ಡಾ.ನಝೀರ್ ಅಹಮ್ಮದ್ ಕ್ಲಿನಿಕ್‌ನಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣಾ ಶಿಬಿರ ಉದ್ಘಾಟನೆ, ಉಚಿತ ಮಧುಮೇಹ, ನ್ಯೂರೋಪತಿ ತಪಾಸಣೆ

0


ಜನರ ಆರೋಗ್ಯ ದೃಷ್ಟಿಯಿಂದ ಇಂತಹ ಶಿಬಿರಗಳು ಶ್ಲಾಘನೀಯ-ಜೈರಾಜ್ ಭಂಡಾರಿ

ಪುತ್ತೂರು: ಕಳೆದ ಏಳು ವರ್ಷಗಳಿಂದ ರೊಟೇರಿಯನ್ ಡಾ.ನಝೀರ್ ಅಹಮ್ಮದ್‌ರವರ ಡಾ.ನಝೀರ್ ಅಹಮದ್ ಡಯಾಬೆಟ್ಸ್ ಸೆಂಟರ್‌ನಲ್ಲಿ ಥೈರಾಯಿಡ್ ಗ್ರಂಥಿಯ ತಪಸಣಾ ಶಿಬಿರವು ಪ್ರತಿ ತಿಂಗಳು ಆಯೋಜಿಸಿಕೊಂಡು ಜನಪರ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಬಹಳಷ್ಟು ಮಂದಿ ಶಿಬಿರಾರ್ಥಿಗಳು ಇದರ ಉಪಯೋಗವನ್ನು ಪಡೆಯುತ್ತಿದ್ದು ಜನರ ಆರೋಗ್ಯದ ದೃಷ್ಟಿಯಿಂದ ಇಂತಹ ಶಿಬಿರಗಳು ಅತ್ಯಗತ್ಯವಾಗಿದೆ ಎಂದು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿರವರು ಹೇಳಿದರು.


ಜು.13 ರಂದು ವೈದ್ಯಕೀಯ ತಜ್ಞ ಡಾ|ನಝೀರ್ ಅಹಮ್ಮದ್‌ರವರ ಡಾ.ನಝೀರ್ ಅಹಮದ್ ಡಯಾಬೆಟ್ಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ಮೆಕ್ಲಿಯೋಯ್ಡ್ ಕಂಪೆನಿ ಮತ್ತು ಎಸ್‌ಆರ್‌ಎಲ್ ಲ್ಯಾಬ್ ಇವುಗಳ ಸಹಯೋಗದಲ್ಲಿ ಕಲ್ಲಾರೆ ಕೃಷ್ಣಾ ಆರ್ಕೆಡ್‌ನಲ್ಲಿರುವ ಡಾ|ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಿಂಗಳಿಗೊಮ್ಮೆ ಆಯೋಜಿಸಲಾಗುವ ಥೈರಾಯಿಡ್ ಗ್ರಂಥಿಯ ತಪಾಸಣಾ ಶಿಬಿರವನ್ನು ಅವರು ಮಾತಿನ ಮೂಲಕ ಉದ್ಘಾಟಿಸಿ ಮಾತನಾಡಿದರು. ಮನುಷ್ಯನಾದವನಿಗೆ ಕಾಯಿಲೆ ಬಾಧಿಸುವುದು ಸಹಜ ಗುಣ. ಆದರೆ ಮಾನವನ ಅತೀವ ಅಸಡ್ಡೆ, ನಿಯಮಿತ ಆಹಾರವನ್ನು ತೆಗೆದುಕೊಳ್ಳುವಲ್ಲಿ ಉದಾಸೀನ ಪ್ರವೃತ್ತಿಯ ಧೋರಣೆ ಮತ್ತು ಸೂಕ್ತ ವ್ಯಾಯಾಮವಿಲ್ಲದಿದ್ದಾಗ ಮಾತ್ರ ಕಾಯಿಲೆಗಳು ಬಾಧಿಸುತ್ತವೆ. ಯಾವುದೇ ಕಾಯಿಲೆ ಬಂದಾಗ ಅವನ್ನು ಕಡೆಗಣಿಸದೆ ತಜ್ಞ ವೈದ್ಯರುಗಳಲ್ಲಿ ಪರೀಕ್ಷಿಸಿದರೆ ಆರೋಗ್ಯವೂ ಉತ್ತಮವಾಗುವುದು. ಆದ್ದರಿಂದ ಪ್ರತಿಯೋರ್ವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಜಾಗರೂಕತೆ ವಹಿಸಬೇಕು ಎಂದರು.


