ಸಿ.ಎ. ಅಂತಿಮ ಪರೀಕ್ಷೆಯಲ್ಲಿ ನೀಮಾ ಫೆರ್ನಾಂಡಿಸ್ ತೇರ್ಗಡೆ

0

ಪುತ್ತೂರು: ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಎಕೌಂಟೆಂಟ್ಸ್ ಆಫ್ ಇಂಡಿಯಾ ಇವರು 2023ರ ಮೇ ತಿಂಗಳಲ್ಲಿ ನಡೆಸಿದ ಅಂತಿಮ ಸಿ.ಎ. ಪರೀಕ್ಷೆಯಲ್ಲಿ ಉಪ್ಪಿನಂಗಡಿ ಗಾಂಧಿ ಪಾರ್ಕ್ ನಿವಾಸಿ, ಪ್ರಸ್ತುತ ಮಂಗಳೂರಿನಲ್ಲಿ ವಾಸವಿರುವ ನೀಮಾ ಫೆರ್ನಾಂಡಿಸ್ ರವರು ಉತ್ತೀರ್ಣಗೊಂಡಿರುತ್ತಾರೆ.


ನೀಮಾ ಫೆರ್ನಾಂಡೀಸ್ ರವರು ತನ್ನ ಪಿಯುಸಿ ತನಕದ ವಿದ್ಯಾಭ್ಯಾಸವನ್ನು ಮಂಗಳೂರಿನ ಸೈಂಟ್ ಆಗ್ನೆಸ್ ವಿದ್ಯಾಸಂಸ್ಥೆಯಿಂದ ಪಡೆದಿದ್ದು, ಬಿಕಾಂ ಪದವಿಯನ್ನು ಸಿ.ಎ.ಕಲಿಯುತ್ತಿರುವಾಗಲೇ ಬೆಸೆಂಟ್ ವಿದ್ಯಾಸಂಸ್ಥೆಯಿಂದ ಪಡೆದಿರುತ್ತಾರೆ. ಬಿ.ಎಸ್.ಎನ್.ಎಲ್ ಇದರ ನಿವೃತ್ತ ಅಧಿಕಾರಿಯಾದ ಕಿಶೋರ್ ಫೆರ್ನಾಂಡಿಸ್(ಪುತ್ತೂರು ಡೊನ್ ಬೊಸ್ಕೊ ಕ್ಲಬ್ ನ ಹಿರಿಯ ಅಜೀವ ಸದಸ್ಯ) ಮತ್ತು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಇದರ ಹಿರಿಯ ಸಹಾಯಕರಾಗಿರುವ ಶ್ರೀಮತಿ ಹಿಲ್ಡಾ ರೊಡ್ರಿಗಸ್ ಇವರ ಸುಪುತ್ರಿ.

LEAVE A REPLY

Please enter your comment!
Please enter your name here