ರೋಟರಿ ಪುತ್ತೂರು ಯುವ ಪದಪ್ರದಾನ

0

ರೋಟರಿಯಿಂದ ವಿಶ್ವ ಬೆಳಗಿಸುವ ಕೆಲಸವಾಗುತ್ತಿದೆ-ಅಭಿನಂದನ್ ಶೆಟ್ಟಿ

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿಯಲ್ಲಿ ವೃತ್ತಿ, ಜಾತಿ, ಯೋಚನಾಲಹರಿ ಮೀರಿ ಜಗತ್ತಿನಲ್ಲಿ ಒಳ್ಳೆಯದು ಮಾಡಬೇಕು, ಪರರ ಮುಖದಲ್ಲಿ ಮಂದಹಾಸ ಕಾಣಬೇಕು, ವಿಶ್ವವನ್ನು ಬೆಳಗಿಸಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3182 ಇದರ ಪಿಡಿಜಿ ಅಭಿನಂದನ್ ಶೆಟ್ಟಿರವರು ಹೇಳಿದರು.

ಚಿತ್ರ: ಫೊಟೋಶಾಫ್ ಕೋರ್ಟ್‌ರೋಡ್


ಜು.12 ರಂದು ಮನೀಷಾ ಸಭಾಂಗಣದಲ್ಲಿ ಸಂಜೆ ಜರಗಿದ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಯುವದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದರು. ಬದಲಾವಣೆ ಎಂಬುದು ಜಗದ ನಿಯಮ. ಆಯಾ ಕಾಲಕ್ಕೆ ತಕ್ಕಂತೆ ನಾವು ಬದಲಾವಣೆ ಕಾಣಬೇಕಾಗುತ್ತದೆ. ಪ್ರಸ್ತುತ ವರ್ಷದ ರೋಟರಿ ಧ್ಯೇಯದಂತೆ ಸಮಾಜಮುಖಿ ಕಾರ್ಯಗಳಿಂದ ಸಮಾಜದ ನಿರೀಕ್ಷೆಯನ್ನು ಹೆಚ್ಚಿಸೋಣ, ಸಾಲು ಮರದ ತಿಮ್ಮಕ್ಕ ಹಾಗೂ ಹರೇಕಳ ಹಾಜಬ್ಬರವರ ಆದರ್ಶ ಬದುಕು ನಮ್ಮದಾಗಲಿ ಎಂದರು.


ಭರವಸೆಯನ್ನು ನನಸುಗೊಳಿಸಿ-ನರಸಿಂಹ ಪೈ:
ರೋಟರಿ ಅಸಿಸ್ಟೆಂಟ್ ಗವರ್ನರ್ ಹಾಗೂ ರೋಟರಿ ಯುವ ಮಾಜಿ ಅಧ್ಯಕ್ಷ ನರಸಿಂಹ ಪೈ ಮಾತನಾಡಿ, ಕಳೆದ ಎಂಟು ವರ್ಷಗಳ ಈ ರೋಟರಿ ಕ್ಲಬ್‌ನ ಪಯಣವು ಸಮಾಜದಲ್ಲಿ ತನ್ನ ಸಮಾಜಮುಖಿ ಕಾರ್ಯಗಳಿಂದ ಧನಾತ್ಮಕವಾಗಿ ಬೆಳೆದಿದೆ ಎನ್ನಬಹುದು. ಜೀವನದಲ್ಲಿ ಎಂದೂ ಭರವಸೆಯನ್ನು ಕಳೆದುಕೊಳ್ಳಬಾರದು ಎಂಬಂತೆ ನಮ್ಮಲ್ಲಿನ ಭರವಸೆಯ ಕನಸು ನನಸು ಮಾಡುವತ್ತ ಜೀವನ ಸಾಗಲಿ ಎಂದರು.


ರೋಟರಿ ಯುವ ಜವಾನೆರ’ ಕ್ಲಬ್-ಝೇವಿಯರ್ ಡಿ’ಸೋಜ:
ರೋಟರಿ ವಲಯ ಸೇನಾನಿ ಝೇವಿಯರ್ ಡಿ’ಸೋಜರವರು ಕ್ಲಬ್ ಬುಲೆಟಿನ್ರೋಟ ಯುವ ಸಿಂಚನ’ ಅನಾವರಣಗೊಳಿಸಿ ಮಾತನಾಡಿ, ಪುತ್ತೂರಿನ ರೋಟರಿ ಕ್ಲಬ್‌ಗಳಲ್ಲಿ ಜವಾನೆರ’ ಕ್ಲಬ್ ರೋಟರಿ ಯುವ ಆಗಿದೆ. ಕ್ಲಬ್‌ಗೆ ಸೇರ್ಪಡೆಗೊಂಡ ಯುವ ಸದಸ್ಯರು ಪಿನ್ ತೊಡಿಸುವ ಸಂದರ್ಭದಲ್ಲಿ ಎದೆಯುಬ್ಬಿಸಿರುವುದನ್ನು ನೋಡಿದಾಗ ದೇಶದ ಸೈನಿಕರ ನೆನಪಾಗುತ್ತದೆ. ನಾನೋರ್ವ ವೃತ್ತಿಯಲ್ಲಿ ನಿವೃತ್ತ ಅಧ್ಯಾಪಕನಾಗಿದ್ದು ಕಳೆದ 25 ವರ್ಷಗಳ ಹಿಂದೆ ನೂತನ ಅಧ್ಯಕ್ಷರಾದ ಪಶುಪತಿ ಶರ್ಮರವರು ನನ್ನ ವಿದ್ಯಾರ್ಥಿಯಾಗಿದ್ದರು ಮಾತ್ರವಲ್ಲ ಸ್ವಂತ ಸಾಧನೆಯಿಂದ ಅವರು ಈ ಮಟ್ಟಕ್ಕೆ ಬೆಳೆದು ನಿಂತಿರುವುದು ಸಾಧನೆಯೇ ಸರಿ ಎಂದರು.

