ಕಡಬ: ಜಾಗದ ವಿಚಾರದಲ್ಲಿ ತಂಡದಿಂದ ಹಲ್ಲೆ ಆರೋಪ – ಮಹಿಳೆ, ಪುಟಾಣಿ ಮಗು ಸಹಿತ ಮೂವರು ಆಸ್ಪತ್ರೆಗೆ ದಾಖಲು

0

ಕಡಬ: ಮಗುವನ್ನು ಔಷಧಿಗೆಂದು ಅಟೋದಲ್ಲಿ ಬರುತ್ತಿದ್ದ ವೇಳೆ ಕಾರಿನಲ್ಲಿ ಬಂದ ತಂಡವೊಂದು ರಿಕ್ಷಾದಿಂದ ಎಳೆದು ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳೆ, ಪುಟಾಣಿ ಮಗು ಸಹಿತ ಮೂವರು ಕಡಬ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಜು.11ರಂದು ಕಲ್ಲುಗುಡ್ಡೆಯಲ್ಲಿ ನಡೆದಿದೆ. ಜಾಗದ ವಿಚಾರದಲ್ಲಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಆರ್ಲ ನಿವಾಸಿ, ಸೈನಿಕ ಅಝೀಝ್ ಅವರ ಪತ್ನಿ ಫೌಝಿಯಾ, ಬಾಲಕ ಐಮಾನ್, ಫೌಝಿಯಾ ಅವರ ತಂದೆ ಅಬ್ಬಾಸ್ ಅವರು ಪುಟಾಣಿ ಮಗುವಿನ ಜತೆಯಲ್ಲಿ ಕಡಬ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಜು.10ರಂದು ರಾತ್ರಿ ವೇಳೆ ಆದಂ ಎಂಬವರ ಅಟೋದಲ್ಲಿ ಫೌಝಿಯ, ಅಬ್ಬಾಸ್, ಐಮಾನ್ ಅವರು ಮಗುವಿಗೆ ಔಷಧಿಗೆಂದು ಮನೆಯಿಂದ ಬರುತ್ತಿದ್ದ ವೇಳೆ ಕಾರಿನಲ್ಲಿ ಆಗಮಿಸಿ ನೆರೆಮನೆಯವರಾದ ಮಜಿದ್, ಅಶ್ರಫ್, ಅಬ್ಬಾಸ್ ಎಂಬವರು ರಿಕ್ಷಾದಿಂದ ಇವರನ್ನು ಎಳೆದು ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ದಾಖಲಾದ ಅಬ್ಬಾಸ್, ಪೌಝಿಯ ಅವರುಗಳು ಆರೋಪಿಸಿದ್ದಾರೆ. ಜಾಗದ ವಿಚಾರದಲ್ಲಿ ಈ ಹಲ್ಲೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಆಸ್ಪತ್ರೆಗೆ ದಾಖಲಾದವರ ಹೇಳಿಕೆಯನ್ನು ಪೋಲಿಸರು ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಸಂಜೆಯ ವೇಳೆ ಪೌಝಿಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರ ಸಹೋದರ ಆದಂ ಅವರು ತಿಳಿಸಿದ್ದಾರೆ.
.

LEAVE A REPLY

Please enter your comment!
Please enter your name here