ಕ್ಲಿನಿಕ್‌ನ ವೈದ್ಯಕೀಯ ತಜ್ಞ ಡಾ.ನಝೀರ್ ಅಹಮ್ಮದ್‌ರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಥೈರಾಯಿಡ್ ಸಮಸ್ಯೆಯು ವಂಶಪಾರಂಪರೆಯಿಂದಲೂ ಬರಬಹುದು ಅಥವಾ ಬರದೇ ಇರಲೂ ಬಹುದು. ಥೈರಾಯಿಡ್ ರೋಗವು ಹಲವು ವಿಧದಲ್ಲಿ ಇರುತ್ತದೆ. ಸಾಮಾನ್ಯ ವಯಸ್ಸು 40 ಆದಾಗ ಮಾನವನ ಆರೋಗ್ಯದಲ್ಲಿ ಏರುಪೇರು ಆಗುವುದು ಸಾಮಾನ್ಯವಾಗಿದೆ. ಆರೋಗ್ಯದಲ್ಲಿ ಏನಾದರೂ ನೋವು ಬಂದಾಗ ಧೃತಿಗೆಡದೆ ತಜ್ಞ ವೈದ್ಯರುಗಳಲ್ಲಿ ತೋರಿಸಿದರೆ ಉತ್ತಮ. ಬಿಡುವಿಲ್ಲದ ಜೀವನ ಜಂಜಾಟದಲ್ಲಿ ಮಾನವ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಆರೋಗ್ಯವು ಸ್ಥಿಮಿತದಲ್ಲಿರಲು ಸಾಧ್ಯವಾಗದು ಎಂದು ಹೇಳಿ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಅದರಲ್ಲೂ ಗರ್ಭಿಣಿ ಮಹಿಳೆಯರಲ್ಲಿ ಆಗುವ ಥೈರಾಯಿಡ್ ಗ್ರಂಥಿಯ ಸಮಸ್ಯೆಗಳೇನು?, ಇದಕ್ಕೆ ಪರಿಹಾರಗಳೇನು? ಎಂಬುದರ ಬಗ್ಗೆ ವಿವರಿಸಿದರು.


ರೋಟರಿ ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ ಮಾತನಾಡಿ, ಪ್ರತಿಯೋರ್ವರಿಗೂ ಏನಾದರೊಂದು ಕಾಯಿಲೆ ಬಾಧಿಸುತ್ತಲೇ ಇರುತ್ತದೆ. ಡಾ.ನಝೀರ್‌ರವರು ಸಮಾಜ ಸ್ವಸ್ಥತೆಯಲ್ಲಿ ಹಾಗೂ ಶಾರೀರಿಕವಾಗಿ ದೃಢತೆಯಲ್ಲಿ ಇರಲಿ ಎಂಬುದಾಗಿ ಈ ಥೈರಾಯಿಡ್ ಶಿಬಿರವನ್ನು ಕಳೆದ ಹಲವಾರು ವರ್ಷಗಳಿಂದ ನಡೆಸುತ್ತಿದ್ದಾರೆ ಮಾತ್ರವಲ್ಲ ರೋಟರಿ ಕ್ಲಬ್‌ನಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಫಲಾನುಭವಿಗಳು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯವಂತರಾಗಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಟರ್‍ಯಾಕ್ಟ್ ಉಪಾಧ್ಯಕ್ಷ ಗಣೇಶ್ ಎನ್.ಕಲ್ಲರ್ಪೆ ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ಸುಜಿತ್ ಡಿ.ರೈ, ಮೆಕ್ಲಿಯೋಯ್ಡ್ ಕಂಪೆನಿಯ ವೀರೇಂದ್ರ, ಎಸ್‌ಆರ್‌ಎಲ್ ಲ್ಯಾಬ್‌ನ ಚಂದ್ರಕಲಾ, ಡಾ,ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನ ಸಿಬ್ಬಂದಿಗಳು ಸಹಕರಿಸಿದರು.


60ಕ್ಕೂ ಮಿಕ್ಕಿ ಫಲಾನುಭವಿಗಳು…
ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತಕ್ಕೆ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟವಾಗುವುದು, ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು, ಹೆಂಗಸರಿಗೆ ಅತಿಯಾದ ಮಾಸಿಕ ಸ್ರಾವ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ, ಮೃದುವಾದ ಕರ್ಕಶ ಸ್ವರ, ಗಂಟಲಿನಲ್ಲಿ ಊದುಕೊಳ್ಳುವಿಕೆ, ಅಧಿಕ ಎದೆ ಬಡಿತ ಅಥವಾ ರಕ್ತದೊತ್ತಡವುಳ್ಳ 60ಕ್ಕೂ ಫಲಾನುಭವಿಗಳು ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಪಡೆದುಕೊಂಡರು.
ಫಲಾನುಭವಿಗಳು..
ಥೈರಾಯಿಡ್ ಪರೀಕ್ಷೆ-46 ಮಂದಿ
ಮಧುಮೇಹ ಪರೀಕ್ಷೆ-60 ಮಂದಿ
ನ್ಯೂರೋಪತಿ ಪರೀಕ್ಷೆ-20 ಮಂದಿ
HBA1C ಪರೀಕ್ಷೆ-18 ಮಂದಿ

https://youtube.com/@drnazeersdiabetescentre3118

LEAVE A REPLY

Please enter your comment!
Please enter your name here