ಪಕ್ಷ ಸಂಘಟನೆಯ ಸಂದರ್ಭದಲ್ಲಿ ಮಾತಿನ ಚಕಮಕಿಗಳು ಸಹಜ- ಸುಧೀರ್ ಕುಮಾರ್ ಶೆಟ್ಟಿ:
ಈ ಬಗ್ಗೆ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಪ್ರತಿಕ್ರಿಯೆ ನೀಡಿ, ಪಕ್ಷದ ಸೋಲಿನ ಬಗ್ಗೆ ಪರಾಮರ್ಶಿಸಲು ಕರೆದಿದ್ದ ಸಭೆಯಲ್ಲಿ ಕೆಲವರು ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದರು, ಕೆಲವೊಮ್ಮೆ ಅಭಿಪ್ರಾಯ ಭೇದ ಬಂದಾಗ ಮಾತಿನ ಚಕಮಕಿಗಳು ನಡೆಯುವುದು ಸಹಜ, ಎಲ್ಲವನ್ನೂ ಸರಿ ಮಾಡಿಕೊಂಡು ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸಿ ಗೆಲುವಿಗೆ ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.
ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆಯಲ್ಲಿ ಎರಡು ಬಣಗಳ ಮಧ್ಯೆ ಅಸಮಾಧಾನ ಮತ್ತೆ ಸ್ಪೋಟಗೊಂಡು, ಬಡಿದಾಟ ಮಾರಾಮಾರಿ ನಡೆದ ಘಟನೆ ವರದಿಯಾಗಿದೆ.
ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಪರಾಮರ್ಶೆ ಸಭೆಯು ಕಾಂಗ್ರೆಸ್ ಮುಖಂಡರಾದ ಜಿ.ಕೃಷ್ಣಪ್ಪ ಹಾಗೂ ನಂದಕುಮಾರ್ ಬಣದ ನಾಯಕರ ಕಾರ್ಯಕರ್ತರ ವಾಕ್ಸಮರ, ಕೈ, ಕೈ ಮಿಲಾಯಿಸಿಕೊಳ್ಳವ ರಣರಂಗಕ್ಕೆ ವೇದಿಕೆಯಾಯಿತು.
ಅಂಬೇಡ್ಕರ್ ಭವನದಲ್ಲಿ ಸಭೆ ಆರಂಭವಾಗಿ ಉಚ್ಚಾಟಿತ ಮುಖಂಡರು ಆಗಮಿಸುತ್ತಿದ್ದಂತೆ ಕೃಷ್ಣಪ್ಪ ಅವರ ಬಣದ ಅಕ್ರೋಶಕ್ಕೆ ಕಾರಣವಾಯಿತು. ಸಭೆ ಮಾತಿನ ಚಕಮಕಿ ಮೂಲಕವೇ ಪ್ರಾರಂಭವಾಯಿತು. ಸ್ವತಃ ಕೃಷ್ಣಪ್ಪ ಅವರೇ ಉಚ್ಚಾಟಿತ ಮುಖಂಡರಿಗೆ, ನೀವು ಈ ಸಭೆಗೆ ಯಾಕೆ ಬಂದಿದ್ದೀರಿ ಎಂದು ಕೇಳಿದರು ಎನ್ನಲಾಗಿದೆ. ಬಳಿಕ ಮುಖಂಡರೋರ್ವರು, ಇಂದಿನ ಈ ಸಭೆಯಲ್ಲಿ ಪಕ್ಷದಿಂದ ಉಚ್ಚಾಟಿತರು ಭಾಗವಹಿಸಲು ಅವಕಾಶವಿದೆಯೇ ಎಂದು ಪ್ರಶ್ನಿಸಿದರು. ಇದರ ಬೆನ್ನಲ್ಲೇ ಮಾತಿನ ಚಕಮಕಿ, ಪರಸ್ಪರ ಹಲ್ಲೆ, ತಳ್ಳಾಟ ನಡೆಯುವ ತನಕ ಮುಟ್ಟಿತು. ಕೃಷ್ಣಪ್ಪ ಬಣದ ಮೂರು ನಾಲ್ಕು ಮಂದಿ ಮುಖಂಡರು ನಂದಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರಿದಂತೆ ನಾಲ್ವರ ಮೇಲೆ ಹಲ್ಲೆ ನಡೆಸಿದ ಆರೋಪವೂ ವ್ಯಕ್ತವಾಗಿದೆ. ನಂದಕುಮಾರ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹಾಕುತ್ತಿದ್ದರು ಎನ್ನುವ ಕಾರಣಕ್ಕೆ ಎಳೆದಾಡಿಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಮಧ್ಯೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ .
ಸೋಲಿನ ಪರಾಮರ್ಶೆ ಅವಲೋಕನ ಮಾಡಲು ಆಗಮಿಸಿದ ಕಾಂಗ್ರೆಸ್ ನಾಯಕರು ಬಣರಾಜಕೀಯದ ಒಳಬೇಗುದಿ ಹೊರಹಾಕಿದ್ದಾರೆ. ಕಾಂಗ್ರೆಸ್ ಉಸ್ತುವಾರಿಯಾಗಿದ್ದ ನಂದಕುಮಾರ್ ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆದು ಸ್ಪಽðಸುವ ಆಕಾಂಕ್ಷೆ ಇಟ್ಟುಕೊಂಡಿದ್ದರು, ಇದರ ಪೂರ್ವಬಾವಿ ಎಂಬಂತೆ ಕ್ಷೇತ್ರದಾದ್ಯಂತ ಓಡಾಡುತ್ತಾ ಹಣ ಖರ್ಚು ಮಾಡಿ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಒಡನಾಟ ಸಂಪಾದಿಸಿದ್ದರು. ಕೃಷ್ಣಪ್ಪ ಅವರು ಕೂಡಾ ಉಸ್ತುವಾರಿಯಾಗಿದ್ದುಕೊಂಡು ತನ್ನದೇ ರೀತಿಯಲ್ಲಿ ಕ್ಷೇತ್ರದಲ್ಲಿ ಓಡಾಟ ನಡೆಸಿಕೊಂಡು ಪಕ್ಷ ಸಂಘಟನೆಗೆ ಪ್ರಯತ್ನಿಸಿದ್ದರು. ಕೃಷ್ಣಪ್ಪ ಅವರಿಗೆ ಪಕ್ಷದ ಟಿಕೇಟು ಘೋಷಣೆ ಯಾದ ಬಳಿಕ ನಂದಕುಮಾರ್ ಅಭಿಮಾನಿಗಳು ತಮ್ಮದೇ ತಂಡ ಕಟ್ಟಿಕೊಂಡು ಕೃಷ್ಣಪ್ಪ ಅವರ ಬದಲಿಗೆ ನಂದಕುಮಾರ್ ಅವರಿಗೆ ಬಿ ಫಾರಂ ನೀಡುವಂತೆ ನಾನಾ ರೀತಿಯ ಒತ್ತಡ ಹಾಕಿದ್ದರೂ ಕೃಷ್ಣಪ್ಪ ಅವರೇ ಅಭ್ಯರ್ಥಿಯಾಗಿ ಉಳಿದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಪಕ್ಷದ ಮುಖಂಡರು ಎರಡೂ ಬಣಗಳನ್ನು ಸೇರಿಸಿ ಮಾತುಕತೆ ನಡೆಸಿ ಗೊಂದಲಕ್ಕೆ ತೆರೆ ಎಳೆದಿದ್ದರು. ಕೆಲವು ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದ್ದರೂ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವಲ್ಲಿ ವಿಫಲರಾದರು.