ಯುವ ಚೈಲ್ಡ್ ಕ್ಲಬ್‌ಗೆ ಉಜ್ವಲ ಭವಿಷ್ಯವಿದೆ-ಬೂಡಿಯಾರ್ ರಾಧಾಕೃಷ್ಣ ರೈ:
ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ರೋಟರಿ ಈಸ್ಟ್‌ನಿಂದ ಪ್ರಾಯೋಜಿಸಲ್ಪಟ್ಟ ಈ ಯುವ ಚೈಲ್ಡ್ ಕ್ಲಬ್ ವರ್ಷದಿಂದ ವರ್ಷ ಬೆಳೆಯುತ್ತಿರುವುದು ನೋಡಿದಾಗ ಪುತ್ತೂರಿನಲ್ಲಿ ಈ ಯುವ ತಂಡಕ್ಕೆ ಉಜ್ವಲ ಭವಿಷ್ಯವಿದೆ ಎಂದು ಹೇಳಬಹುದು. ಪುತ್ತೂರಿನಲ್ಲಿ ಏಳು ಕ್ಲಬ್‌ಗಳಿಂದ ಸುಮಾರು ಐನ್ನೂರಕ್ಕೂ ಮಿಕ್ಕಿ ರೊಟೇರಿಯನ್ಸ್‌ಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಮಾತ್ರವಲ್ಲ ಎಲ್ಲರೂ ಜೊತೆಯಾಗಿ ಪುತ್ತೂರಿನಲ್ಲಿ ಯಾವುದೇ ಯೋಜನೆಗಳನ್ನು ಹಮ್ಮಿಕೊಂಡಲ್ಲಿ ಅದು ಫಲಪ್ರದವಾಗಬಲ್ಲುದು ಎಂದರು.


ಕ್ಲಬ್‌ನ ಪ್ರಥಮ ಮಹಿಳಾ ಅಧ್ಯಕ್ಷೆ ಹೆಮ್ಮೆ-ರಾಜೇಶ್ವರಿ ಆಚಾರ್:
ಕ್ಲಬ್ ನಿರ್ಗಮನ ಅಧ್ಯಕ್ಷೆ ರಾಜೇಶ್ವರಿ ಆಚಾರ್‌ರವರು ಮಾತನಾಡಿ, ಕ್ಲಬ್‌ನ ಪ್ರಥಮ ಮಹಿಳೆ ಅಧ್ಯಕ್ಷೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ನನಗೆ. ಕ್ಲಬ್‌ನಲ್ಲಿನ ಎಲ್ಲಾ ಸದಸ್ಯರ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಕ್ಲಬ್ ಪ್ಲಾಟಿನಂ ಪ್ರಶಸ್ತಿಗೆ ಭಾಜನವಾಗಿದೆ. ಸರಕಾರಿ ಆಸ್ಪತ್ರೆಗೆ ಆರು ಡಯಾಲಿಸಿಸ್ ಯಂತ್ರಗಳನ್ನು ಗ್ಲೋಬಲ್ ಗ್ರ್ಯಾಂಟ್ ಮೂಲಕ ಒದಗಿಸಿರುವುದು ಕ್ಲಬ್‌ನ ಇಮೇಜ್ ಹೆಚ್ಚಿಸಿದೆ ಎಂದು ಹೇಳಿ ಕಳೆದ ಒಂದು ವರ್ಷ ತನಗೆ ಸಹಕಾರ ನೀಡಿರುವುದಕ್ಕೆ ಕೃತಜ್ಞತೆ ಸಮರ್ಪಿಸಿದರು.

