳ ಕಲಿಕೆಯೊಂದಿಗೆ ಈಗಿನಿಂದಲೇ ಆತ್ಮವಿಶ್ವಾಸವನ್ನು ಬೆಳೆಸಿ, ವ್ಯಕ್ತಿತ್ವ ವಿಕಸನಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ “ಚೇತನ” – ತಜ್ಞರೊಂದಿಗೆ ಸಂವಹನ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಡಾ|ಅನಿಲ.ಡಿ. ಶೆಟ್ಟಿ ಮಾತನಾಡಿ ಆತ್ಮವಿಶ್ವಾಸದಿಂದ ವೇದಿಕೆಯಲ್ಲಿ ನಿಂತು ತಮ್ಮ ವಿಷಯ ಜ್ಞಾನದೊಂದಿಗೆ ಸ್ವರಗಳ ಏರಿಳಿತದಿಂದ ವೀಕ್ಷಕರ ಮನ ಸೆಳೆಯುವಂತೆ ಮಾಡುವ ಭಾಷಣ ಕಲೆಯನ್ನು ಯಾವ ರೀತಿ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಬಹುದು ಎಂಬುವುದರ ಕುರಿತು ಕಾರ್ಯಾಗಾರವನ್ನು ನಡೆಸಿದರು. ಶಾಲಾ ಪ್ರಾಂಶುಪಾಲೆ ಸಿಂಧೂ ವಿ. ಜಿ ಹಾಗೂ ಉಪ ಪ್ರಾಂಶುಪಾಲೆ ಹೇಮಾವತಿ. ಎಮ್. ಎಸ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಕೆ ಜೆ. ತ್ರಿಶಾಲ್ ಕುಮಾರ್ ನಿರೂಪಿಸಿ, ಕುಮಾರಿ ಸಿರಿ. ಜಿ. ಶೆಣೈ ವಂದಿಸಿದರು.