ಡಾ.ಮಧು ಎಂ. ಅವರಿಗೆ ಪಿ.ಎಚ್.ಡಿ ಪ್ರದಾನ

0

ಪುತ್ತೂರು:ಪುತ್ತೂರಿನವರಾಗಿದ್ದು ಪ್ರಸ್ತುತ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಸಹಪ್ರಾಧ್ಯಾಪಕಿಯಾಗಿರುವ ಡಾ.ಮಧು ಎಂ.ರವರಿಗೆ ಚೆನ್ನೈನ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವಿಶ್ವಮಹಾವಿದ್ಯಾಲಯವು ಪಿ.ಎಚ್.ಡಿ ಪದವಿ ಪ್ರದಾನ ಮಾಡಿ ಪುರಸ್ಕರಿಸಿತು.
ಇವರು`ಮುಟ್ಟಿನ ಸಂಬಂಧಿ ಉದಾವರ್ತಿನಿ ಯೋನಿವ್ಯಾಪತ್ತಿನಲ್ಲಿ ಯೋನಿಶೂಲಹರ ಕಷಾಯ ಮತ್ತು ಘಟ ಇವುಗಳ ಪ್ರಭಾವದ ತುಲನಾತ್ಮಕ ಅಧ್ಯಯನ’ ಎಂಬ ಶೀರ್ಷಿಕೆಯಡಿಯಲ್ಲಿ ಸಂಶೋಧನೆ ನಡೆಸಿದ ಯಶಸ್ವಿ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಗೌರವ ಲಭಿಸಿದೆ.
ಮಧು ಅವರು ಮುದ್ಯ ಮೋಹನ್‌ದಾಸ್ ಹಾಗೂ ಮಾಲತಿರವರ ಸುಪುತ್ರಿ. ಇವರು ಹಾಸನದ ಎಸ್.ಡಿ.ಎಂ ಕಾಲೇಜಿನಲ್ಲಿ ಬಿ.ಎ.ಎಂ.ಎಸ್. ಪದವಿಯನ್ನು ಪೂರ್ಣಗೊಳಿಸಿ, ಬೀದರಿನ ಎನ್.ಕೆ.ಜೆ ಆಯುರ್ವೇದ ಕಾಲೇಜಿನಲ್ಲಿ ಸ್ನಾತಕೋತ್ತರ (ಎಂ.ಎಸ್) ಪದವಿಯನ್ನು ಪಡೆದರು. ನಂತರ ಡಾ. ಪ್ರಸನ್ನರವರೊಂದಿಗೆ ವೈವಾಹಿಕ ಜೀವನವನ್ನು ಆರಂಭಿಸಿರುವ ಡಾ.ಮಧು ಎಂ.ರವರು ಹಿರೇಬಂಡಾಡಿ ಗ್ರಾಮದ ಸಾಂತಿತ್ತಡ್ಡ ಜನಾರ್ದನ ಗೌಡ ಹಾಗೂ ಸುಮತಿ ದಂಪತಿಯ ಸೊಸೆಯಾಗಿದ್ದಾರೆ.

LEAVE A REPLY

Please enter your comment!
Please enter your name here