ಸನ್ಮಾನ:
ಪದಪ್ರದಾನ ಸಮಾರಂಭದಲ್ಲಿ ಪದಪ್ರದಾನ ಅಧಿಕಾರಿಯಾಗಿ ಆಗಮಿಸಿದ ಪಿಡಿಜಿ ಅಭಿನಂದನ್ ಶೆಟ್ಟಿರವರನ್ನು, ಸರಕಾರಿ ಆಸ್ಪತ್ರೆಗೆ ಆರು ಡಯಾಲಿಸಿಸ್ ಯಂತ್ರಗಳನ್ನು ಗ್ಲೋಬಲ್ ಗ್ರ್ಯಾಂಟ್ ಮೂಲಕ ಆಮೇರಿಕದಲ್ಲಿನ ವಿನಾಯಕ ಕುಡ್ವರವರ ಸಹಯೋಗದಲ್ಲಿ ಮೂಲಕ ತರುವಲ್ಲಿ ಪ್ರಧಾನ ಪಾತ್ರ ವಹಿಸಿದ ವಿಶ್ವಾಸ್ ಶೆಣೈ, ಅಸಿಸ್ಟೆಂಟ್ ಗವರ್ನರ್ ಆಗಿ ಕರ್ತವ್ಯ ನಿರ್ವಹಿಸಿದ ಎ.ಜೆ ರೈ ಹಾಗೂ ಸರಕಾರಿ ಆಸ್ಪತ್ರೆಗೆ ಆರು ಡಯಾಲಿಸಿಸ್ ಯಂತ್ರಗಳನ್ನು ತರಿಸಲು ಆರ್ಕಿಟೆಕ್ಟ್ ಆಗಿ ಕರ್ತವ್ಯ ನಿರ್ವಹಿಸಿದ ಅಲ್ಲದೆ ರೋಟರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಅನ್ನು ಯಶಸ್ವಿಗೊಳಿಸಿದ ಆಸ್ಕರ್ ಆನಂದ್, ಕಳೆದ ವರ್ಷ ಉತ್ತಮವಾಗಿ ಸೇವೆ ಸಲ್ಲಿಸಿದ ನಿರ್ಗಮನ ಅಧ್ಯಕ್ಷೆ ರಾಜೇಶ್ವರಿ ಆಚಾರ್, ಕಾರ್ಯದರ್ಶಿ ಅಶ್ವಿನಿಕೃಷ್ಣ ಮುಳಿಯ, ಕ್ಲಬ್ ಮಾಜಿ ಅಧ್ಯಕ್ಷ ಹಾಗೂ ವಲಯ ಸೇನಾನಿಯಾಗಿ ಕರ್ತವ್ಯ ನಿರ್ವಹಿಸಿದ ಡಾ|ಹರ್ಷಕುಮಾರ್ ರೈರವರಿಗೆ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಪಿ.ಎಚ್.ಎಫ್ ಗೌರವ: ಅಂತರ್ರಾಷ್ಟ್ರೀಯ ಸರ್ವಿಸ್ ವತಿಯಿಂದ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿ ಪಿ.ಎಚ್.ಎಫ್ ಪದವಿಗೆ ಭಾಜನರಾದ ರಾಜೇಶ್ವರಿ ಆಚಾರ್, ಕನಿಷ್ಕ ಎಸ್, ಭರತ್ ಪೈ, ಪಶುಪತಿ ಶರ್ಮ, ರತ್ನಾಕರ್ ರೈ(೩ ಬಾರಿ), ನರಸಿಂಹ ಪೈ(ಪಿ.ಎಚ್.ಎಫ್ ಫ್ಲಸ್ 1), ಡಾ|ಹರ್ಷಕುಮಾರ್ ರೈ(ಪಿ.ಎಚ್.ಎಫ್ ಫ್ಲಸ್ 1)ರವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವದ 15 ರೋಟರಿ ಕ್ಲಬ್‌ಗಳ ಧ್ವಜವನ್ನು ಕ್ಲಬ್ ಮಾಜಿ ಅಧ್ಯಕ್ಷ ಡಾ|ಹರ್ಷಕುಮಾರ್ ರೈಯವರು ಪಿಡಿಜಿ ಅಭಿನಂದನ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು. ಪೂರ್ವಾಧ್ಯಕ್ಷರುಗಳಿಗೆ ಸನ್ಮಾನ: ರೋಟರಿ ಯುವ ಕ್ಲಬ್ ಇದೀಗ ಒಂಭತ್ತನೇ ವರ್ಷಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಕ್ಲಬ್ ಅನ್ನು ಮುನ್ನೆಡೆಸಿದ ಪೂರ್ವಾಧ್ಯಕ್ಷರುಗಳಾದ ಸ್ಥಾಪಕ ಅಧ್ಯಕ್ಷ ರತ್ನಾಕರ್ ರೈ, ನರಸಿಂಹ ಪೈ, ಸೂರಜ್ ಶೆಟ್ಟಿ, ಉಮೇಶ್ ನಾಯಕ್, ಚೇತನ್ ಪ್ರಕಾಶ್ ಕಜೆ, ಡಾ|ಹರ್ಷಕುಮಾರ್ ರೈ, ಭರತ್ ಪೈ, ರಾಜೇಶ್ವರಿ ಆಚಾರ್‌ರವರುಗಳನ್ನು ನೂತನ ಅಧ್ಯಕ್ಷ ಪಶುಪತಿ ಶರ್ಮರವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.2024-25ರ ಸಾಲಿನ ನಿಯೋಜಿತ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ೨೦೨೫-೨೬ರ ಸಾಲಿನ ಅಧ್ಯಕ್ಷ ಕುಸುಮ್‌ರಾಜ್‌ರವರಿಗೆ ಪಿಡಿಜಿ ಅಭಿನಂದನ್ ಶೆಟ್ಟಿಯವರು ಹೂ ನೀಡಿ ಗೌರವಿಸಿದರು.

ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್ ವತಿಯಿಂದ ಇನ್ನರ್‌ವ್ಹೀಲ್ ಕ್ಲಬ್‌ನ ಪ್ರಸ್ತುತ ವರ್ಷದ ವೆಬ್ ಸಂಯೋಜಕಿ ವಚನಾ ಜಯರಾಂ, ಕಾಮತ್ ಗ್ರಾನೈಟ್ಸ್ ಆಂಡ್ ಕ್ರಷರ್ಸ್ ಸಂಸ್ಥೆಯ ಆದಿತ್ಯ ಕಾಮತ್, ಪತಿಯೊಂದಿಗೆ ಸ್ವ-ಉದ್ಯಮವನ್ನು ನಡೆಸುತ್ತಿರುವ ವೀಕ್ಷಾ ಕಾಮತ್, ಆರ್ಕಿಟೆಕ್ಟ್ ಸುದರ್ಶನ್ ಹಾರಕರೆ, ದರ್ಬೆ-ಬೈಪಾಸ್ ಲಕ್ಷ್ಮೀ ಮಂಜುಶ್ರೀ ಕಾರ್ ಡೆಕೋರ್‌ನ ಗೌರವ ಭಾರದ್ವಾಜ್ ರವರನ್ನು ಪಿಡಿಜಿ ಅಭಿನಂದನ್ ಶೆಟ್ಟಿಯವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು. ಜಿಲ್ಲಾ ಸಮಿತಿಗೆ ಆಯ್ಕೆಯಾದವರಿಗೆ ಗೌರವ: ಕ್ಲಬ್ ಸದಸ್ಯರಾಗಿದ್ದು ಜಿಲ್ಲಾ ಸಮಿತಿಗೆ ಆಯ್ಕೆಯಾಗಿರುವ ನರಸಿಂಹ ಪೈ(ಅಸಿಸ್ಟೆಂಟ್ ಗವರ್ನರ್), ರಾಜೇಶ್ವರಿ ಆಚಾರ್(ಸಾಂಸ್ಕೃತಿಕ ಚಟುವಟಿಕೆಗಳ ವಲಯ ಸಂಯೋಜಕಿ), ಉಮೇಶ್ ನಾಯಕ್(ಹ್ಯಾಪಿ ಸ್ಕೂಲ್ಸ್ ವೈಸ್ ಚೇರ್ ಮ್ಯಾನ್), ಹರ್ಷಕುಮಾರ್ ರೈ(ರಸ್ತೆ ಸುರಕ್ಷತೆ ಹಾಗೂ ಟ್ರಾಫಿಕ್ ಜಾಗೃತಿ ಚೇರ್‌ಮ್ಯಾನ್), ರತ್ನಾಕರ್ ರೈ(ಸೋಲಾರ್ ಎನರ್ಜಿ ಮತ್ತು ರಿನೀವೇಬಲ್ ಎನರ್ಜಿ ಚೇರ್‌ಮ್ಯಾನ್), ಭರತ್ ಪೈ(ಇಂಟರ್‍ಯಾಕ್ಟ್ ವಲಯ ಸಂಯೋಜಕರು), ಪಶುಪತಿ ಶರ್ಮ ಹಾಗೂ ಹರ್ಷಕುಮಾರ್ ರೈ(ರೈಡ್ ಫಾರ್ ರೋಟರಿ ಸದಸ್ಯ)ರವರುಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ರೋಟರಿ ಯುವ ಪ್ರಶಸ್ತಿ:
ಕಮ್ಯೂನಿಟಿ ಸರ್ವಿಸ್‌ನಡಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ತನ್ನಲ್ಲಿ ಬರುವ ರೋಗಿಗಳಿಗೆ ಹಸನ್ಮುಖಿ ನಗುವಿನೊಂದಿಗೆ ಚಿಕಿತ್ಸೆ ನೀಡುವ ಕೌಂಪೌಂಡರ್ ನರಸಿಂಹ ಭಟ್‌ರವರನ್ನು ಕ್ಲಬ್ ವತಿಯಿಂದ ನರಸಿಂಹ ಭಟ್‌ರವರ ಸ್ವಗೃಹದಲ್ಲಿರೋಟರಿ ಸಮಾಜ ಸೇವಾರತ್ನ’ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಗುತ್ತಿದೆ. ತನ್ನ 21ನೇ ವಯಸ್ಸಿನಲ್ಲಿಯೇ ದ್ವಾರಕಾ ಕನ್ಸ್ಟ್ರಕ್ಷನ್ ಸಂಸ್ಥೆಯನ್ನು ಆರಂಭಿಸಿ ಈವರೆಗೆ ೫೦೦ಕ್ಕೂ ಮಿಕ್ಕಿ ಮನೆಗಳನ್ನು ನಿರ್ಮಿಸಿರುವುದು ಜೊತೆಗೆ ದ್ವಾರಕಾ ಅರ್ಥ್‌ಮೂವರ್‍ಸ್, ದ್ವಾರಕಾ ಹಾರ್ಡ್‌ವೇರ್, ದ್ವಾರಕಾ ಸಿಮೆಂಟ್ ಪ್ರಾಡಕ್ಟ್ಸ್, ದ್ವಾರಕಾ ಕನ್ಸಲ್ಟೆನ್ಸಿ, ದ್ವಾರಕಾ ರಿಯಲ್ ಎಸ್ಟೇಟ್ ಉದ್ಯಮವನ್ನು ನಡೆಸುತ್ತಿದ್ದು ಇದೀಗ ವಿವೇಕಾನಂದ ಶಾಲೆಗೆ ಸುಮಾರು ಸಾವಿರ ಚದರಡಿಯ ಪಾಕಶಾಲೆಯನ್ನು ಉಚಿತವಾಗಿ ನಿರ್ಮಿಸಿಕೊಟ್ಟಿರುವ ಗೋಪಾಲಕೃಷ್ಣ ಭಟ್‌ರವರಿಗೆ ರೋಟರಿ ಯುವ ಸಮಾಜ ಸೇವಾರತ್ನ’ ಹಾಗೆಯೇ ಯೂತ್ ಸರ್ವಿಸ್ ವತಿಯಿಂದ ಹೈದರಾಬಾದ್‌ನ ಗಚಿಬೌಲಿಯಲ್ಲಿ ನಡೆದ 76ನೇ ಸೀನಿಯರ್ ನ್ಯಾಷನಲ್ಸ್ ಅಕ್ವಾಟಿಕ್ ಚಾಂಪಿಯನ್ ಶಿಪ್‌ನಲ್ಲಿ 50ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 28.8 ಸೆಕೆಂಡುಗಳಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಬೆಳ್ಳಿ ಪದಕವನ್ನು ಗಳಿಸಿರುವ ಸರ್ವಿಸಸ್ ತಂಡವನ್ನು ಪ್ರತಿನಿಧಿಸುವ ಭಾರತೀಯ ನೌಕಾಪಡೆಯ ಈಜುಗಾರ ವೈಷ್ಣವ್ ಹೆಗ್ಡೆರವರಿಗೆರೋಟರಿ ಯುವ ಕ್ರೀಡಾರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ಹೂ ನೀಡಿ ಗೌರವ:
ರಾಮಕೃಷ್ಣ ಆಶ್ರಮಕ್ಕೆ ರೂ.ಹತ್ತು ಸಾವಿರ ಕೊಡುಗೆ ನೀಡಿದ ರೋಟರಿ ಭೀಷ್ಮ ಕೆ.ಆರ್ ಶೆಣೈ, ಜಿಲ್ಲಾ ಪ್ರಾಜೆಕ್ಟ್‌ನಡಿಯಲ್ಲಿ ತಾಲೂಕಿನಲ್ಲಿರುವ ಒಂದು ಅಂಗನವಾಡಿ ಕೇಂದ್ರದ ಅಡುಗೆ ಕೋಣೆಯನ್ನು ಅಂದಾಜು ರೂ.ಹತ್ತು ಸಾವಿರ ವೆಚ್ಚದಲ್ಲಿ ಉನ್ನತೀಕರಣ ಹಾಗೂ ೬೫ ವರ್ಷದ ವೃದ್ಧರೋರ್ವರನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಶ್ರೀಲತಾರವರ ಸಹಕಾರದೊಂದಿಗೆ ನಿರ್ಗತಿಕರ ಪುನರ್ವಸತಿಗೆ ಸೇರಿಸಲು ಕಾರಣಕರ್ತರಾದ ಕ್ಲಬ್ ಮಾಜಿ ಅಧ್ಯಕ್ಷ ಉಮೇಶ್ ನಾಯಕ್, ಮತ್ತೊಂದು ಅಂಗನವಾಡಿಯ ಕಪಾಟಿನ ವೆಚ್ಚವನ್ನು ಕೊಡುಗೆಯಾಗಿ ನೀಡಿದ ಕ್ಲಬ್ ಸದಸ್ಯ ಅಭಿಶ್ ಕೆ., ಅಕ್ಷಯ ಕಾಲೇಜು ರೋಟರ್‍ಯಾಕ್ಟ್ ಕ್ಲಬ್ ಚೇರ್‌ಮ್ಯಾನ್ ಜಯಂತ್ ನಡುಬೈಲು, ವಿವೇಕಾನಂದ ಸೆಂಟ್ರಲ್ ಸ್ಕೂಲ್ ಇಂಟರ್‍ಯಾಕ್ಟ್ ಚೇರ್‌ಮ್ಯಾನ್ ಅನಿಲ್ ದೀಪಕ್ ಹಾಗೂ ಶಾಲಾ ಸಂಚಾಲಕ ಭರತ್ ಪೈರವರಿಗೆ ಹೂ ನೀಡಿ ಗೌರವಿಸಲಾಯಿತು.


