ಕಾವು: ಅಡಿಕೆ ಮತ್ತು ಕಾಡುತ್ಪತ್ತಿಗಳ ಮಾರಾಟ ಮತ್ತು ಖರೀದಿಯ ನೂತನ ಸಂಸ್ಥೆ ” ಶಿಶಿರ ಎಂಟರ್ ಪ್ರೈಸಸ್” ಕಾವು ಆಳ್ವಾ ಕಾಂಪ್ಲೆಕ್ಸ್ ನಲ್ಲಿ ಇಂದು (ಜು.10) ಶುಭಾರಂಭಗೊಂಡಿತು.
ಮಾಜಿ ವಿಧಾನಸಭಾ ಸದಸ್ಯ ಅಣ್ಣಾ ವಿನಯಚಂದ್ರ ನೂತನ ಮಳಿಗೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಹನುಮಗಿರಿ ಪಂಚಮುಖಿ ದೇವಸ್ಥಾನದ ಧರ್ಮದರ್ಶಿ ನನ್ಯ ಅಚ್ಚುತ್ತ ಮೂಡಿತ್ತಾಯ, ಕ್ಯಾಂಪೋ ಸಂಸ್ಥೆಯ ನಿವೃತ್ತ ಅಧಿಕಾರಿ ರಾಧಾಕೃಷ್ಣ ಬೋರ್ಕರ್, ದ.ಕ ಜಿಲ್ಲಾ ಪಂಚಾಯತ್ ನ ಮಾಝಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ತಾಲೂಕು ಪಂಚಾಯತ್ ನ ಮಾಜಿ ಅಧ್ಯಕ್ಷ ರಾಧಕೃಷ್ಣ ಬೋರ್ಕರ್, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಲೊಕೇಶ್ ಚಾಕೋಟೆ, ಪ್ರಗತಿಪರ ಕೃಷಿಕ ಮಹಾಲಿಂಗೇಶ್ವರ ಭಟ್ ಪಳನೀರು, ಆಳ್ವಾ ಕಾಂಪ್ಲೆಕ್ಸ್ ನ ಮಾಲಕರಾದ ವಿಠಲ ಆಳ್ವ ಕಲಾಯಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಸಂಸ್ಥೆಯ ಮಾಲಕ ಶಿವರಾಮ ನಾಯಕ್ ಮಠತ್ತಡ್ಕ ಎಲ್ಲರನ್ನು ಸ್ವಾಗತಿಸಿದರು. ಕಾವು ಸುತ್ತಮುತ್ತಲಿನ ಕೃಷಿಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಶಿಶಿರ್ ಎಂಟರ್ ಪ್ರೈಸಸ್ ಎಲ್ಲಾ ರೀತಿಯಲ್ಲೂ ಸಹಕಾರಿಯಾಗಿದೆ.