ಪಡುಕುತ್ಯಾರು ಆನೆಗುಂದಿ ಕಾಳಹಸ್ತೇಂದ್ರ ಶ್ರೀಯವರ ಚಾತುರ್ಮಾಸ್ಯ- ಪುತ್ತೂರಿನಿಂದ ವಿಶ್ವಕರ್ಮ ಸಮಾಜದಿಂದ ಹೊರೆಕಾಣಿಕೆ

0

ಪುತ್ತೂರು: ಪಡುಕುತ್ಯಾರು ಕಟಪಾಡಿ ಆನೆಗುಂದಿ ಮಹಾಸಂಸ್ಥಾನದ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಮಹಾಸ್ವಾಮೀಜಿಯವರ ಶೋಭಕೃತ್ ನಾಮ ಸಂವತ್ಸರದ 19ನೇ ಚಾತುರ್ಮಾಸ್ಯದ ಪ್ರಯುಕ್ತ , ಪುತ್ತೂರಿನಿಂದ ವಿಶ್ವಕರ್ಮ ಸಮಾಜ ಬಾಂಧವರಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೇರಿ, ಬಳಿಕ ಹೊರೆಕಾಣಿಕೆ ಮೆರವಣಿಗೆ ಹೊರಡಿತು. ಬಳಿಕ ಪಡುಕುತ್ಯಾರು ಕಟಪಾಡಿ ಆನೆಗುಂದಿ ಮಹಾಸಂಸ್ಥಾನದಲ್ಲಿ ಗುರುಗಳ ಪಾದಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಗುರುಸೇವಾ ಪರಿಷತ್ ಪುತ್ತೂರು ವಲಯದ ಅಧ್ಯಕ್ಷರಾದ ಪುರುಷೋತ್ತಮ ಆಚಾರ್ಯ ಕೊಕ್ಕಡ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.

ಸಂಗೀತ ಗಾನ ಸಂಭ್ರಮ:
ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳ ಚಾತುರ್ಮಾಸ್ಯ ವೃತಾಚರಣೆ ಕಾರ್ಯಕ್ರಮದಲ್ಲಿ ಪ್ರಯುಕ್ತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here