ಅಭಿನಂದನೆ:
ಇತ್ತೀಚೆಗೆ ನೃತ್ಯರಂಗದಲ್ಲಿ ಮಾಡಿದ ಸಾಧನೆಗಾಗಿ ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಕ್ಲಬ್ ಸದಸ್ಯೆ ಸ್ವಸ್ತಿಕಾ ಶೆಟ್ಟಿ, ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಕ್ಲಬ್ ಸದಸ್ಯೆ ರಾಜೇಶ್ವರಿ ಆಚಾರ್ ಹಾಗೂ ಸುಧೀರ್ ಆಚಾರ್‌ರವರ ಪುತ್ರಿ ರಾಹಿ ಬೆಳಂದೂರು, ಕ್ಲಬ್ ಸದಸ್ಯ ಎಲ್ಯಾಸ್ ಪಿಂಟೋ ಹಾಗೂ ಮೋಲಿ ಪಿಂಟೋರವರ ಪುತ್ರಿ,
ಬೆಥನಿ ಪ್ರೌಢಶಾಲೆಯಲ್ಲಿ ಶಾಲಾ ನಾಯಕಿಯಾಗಿ ಆಯ್ಕೆಯಾಗಿದ್ದು ಮತ್ತು ಲೆದರ್‌ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ನಿರ್ವಹಣೆ ತೋರುತ್ತಿರುವ ಏಂಜಲಿಕಾ ಮೆಲಾನಿ ಪಿಂಟೋ, ಮತ್ತೋರ್ವ ಪುತ್ರ ಅಂಡರ್-14 ಕ್ರಿಕೆಟ್‌ನಲ್ಲಿ ಮೈಸೂರು ವಲಯವನ್ನು ಪ್ರತಿನಿಧಿಸಿರುವ ಕ್ರಿಸ್ ಏಂಜಲೊ ಪಿಂಟೋ, ಭರತನಾಟ್ಯ ಕಲೋತ್ಸವದಲ್ಲಿ ಭಾಗವಹಿಸಿ ಉತ್ತಮ ಸಾಧನೆಗೈಯ್ದಿರುವ ಸದಸ್ಯೆ ಸ್ವಸ್ತಿಕಾ ಶೆಟ್ಟಿಯವರ ಪುತ್ರಿ ಆಂಗಿಕಾ ಶೆಟ್ಟಿ, ವಿವೇಕಾನಂದ ಸೆಂಟ್ರಲ್ ಸ್ಕೂಲಿನ ನಾಯಕನಾಗಿರುವ ಸದಸ್ಯ ದೀಪಕ್ ಗೌಡ ಹಾಗೂ ಪ್ರಭಾ ದೀಪಕ್‌ರವರ ಪುತ್ರ ಚಿರಾಗ್ ಡಿ.ಗೌಡ, ಶಿಸ್ತು ಮಂತ್ರಿಯಾಗಿ ಆಯ್ಕೆಯಾಗಿರುವ ಕ್ಲಬ್ ಮಾಜಿ ಅಧ್ಯಕ್ಷ ಉಮೇಶ್ ನಾಯಕ್ ಹಾಗೂ ರೂಪಶ್ರೀ ನಾಯಕ್‌ರವರ ಪುತ್ರ ಸಾತ್ವಿಕ್ ನಾಯಕ್‌ರವರಿಗೆ ಹೂ ನೀಡಿ ಅಭಿನಂದಿಸಲಾಯಿತು.


