ಬಿಜೆಪಿಯ ದ್ವೇಷ ರಾಜಕಾರಣವನ್ನು ಜನರು ಗಮನಿಸಿದ್ದಾರೆ – ಎಂ.ಬಿ.ವಿಶ್ವನಾಥ ರೈ
ಪುತ್ತೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ಅನೂರ್ಜಿತ ಗೊಳಿಸಲು ಹುನ್ನಾರ ನಡೆಯುತ್ತಿದೆ ಎಂದು ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಪುತ್ತೂರು, ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪುತ್ತೂರು ಗಾಂಧಿಕಟ್ಟೆ ಎದುರು ಒಂದು ದಿನ ಮೌನ ಪ್ರತಿಭಟನೆ ಜು.12ರಂದು ಬೆಳಗ್ಗಿನಿಂದ ಆರಂಭಗೊಂಡಿದೆ.
ಕಾಂಗ್ರೆಸ್ ನಾಯಕರು ಬಾಯಿಗೆ ಬಟ್ಟೆ ಸುತ್ತಿ ಪ್ರತಿಭಟನೆ ನಡೆಸಿದರು. ಆರಂಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಅವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆಗೆ ಚಾಲನೆ ನೀಡಿದರು.
ಬಿಜೆಪಿಯ ದ್ವೇಷ ರಾಜಕಾರಣವನ್ನು ಜನರು ಗಮನಿಸಿದ್ದಾರೆ:
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಸ್ವಾಗತಿಸಿ ಮಾತನಾಡಿದರು. ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ನಾಶ ಮಾಡುತ್ತಿದೆ. ರಾಹುಲ್ ಗಾಂಧಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅವರ ಸದಸ್ಯತ್ವ ರದ್ದುಗೊಳಿಸಿರುವುದು ಖಂಡನೀಯ. ಬಿಜೆಪಿಯ ದ್ವೇಷ ರಾಜಕಾರಣವನ್ನು ದೇಶದ ಜನರು ಗಮನಿಸುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತಕ್ಕೆ ಬೇಸತ್ತು ರಾಜ್ಯದ ಜನರು ತಕ್ಕ ಪಾಠ ಕಲಿಸಿದ್ದಾರೆ.
ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಜನರು ಒಗ್ಗಟ್ಟಾಗಿ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಮನೆಗೆ ಕಳುಹಿಸಲಿದ್ದಾರೆ ಎಂದರು. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಅವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ, ಕೃಷ್ಣಪ್ರಸಾದ್ ಅಳ್ವ, ಕಾಂಗ್ರೆಸ್ ಮುಖಂಡರಾದ ಶ್ರೀಪ್ರಸಾದ್, ಮುರಳೀದರ ಮಠಂತಬೆಟ್ಟು, ಕಾವು ಹೇಮನಾಥ ಶೆಟ್ಟಿ, ಪ್ರಸಾದ್ ಕೌಶಲ್ ಶೆಟ್ಟಿ, ಮೌರೀಸ್ ಮಸ್ಕರೇನಸ್, ವೇದನಾಥ ಸುವರ್ಣ, ನಗರಸಭೆ ಮಾಜಿ ಸದಸ್ಯ ಅನ್ವರ್ ಖಾಸಿಂ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಪ್ರಶಾಂತ್ ಮುರ, ಕಿರಣ್ ಪ್ಲವರ್‌ನ ಕಲೀಲ್, ಜಗನ್ನಾಥ, ಬೊಲೋಡಿ ಚಂದ್ರಹಾಸ ರೈ, ಲ್ಯಾನ್ಸಿ ಮಸ್ಕರೇನಸ್, ರಮೇಶ್ ರೈ ಡಿಂಬ್ರಿ, ಮಹಾಲಿಂಗ ನಾಯ್ಕ್ , ಹಾರಿಸ್ ಸಂಟ್ಯಾರ್, ಗಿರೀಶ್ ಗೋಶ್ವಾಲ್ಕರ್, ಜಯಪ್ರಕಾಶ್ ಬದಿನಾರು, ಶರೀಫ್ ಬಲ್ನಾಡ್, ವಲೇರಿಯನ್ ಡಯಾಸ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್, ರಂಜಿತ್ ಬಂಗೇರ, ರಾಮ ಮೇನಾಲ, ಪ್ರವೀಣ್ ಚಂದ್ರ ಆಳ್ವ, ವಿಕ್ಟರ್ ಪಾಯಸ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕ ಸಿದ್ದಿಕ್ ಸುಲ್ತಾನ್, ಅಶೋಕ್ ಪೂಜಾರಿ, ಕಲಾವಿದ ಕೃಷ್ಣಪ್ಪ, ಗಿರೀಶ್ ಗೋಲ್ವಾಕರ್, ಸೂಪಿ ಬಪ್ಪಳಿಗೆ, ಕಲಾವತಿ ಪಟ್ಲಡ್ಕ, ಕೆ ಎ ಆಲಿ, ಆಲಿ ಕುಂಞಿ ಕೊರಂಗಿಲ, ಆಶ್ರಫ್, ವಿಠಲ್ ನಾಯಕ್, ಶಾರದಾ ಅರಸು, ರಶೀದ್ ಮುರ, ಬಾಶೀಶಾ ಕೆಮ್ಮಾರ, ಆದಂ ಕುಂಞಿ ಕಲ್ಲರ್ಪೆ, ಎಮ್ ಬಿ ಇಬ್ರಾಹಿಂ, ರವೂಪ್ ಸಾಲ್ಮರ, ಸಲಾಂ ಸಂಪ್ಯ, ಬಶೀರ್, ಪ್ರಕಾಶ್ ಪುರುಷರಕಟ್ಟೆ, ಅಶೋಕ್ ಬೊಳ್ನಾಡು, ಶಶಿಕಿರಣ್ ರೈ ಸಹಿತ ಹಲವಾರು ಮಂದಿ ಪ್ರತಿಭಟನೆಯ ಆರಂಭದಲ್ಲಿ ಉಪಸ್ಥಿತರಿದ್ದರು.