ಅಡಿಕೆ, ಕಾಳು ಮೆಣಸಿಗೆ ಬೆಳೆ ವಿಮೆ ಮಂಜೂರು ಮಾಡಿಸಿದ ಶಾಸಕ ಅಶೋಕ್ ಕುಮಾರ್ ರೈ ಯವರಿಗೆ ಅಭಿನಂದನೆಗಳು- ಎಚ್. ಮಹಮ್ಮದ್ ಅಲಿ

0

ಪುತ್ತೂರು: ರಾಜ್ಯ ಬಿಜೆಪಿ ಸರಕಾರದ ರಾಜ್ಯ ಮಟ್ಟದ ಬೆಳೆ ವಿಮೆ ಸಮನ್ವಯ ಸಮಿತಿಯು ಅಡಿಕೆ ಹಾಗೂ ಕಾಳು ಮೆಣಸಿಗೆ ಸಂಬಂಧಿಸಿದಂತೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಅನುಮೋದನೆ ನೀಡದೆ ಕೈ ಬಿಟ್ಟಿತ್ತು, ಇದರಿಂದ ಪುತ್ತೂರು ಸೇರಿದಂತೆ ದ.ಕ ಹಾಗೂ ಉಡುಪಿ ಜಿಲ್ಲೆಯ ಕೃಷಿಕರು ಬೆಳೆ ವಿಮೆಯಿಂದ ವಂಚಿತರಾಗಿದ್ದರು. ಕೃಷಿಕರಿಗೆ ಆಗಿರುವ ತೊಂದರೆಯನ್ನು ತಿಳಿದ ಶಾಸಕ ಅಶೋಕ್ ಕುಮಾರ್ ರೈಯವರು, ರಾಜ್ಯ ಸರಕಾರದ ಸಂಬಂಧಪಟ್ಟ ಸಚಿವರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಜಿಲ್ಲೆಯ ಅಡಿಕೆ ಹಾಗೂ ಕಾಳು ಮೆಣಸು ಬೆಳೆಯುವ ಕೃಷಿಕರಿಗೆ ಬೆಳೆ ವಿಮೆ ಕೊಡಿಸಲೇಬೇಕೆಂದು ಒತ್ತಡ ಹಾಕಿದ್ದರು.

ಇದೀಗ ಸರಕಾರ ತನ್ನ ಆದೇಶ ಸಂಖ್ಯೆ ತೋಇ 676ತೋ ಇ ವಿ 2022 ಬೆಂಗಳೂರು ದಿನಾಂಕ:06-07-2023 ರಂತೆ 2023-24 ನೇ ಸಾಲಿಗೆ ಹವಾಮಾನ ಅಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಅಡಿಕೆ ಹಾಗೂ ಕಾಳು ಮೆಣಸಿಗೆ ವಿಮೆ ಸೌಲಭ್ಯ ನೀಡಲು ಆದೇಶ ಹೊರಡಿಸಿರುತ್ತದೆ. ಈ ಕುರಿತು ಸಂಕಷ್ಟದಲ್ಲಿದ್ದ ರೈತರಿಗೆ ಪರಿಹಾರ ಸಿಕ್ಕಿದಂತಾಗಿದೆ. ಕೈಬಿಟ್ಟಿದ್ದ ವಿಮೆ ಯೋಜನೆಯನ್ನು ಮಂಜೂರು ಮಾಡಲು ಪ್ರಯತ್ನಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರಿಗೆ ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್. ಮಹಮ್ಮದ್ ಅಲಿಯವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here