ವೇದಿಕೆಯಲ್ಲಿ ನೂತನ ಅಧ್ಯಕ್ಷ ಪಶುಪತಿ ಶರ್ಮರವರ ಪತ್ನಿ ಅನ್ನಪೂರ್ಣ ಶರ್ಮ ಉಪಸ್ಥಿತರಿದ್ದರು. ಸುಮನಾ ರಾಂಪ್ರಕಾಶ್ ಪ್ರಾರ್ಥಿಸಿದರು. ನಿರ್ಗಮನ ಅಧ್ಯಕ್ಷ ರಾಜೇಶ್ವರಿ ಆಚಾರ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಡಾ|ದೀಪಕ್ ಕೆ.ಬಿ ವಂದಿಸಿದರು. ನಿರ್ಗಮನ ಕಾರ್ಯದರ್ಶಿ ಅಶ್ವಿನಿಕೃಷ್ಣ ಮುಳಿಯ ವರದಿ ಮಂಡಿಸಿದರು. ಸದಸ್ಯರಾದ ಅನಿಲ್ ಮುಂಡೋಡಿ, ಸೋನಾ ಪ್ರದೀಪ್, ಹರಿಪ್ರಸಾದ್ ರೈ ಹಾಗೂ ಕ್ಲಬ್ ಜಿ.ಎಸ್.ಆರ್ ಪ್ರಮೀಳಾ ರಾವ್‌ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು. ಸದಸ್ಯ ಕಾನಿಷ್ಕ, ಚೇತನ್ ಪ್ರಕಾಶ್ ಕಜೆ, ದೇವಿಚರಣ್ ರೈರವರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಕ್ಲಬ್ ಸರ್ವಿಸ್ ನಿರ್ದೇಶಕಿ ಅಶ್ವಿನಿಕೃಷ್ಣ ಮುಳಿಯ, ವೊಕೇಶನಲ್ ಸರ್ವಿಸ್ ನಿರ್ದೇಶಕ ನಿಹಾಲ್ ಶೆಟ್ಟಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಅಭಿಶ್ ಕೆ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ನಿರೀಕ್ಷಿತ್ ರೈ, ಯೂತ್ ಸರ್ವಿಸ್ ನಿರ್ದೇಶಕ ಧೀರಜ್ ಶೆಟ್ಟಿ, ಸಾರ್ಜಂಟ್ ಎಟ್ ಆರ್ಮ್ಸ್ ಸುದರ್ಶನ್ ರೈ, ಬುಲೆಟಿನ್ ಎಡಿಟರ್ ಶರತ್ ಶ್ರೀನಿವಾಸ್‌ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಅಧ್ಯಕ್ಷ ಭರತ್ ಪೈ ಹಾಗೂ ಅನಿಲ ದೀಪಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



