ರೋಟರಿ ವಲಯ ಸೇನಾನಿಯಾಗಿ ರವೀಂದ್ರ ದರ್ಬೆ

0

ಉಪ್ಪಿನಂಗಡಿ: ರೋಟರಿ ಜಿಲ್ಲೆ 3181 ಇದರ ಈ ವರ್ಷದ ವಲಯ ಸೇನಾನಿಯಾಗಿ ಉಪ್ಪಿನಂಗಡಿ ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷರಾದ ರವೀಂದ್ರ ದರ್ಬೆಯವರು ಆಯ್ಕೆಯಾಗಿದ್ದಾರೆ.
2020-21ನೇ ಸಾಲಿನಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿ ಉತ್ತಮ ಸಾಧನೆಗೈದು ವಲಯದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಇವರು ಜಿಲ್ಲಾ ಗವರ್ನರ್ ಆಗಿರುವ ಮೈಸೂರಿನ ಹೆಚ್. ಆರ್. ಕೇಶವರವರ ವಲಯ ಸೇನಾನಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ರವೀಂದ್ರ ದರ್ಬೆಯವರು ಜೆಸಿ ಸಂಸ್ಥೆಯ ಪೂರ್ವಧ್ಯಕ್ಷರಾಗಿ, ತರಬೇತುದಾರರಾಗಿ ಹಲವು ತರಬೇತಿ ನೀಡಿದ ಅನುಭವವಿರುವವರು. ಉಪ್ಪಿನಂಗಡಿ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿಯಾಗಿ ಹತ್ತುವರ್ಷಗಳ ಸೇವೆ ಸಲ್ಲಿಸಿರುವ ಇವರು ಉಪ್ಪಿನಂಗಡಿ ಸ್ವಾತಂತ್ರ್ಯೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ 12 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಪುತ್ತೂರು ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ, ಉಪ್ಪಿನಂಗಡಿ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿ ದುಡಿದ ಅನುಭವ ಇವರಿಗಿದೆ. ಗಣಿತ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ 13 ವರ್ಷ ಪ್ರಾಂಶುಪಾಲರಾಗಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೈಕ್ಷಣಿಕ ಸಲಹೆಗಾರರಾಗಿ ದುಡಿದು, ಸದ್ಯ ಮಾಣಿಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಉಪ್ಪಿನಂಗಡಿಯಲ್ಲಿ ಹಲವು ಸೇವಾ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here