





ಕಾಣಿಯೂರು: ಬೆಳಂದೂರು ಗ್ರಾಮದ ಅಬೀರ ಕೆಳಗಿನಮನೆ ನಿವಾಸಿ ದಿ. ಶೇಷಪ್ಪ ಗೌಡರ ಪುತ್ರ ದಯಾನಂದ (34) ಅವರು ಜು 11ರಂದು ನಿಧನಹೊಂದಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದಿದ್ದ ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ. ಒಬ್ಬನೇ ಪುತ್ರರಾಗಿರುವ ಇವರು ಮನೆಗೆ ಆಧಾರವಾಗಿದ್ದರು.
ಮೃತರು ತಾಯಿ ಸುಶೀಲ, ಪತ್ನಿ ಭವ್ಯ, ಪುತ್ರಿಯರಾದ ಯಶಸ್ವಿ, ರಿಯಾಶಿ, ಸಹೋದರಿಯರಾದ ರತ್ನಾವತಿ, ಜಯಂತಿ, ರಂಜಿತಾರವರನ್ನು ಅಗಲಿದ್ದಾರೆ.