ಪದಾಧಿಕಾರಿಗಳಿಗೆ ಪದಪ್ರದಾನ..
ನೂತನ ಅಧ್ಯಕ್ಷ ಪಶುಪತಿ ಶರ್ಮ, ಕಾರ್ಯದರ್ಶಿ ಡಾ.ದೀಪಕ್ ಕೆ.ಬಿ, ಕೋಶಾಧಿಕಾರಿ ಕುಸುಮ್‌ರಾಜ್, ಜೊತೆ ಕಾರ್ಯದರ್ಶಿ ವಿನೀತ್ ಶೆಣೈ, ನಿಯೋಜಿತ ಅಧ್ಯಕ್ಷ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕಿ ಅಶ್ವಿನಿಕೃಷ್ಣ ಮುಳಿಯ, ಬುಲೆಟಿನ್ ಎಡಿಟರ್ ಶರತ್ ಎಸ್, ಸಾರ್ಜಂಟ್ ಎಟ್ ಆಮ್ಸ್೯ ಸುದರ್ಶನ್ ರೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಅಭಿಶ್ ಕೆ, ವೊಕೇಶನಲ್ ಸರ್ವಿಸ್ ನಿರ್ದೇಶಕ ನಿಹಾಲ್ ಶೆಟ್ಟಿ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ನಿರೀಕ್ಷಿತ್ ರೈ, ಯೂತ್ ಸರ್ವಿಸ್ ನಿರ್ದೇಶಕ ಧೀರಜ್ ಶೆಟ್ಟಿ, ಚೇರ್‌ಮ್ಯಾನ್‌ಗಳಾದ ಪ್ರಕಾಶ್ ರೈ(ಪಲ್ಸ್ ಪೋಲಿಯೊ), ದೀಕ್ಷಾ ಸಹಜ್ ರೈ(ವೆಬ್), ವಿಶಾಲ್ ಮೊಂತೇರೊ(ಸೋಶಿಯಲ್ ಮೀಡಿಯಾ/ಪಬ್ಲಿಕ್ ಇಮೇಜ್), ಅನಿಲ ಡಿ.ಶೆಟ್ಟಿ(ಟೀಚ್), ಕಾರ್ತಿಕ್ ಪೆರ್ವೋಡಿ(ವಿನ್ಸ್) ಡಾ.ಯದುರಾಜ್(ರೋಟರಿ ಫೌಂಡೇಶನ್-ಟಿ.ಆರ್.ಎಫ್), ಎಲ್ಯಾಸ್ ಪಿಂಟೋ(ಕ್ರೀಡೆ), ಸಚಿನ್ ನಾಯಕ್(ಸಾಂಸ್ಕೃತಿಕ), ಶಿವಪ್ರಸಾದ್(ಸಿ.ಎಲ್.ಸಿ.ಸಿ), ಸತೀಶ್ ರೈ ಕಟ್ಟಾವು(ಸದಸ್ಯತನ ಅಭಿವೃದ್ಧಿ), ಹರಿಪ್ರಸಾದ್(ಜಿಲ್ಲಾ ಪ್ರಾಜೆಕ್ಟ್)ರವರುಗಳಿಗೆ ಪಿಡಿಜಿ ಅಭಿನಂದನ್ ಶೆಟ್ಟಿರವರು ಪದಪ್ರದಾನ ನೆರವೇರಿಸಿದರು.

