ಕಬಕ ಮರ್ಹೂಮ್ ಮಾಸ್ಟರ್ ಪಝಲ್ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರ

0

ಪುತ್ತೂರು: ಪಝಲ್ ಮೆಮೊರೇಬಲ್ ಮೆಡಿಕಲ್ ಹೆಲ್ಪ್ ಲೈನ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಬಕ ಹಾಗೂ ಬ್ಲಡ್‌ ಹೆಲ್ಪ್ ಲೈನ್ ಕರ್ನಾಟಕ ಇದರ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತ ನಿಧಿ ಮಂಗಳೂರು ಇವರ ಸಹಬಾಗಿತ್ವ ದಲ್ಲಿ ಮರ್ಹೂಮ್ ಮಾಸ್ಟರ್ ಪಝಲ್ ಸ್ಮರಣಾರ್ಥ ಸಾರ್ವಜನಿಕ ರಕ್ತ ದಾನ ಶಿಬಿರ ಜು,9 ಕಬಕ ಜಂಕ್ಷನ್ ನಲ್ಲಿರುವ ಬಾಲಿಯೂರ್ ದೋಹ ಬಿಲ್ಡಿಂಗ್ ನಲ್ಲಿ ನಡೆಯಿತು.

ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ನಾಸಿರ್ ಮಾಡಾವು ವಹಿಸಿದ್ದರು. ಖತೀಬ್ ಉಸ್ತಾದ್ ಹಮೀದ್ ಬಾಖವಿ, ಫಝಲ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಫಾರೂಕ್ ಕಬಕ, ಶಾಕೀರ್ ಅಳಕೆಮಜಲು, ಹನೀಫ್ ಬಗ್ಗುಮೂಲೆ, ಬ್ಲಡ್ ಹೆಲ್ಪ್ ಲೈನ್ ನ ವ್ಯವಸ್ಥಾಪಕರಾದ ಸಿರಾಜ್ ಪರ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

ಶೌಕತ್ ಕಬಕ ಕಾರ್ಯಕ್ರಮ ನಿರೂಪಿಸಿ ಉಸ್ಮಾನ್ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮ ದಲ್ಲಿ ಹಲವಾರು ಮಹಿಳೆಯರು ಭಾಗವಹಿಸಿ ರಕ್ತ ದಾನ ಮಾಡಿದರು ಕಬಕ ಗ್ರಾ.ಪಂ. ಸದಸ್ಯ ರಾದ ಉಮ್ಮರ್ ಫಾರೂಕ್ ರವರ ಮಗು ಪಝಲ್ ಎರಡು ವರ್ಷಗಳ ಹಿಂದೆ ನಿಧನ ಹೊಂದಿದ್ದು ಮಗುವಿನ ಸ್ಮರಣಾರ್ಥ ಪಝಲ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸುವ ಮೂಲಕ ನಿರಂತರ ಇಂತಹ ಜನಸೇವಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಶಿಬಿರದಲ್ಲಿ 57 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

LEAVE A REPLY

Please enter your comment!
Please enter your name here