




ಪುತ್ತೂರು: ನರಿಮೊಗರು ಗ್ರಾ.ಪಂ, ಶ್ರೀ ವಿಷ್ಣು ಯುವಕ ಮಂಡಲ ಆನಡ್ಕ ಹಾಗೂ ಸ್ಥಳೀಯರ ಸಹಭಾಗಿತ್ವದಲ್ಲಿ ಆನಡ್ಕ-ಪುರುಷರಕಟ್ಟೆ ಮಧ್ಯದ ರಸ್ತೆ ಬದಿಯಲ್ಲಿ ಬೆಳೆದಿದ್ದ ಹುಲ್ಲು, ಗಿಡಗಂಟಿ, ಪೊದರುಗಳನ್ನು ತೆರವುಗೊಳಿಸಿ ಸ್ವಚ್ಚಗೊಳಿಸಲಾಯಿತು. ನರಿಮೊಗರು ಗ್ರಾ.ಪಂ ಸದಸ್ಯರಾದ ದಿನೇಶ ಗೌಡ ಮಜಲು ಮತ್ತು ತಾರನಾಥ ಎಂ ಮರಕ್ಕೂರು ಸಹಿತ ಸ್ಥಳೀಯರು ಶ್ರಮದಾನದಲ್ಲಿ ಭಾಗವಹಿಸಿದ್ದರು.









