ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ಶಾಲಾ ಸಂಸತ್ತಿನ ಉದ್ಘಾಟನೆ

0

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ ಇಲ್ಲಿನ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭವು ಜು.11ರಂದು ನಡೆಯಿತು.

ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಪುತ್ತೂರು ಇದರ ಅಧ್ಯಕ್ಷರು, ತಾ.ಪಂ.ಮಾಜಿ ಸದಸ್ಯರೂ ಆದ ಭಾಸ್ಕರ ಇಚ್ಲಂಪಾಡಿಯವರು ಉದ್ಘಾಟಿಸಿ ಮಾತನಾಡಿ, ನಾಯಕತ್ವದ ಗುಣಕ್ಕೆ ಶಿಸ್ತು ಮತ್ತು ಸಂಸ್ಕಾರ ಅಗತ್ಯ. ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ ಜೊತೆಗೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿ ಶುಭ ಹಾರೈಸಿದರು. ಮತ ಪತ್ರವಿಲ್ಲದೆ ಆಧುನಿಕ ವಿಧಾನವಾದ evm app ಮೂಲಕ ಮತ ಚಲಾಯಿಸಿ ಶಾಲಾ ನಾಯಕರನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿದರು. ಶಾಲಾ ನಾಯಕನಾಗಿ ಚೇತನ್ ಮತ್ತು ಉಪನಾಯಕನಾಗಿ ಮದ್ವಿತ್ ಆಯ್ಕೆಯಾದರು. ವಿದ್ಯಾರ್ಥಿ ನಾಯಕ ಅತಿಥಿಗಳ ಆಶೀರ್ವಾದ ಪಡೆದು ದೀಪವನ್ನು ಪಡೆದು ತನ್ನ ಜೊತೆ ಜವಾಬ್ದಾರಿ ಹೊತ್ತಿರುವ ಉಪನಾಯಕರಿಗೆ ದೀಪವನ್ನು ಹಸ್ತಾಂತರಿಸುವ ಮೂಲಕ ಭಾವನಾತ್ಮಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಯ್ಕೆಗೊಂಡ ವಿದ್ಯಾರ್ಥಿ ನಾಯಕರುಗಳಿಗೆ ಪ್ರಭು ಶ್ರೀರಾಮಚಂದ್ರನ ಹೆಸರಿನಲ್ಲಿ ಪ್ರತಿಜ್ಞೆಯನ್ನು ಶಾಲಾ ಮುಖ್ಯೋಪಾಧ್ಯಾಯ ಗಣೇಶ ವಾಗ್ಲೆ ಬೋಧಿಸಿದರು.

ಆಡಳಿತ ಸಮಿತಿಯ ಸದಸ್ಯರಾದ ಬಾಲಕೃಷ್ಣ ಬಾಣಜಾಲು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಆಡಳಿತ ಸಮಿತಿಯ ಕೋಶಾಧಿಕಾರಿ ಜಿನ್ನಪ್ಪ ಪೂವಾಜೆ, ಶಾಲಾ ಮುಖ್ಯೋಪಾಧ್ಯಾಯ ಗಣೇಶ್ ವಾಗ್ಲೆ ಉಪಸ್ಥಿತರಿದರು. ವಿನ್ಯಶ್ರೀ ಮಾತಾಜಿ ಸ್ವಾಗತಿಸಿದರು. ಯಶಸ್ವಿನಿ ವಂದಿಸಿದರು. ಅನಿಲ್ ಅಕ್ಕಪಾಡಿ ಕಾರ್ಯಕ್ರಮ ನಿರೂಪಿಸಿದರು. ಕೋಮಲಾಂಗಿ ಮಾತಾಜಿ ಕಾರ್ಯಕ್ರಮ ಸಂಘಟಿಸಿದರು.

LEAVE A REPLY

Please enter your comment!
Please enter your name here