ವಸತಿ ಯೋಜನೆ ಅನುದಾನ ಬಿಡುಗಡೆಗೆ ಕಲಿಯುಗ ಸೇವಾ ಸಮಿತಿ ಮನವಿ

0

ಪುತ್ತೂರು: ವಸತಿ ರಹಿತರಿಗೆ, ಸರಕಾರ ನೀಡುತ್ತಿರುವ ವಸತಿ ಯೋಜನೆಗಳ ಅನುದಾನಗಳು ಸರಿಯಾಗಿ ಬಿಡುಗಡೆಯಾಗದೆ ಜನ ತೊಂದರೆ ಪಡುತ್ತಿರುವ ಬಗ್ಗೆ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಚಿವರಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.

ನಗರ ಪ್ರದೇಶ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಮಂಜೂರುಗೊಂಡಿರುವ ವಸತಿ ಯೋಜನೆಗಳು ಅನೇಕ ಇವೆ. ಕೆಲವುದಕ್ಕೆ ಒಂದು ಹಂತದ ಅನುದಾನ ಮಾತ್ರ ಬಿಡುಗಡೆಯಾಗಿದೆ, ಕೆಲವು ವಸತಿ ಯೋಜನೆಗಳ ಮಂಜೂರಾತಿ ಪತ್ರಗಳು ಸಿಕ್ಕಿ ವರ್ಷಗಳು ಕಳೆದರೂ ಹಣ ಬಿಡುಗಡೆಯಾಗಿಲ್ಲ. ಜನ ಸಾಲಮಾಡಿ ಒಂದು ಹಂತದ ಕಾಮಗಾರಿ ನಡೆಸಿ ಸರಕಾರದ ಹಣಕ್ಕಾಗಿ ಕಾಯುವಂತಾಗಿದೆ. ಮನೆಗಳೇ ಇಲ್ಲದೆ ಕಷ್ಟಪಡುತ್ತಿರುವ ಅನೇಕ ಕುಟುಂಬಗಳಿವೆ. ಆದರೆ ಅನುದಾನಗಳು ಸರಿಯಾದ ಸಮಯದಲ್ಲಿ ಬಿಡುಗಡೆ ಆಗದೆ ತೊಂದರೆಗಳಾಗಿದೆ. ಈ ಕುರಿತು ಆದ್ಯತೆ ಮೇರೆಗೆ ಕ್ರಮ ಕೈಗೂಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

LEAVE A REPLY

Please enter your comment!
Please enter your name here