ಒಗ್ಗಟ್ಟಿನಲ್ಲಿ ಬಲವಿದೆ..
ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಯುವ ಸದಸ್ಯರು ಅಧ್ಯಕ್ಷರೊಂದಿಗೆ ಹೆಜ್ಜೆ ಹಾಕುತ್ತಿರುವುದು ಶ್ಲಾಘನೀಯ. ಹಾಗೆಯೇ ಮುಂದಿನ ದಿನಗಳಲ್ಲಿ ಪೂರ್ವಾಧ್ಯಕ್ಷರ ಸಂಪೂರ್ಣ ಸಹಕಾರದೊಂದಿಗೆ ಹಾಗೂ ಇತರ ರೋಟರಿ ಸಂಸ್ಥೆಗಳೊಂದಿಗೆ, ಸಂಘ-ಸಂಸ್ಥೆಗಳೊಂದಿಗೆ ಪ್ರಾಜೆಕ್ಟ್ ಮಾಡಲು ತಯಾರಿ ಮಾಡುತ್ತೇವೆ ಎನ್ನುವ ಭರವಸೆಯೊಂದಿಗೆ ಒಳಿತುಗಳು ಎಲ್ಲಾ ಕಡೆಯಿಂದ ಬರಲಿ ಎಂಬುದೇ ಹಾರೈಕೆಯಾಗಿದ್ದು ನಾವೆಲ್ಲರೂ ಒಂದೇ ಮನೆಯವರಾಗಿ ಕೆಲಸ ಮಾಡುತ್ತಾ ಜಿಲ್ಲೆಯಲ್ಲಿ ಉತ್ತಮ ಕ್ಲಬ್ ಆಗಿ ಮೂಡಿ ಬರಬೇಕಾಗಿದೆ.
-ಪಶುಪತಿ ಶರ್ಮ, ನೂತನ ಅಧ್ಯಕ್ಷರು, ರೋಟರಿ ಪುತ್ತೂರು ಯುವ

ಯೋಜನೆಗಳ ಅನಾವರಣ:
ಕ್ಲಬ್ ಮಾಜಿ ಅಧ್ಯಕ್ಷ ಚೇತನ್ ಪ್ರಕಾಶ್ ಕಜೆರವರ ಧನ್ವಂತರಿ ಲ್ಯಾಬ್‌ನ ಸಹಯೋಗದೊಂದಿಗೆ ಪ್ರತಿ ತಿಂಗಳು ಹಮ್ಮಿಕೊಳ್ಳುವ ಉಚಿತ ಮಧುಮೇಹ ತಪಾಸಣಾ ಶಿಬಿರದ ಯೋಜನೆಯ ಹಾಗೂ ಜಿಲ್ಲಾ ಪ್ರಾಜೆಕ್ಟ್‌ನಡಿಯಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಮತ್ತು ಪಬ್ಲಿಕ್ ಇಮೇಜ್ ಇದರ ಅಂಗವಾಗಿ ವಾಹನ ಚಾಲಕರಿಗೆ ಉಚಿತ ಕಣ್ಣಿನ ಪರೀಕ್ಷಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಇವೆರಡು ಯೋಜನೆಗಳ ಅನಾವರಣವನ್ನು ಪಿಡಿಜಿ ಅಭಿನಂದನ್ ಶೆಟ್ಟಿಯವರು ನಡೆಸಿಕೊಟ್ಟರು. ಅಲ್ಲದೆ ಈ ಸಂದರ್ಭದಲ್ಲಿ ಜನ್ಮ ಫೌಂಡೇಶನ್ ರವರ ಸಹಕಾರದೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಹಳ್ಳಿ ಹಳ್ಳಿಗಳಲ್ಲಿ ಕ್ಲಬ್ ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸುವ ಯೋಜನೆ ಜೊತೆಗೆ ಕ್ಲಬ್ ಸಹ ಸಂಸ್ಥೆ ಇಂಟರ್‍ಯಾಕ್ಟ್, ರೋಟರ್‍ಯಾಕ್ಟ್ ಹಾಗೂ ಟ್ರಾಫಿಕ್ ಪೋಲಿಸ್ ಇವರ ಸಹಯೋಗದಲ್ಲಿ ಶಾಲಾ ಕಾಲೇಜುಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿಯ ಬಗ್ಗೆ ಸರಣಿ ಉಪನ್ಯಾಸ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪಬ್ಲಿಕ್ ಇಮೇಜ್ ಚೇರ್‌ಮ್ಯಾನ್ ಎಕೆಎಸ್ ವಿಶ್ವಾಸ್ ಶೆಣೈ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಚೇರ್‌ಮ್ಯಾನ್, ಜನ್ಮ ಫೌಂಡೇಶನ್‌ನ ಡಾ|ಹರ್ಷಕುಮಾರ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here