ಪುತ್ತೂರು: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಪೋಷಕರ ಸಭೆಯು ಪುತ್ತೂರು ಎಂ ಸುಂದರರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜು.8ರಂದು ನಡೆಯಿತು.
ಸಂಚಾಲಕ ಹೇಮನಾಥ ಶೆಟ್ಟಿ ಕಾವು ಅಧ್ಯಕ್ಷತೆ ವಹಿಸಿ,ಉದ್ಘಾಟಿಸಿ,ರಕ್ಷಕ ಶಿಕ್ಷಕ ಸಂಘದಲ್ಲಿ ಪೋಷಕರ ಸಂಪೂರ್ಣ ಸಹಕಾರ ಅಗತ್ಯ. ಇವತ್ತು ಎಲ್ಲರಿಗೂ ಶಿಕ್ಷಣ ಬೇಕಿದೆ. ಶಿಕ್ಷಣದಲ್ಲಿ ಯಾವುದೇ ಕೊರತೆ ಆಗದೇ ಶಿಸ್ತು ಬದ್ದವಾಗಿಬೇಕು. ಪಠ್ಯದ ಜೊತೆಗೆ ಸಹಪಠ್ಯಗಳನ್ನು ಒದಗಿಸಿಕೊಟ್ಟು ನಿರಂತರವಾಗಿ ಕಲಿಕೆ ಪ್ರೋತ್ಸಾಹ ನೀಡುವಂತಿರಬೇಕು ಎಂದು ಹೇಳಿದರು.
ಅತಿಥಿಯಾಗಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ.ಶ್ರೀಪ್ರಕಾಶ್ ವಿದ್ಯಾರ್ಥಿಗಳ ಪೋಷಕರಿಗೆ ತಮ್ಮ ಮಕ್ಕಳ ಜವಾಬ್ದಾರಿಗಳ ಬಗ್ಗೆ ತಿಳಿಯಪಡಿಸಲು ಹಾಗೂ ಮಕ್ಕಳ ವರ್ತನೆಯ ಬಗ್ಗೆ ಮನೆಯಲ್ಲಿ ನಿಗಾ ವಹಿಸಲು ತಿಳಿಸಿದರು.
2023-24ನೇ ಸಾಲಿನ ರಕ್ಷಕ-ಶಿಕ್ಷಕ ಸಮಿತಿ, ಮಕ್ಕಳ ಸುರಕ್ಷಾ ಸಮಿತಿ, ತಾಯಂದಿರ ಸಮಿತಿ ಮತ್ತು ಪ್ರಧಾನ ಮಂತ್ರಿ ಪೋಷಣಾ ಅಭಿಯಾನ ಸಮಿತಿಗಳಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವೃಂದ ಹಾಗೂ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಎ ಸ್ವಾಗತಿಸಿ,ವಿದ್ಯಾರ್ಥಿನಿ ಅವನಿಯವರ ಪ್ರಾರ್ಥಿಸಿ, ಶಿಕ್ಷಕಿ ಸುನೀತಾ ಎಂ ವಂದಿಸಿದರು. ಶಿಕ್ಷಕಿ ಪವಿತ್ರಾ ಮತ್ತು ಚಿತ್ರಕಲಾ ಎಸ್ ಕಾರ್ಯಕ್ರಮವನ್ನು ನಿರ್ವಹಿಸಿದರು.