ಪುತ್ತೂರು: ಇಲ್ಲಿನ ಜಿ.ಎಲ್ ವನ್ ಮಾಲ್ನಲ್ಲಿ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಅಲ್ಟಿಮೇಟ್ ಗೇಮಿಂಗ್ ಡೆಸ್ಟಿನೇಶನ್ ಹಾಗೂ ಮನೋರಂಜನಾ ತಾಣ ಫನ್ ಗ್ಯಾಲಕ್ಸಿ ಜು.15ರಂದು ಶುಭಾರಂಭಗೊಳ್ಳಲಿದೆ.
ನೂತನ ಮಳಿಗೆಯನ್ನು ಜಿ.ಎಲ್ ಗ್ರೂಪ್ನ ಮುಖ್ಯಸ್ಥರಾದ ಜಿ.ಯಲ್ ಬಲರಾಮ ಆಚಾರ್ಯರವರು ಉದ್ಘಾಟಿಸಲಿದ್ದಾರೆ. ಫನ್ ಗ್ಯಾಲೆಕ್ಸಿ ಒಂದು ಒಳಾಂಗಣ ಮನೋರಂಜನಾ ಕೇಂದ್ರವಾಗಿದ್ದು, ಸಂಪೂರ್ಣ ಅನುಭವಕ್ಕಾಗಿ ಸವಾರಿಗಳು, ಆಟಗಳು ಮತ್ತು ಆಟದ ಪ್ರದೇಶಗಳನ್ನು ಒಳಗೊಂಡಿದೆ. ಇದು ಒಂದು ಕೌಟುಂಬಿಕ ಮನೋರಂಜನಾ ಪ್ರದೇಶವಾಗಿದ್ದು, ಮಕ್ಕಳನ್ನು ಆಟದೊಂದಿಗೆ ಕಲಿಯಲು ಪ್ರೋತ್ಸಾಹ ನೀಡಲಾಗುತ್ತದೆ. ಎಲ್ಲಾ ವಯಸ್ಸಿನವರಿಗೆ ವಿವಿಧ ರೀತಿಯ ಸವಾರಿಗಳು ಮತ್ತು ಆಟಗಳು, ಚಿಕ್ಕಮಕ್ಕಳಿಗೆ ಮೃದುವಾದ ಆಟದ ಮೈದಾನ, ಅತ್ಯಾಕರ್ಷಕ ಬಹುಮಾನಗಳು, ವಯಸ್ಕರಿಗೆ ಮಸಾಜ್ ಚೇರ್, ಹನ್ನೆರಡು ವರ್ಷದವರೆಗಿನ ಮಕ್ಕಳಿಗೆ ವರ್ಚುವಲ್ ರಿಯಾಲಿಟಿ ಅನುಭವಗಳು ಸಿಗಲಿದೆ. ಸಂಪೂರ್ಣ ಕುಟುಂಬ ತಮ್ಮ ಮಕ್ಕಳೊಂದಿಗೆ ಮನೋರಂಜನೆಗಾಗಿ ಭೇಟಿ ನೀಡಬಹುದಾಗಿದೆ ಎಂದು ಫನ್ ಗ್ಯಾಲಕ್ಸಿ ಪ್ರಕಟಣೆ ತಿಳಿಸಿದೆ.