ಬಳಿಕ ನಡೆದು ಬೆಳವಣಿಗೆಯಲ್ಲಿ ಕೆಲವು ನಾಯಕರಿಗೆ ಪಕ್ಷ ವಿರೋಽ ಚಟುವಟಿಕೆಯ ಪಟ್ಟ ಕಟ್ಟಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಉಚ್ಚಾಟಿತರು ಇದರಿಂದ ಅಸಮಾಧಾನಗೊಂಡಿದ್ದರು. ಕೆಲವರು ಪತ್ರಿಕಾ ಹೇಳಿಕೆ ನೀಡಿ ಅಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನು ಕೆಲವು ನಾಯಕರು ನ್ಯಾಯಕ್ಕಾಗಿ ದೈವದ ಮೊರೆ ಹೋಗಿದ್ದರು. ಬುಧವಾರ ರಾಹುಲ್ ಗಾಂಽಯವರ ಸಂಸತ್ ಸದಸ್ಯತನ ಅನರ್ಹತೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಉಚ್ಚಾಟಿತ ನಾಯಕರು ಭಾಗವಹಿಸಿ ಪಕ್ಷ ನಿಷ್ಠೆಯನ್ನು ಪ್ರದರ್ಶಿಸಿದ್ದರು. ಇದು ಕೃಷ್ಣಪ್ಪ ಬಣದ ಕೆಲವರ ಕೋಪಕ್ಕೆ ಕಾರಣವಾಗಿತ್ತು. ಇದೇ ಬೇಗುದಿ ಕಡಬದ ಪರಾಮರ್ಶೆ ಸಭೆಯಲ್ಲಿ ಸ್ಪೋಟಗೊಂಡಿದೆ.
ರಾಜ್ಯಸಭಾ ಮಾಜಿ ಸದಸ್ಯ ಇಬ್ರಾಹಿಂ, ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಜಿಲ್ಲಾ ಮುಖಂಡೆ ಮಮತಾ ಗಟ್ಟಿ, ಕಾಂಗ್ರೆಸ್ ಮುಖಂಡ ಅಶ್ವಿನಿ ಕುಮಾರ್ ಪರಾಮರ್ಶನ ಸಭೆಯ ವೀಕ್ಷಕರಾಗಿದ್ದರು. ಸಭೆಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ರಾಯ್ ಅಬ್ರಹಾಂ, ಅಶ್ರಫ್ ಶೇಡಿಗುಂಡಿ, ಶರೀಫ್, ಸತೀಶ್ ನಾಯ್ಕ್, ಅಲ್ಲದೆ ಉಚ್ಚಾಟಿತ ಪ್ರಮುಖರಾದ ಬಾಲಕೃಷ್ಣ ಬಳ್ಳೇರಿ, ಪ್ರವೀಣ್ ಕೆಡೆಂಜಿ, ಆಶಾ ಲಕ್ಷ್ಮಣ್, ಜೈನ್ ಆತೂರು, ರಾಮಕೃಷ್ಣ ಹೊಳ್ಳಾರು, ಫೈಝಲ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಅಂಬೇಡ್ಕರ್ ಭವನವನ್ನು ರಾಜಕೀಯ ಸಭೆ ಸಮಾರಂಭಗಳಿಗೆ ನೀಡಿದ್ದು ಪಟ್ಟಣ ಪಂಚಾಯತ್ ತಪ್ಪು ಮಾಡಿದೆ: ಕಡಬ ಅಂಬೇಡ್ಕರ್ ಭವನವನ್ನು ರಾಜಕೀಯ ಸಭೆ ಸಮಾರಂಭಗಳಿಗೆ ನೀಡಬಾರದು ಎಂದು ನಾವು ಹಿಂದೆಯೇ ಮನವಿ ಮಾಡಿದ್ದೆವು. ಜು.14 ರಂದು ಅಂಬೇಡ್ಕರ್ ಭವನವನ್ನು ರಾಜಕೀಯ ಸಭೆಗೆ ನೀಡಿ ಪಟ್ಟಣ ಪಂಚಾಯತ್‌ನವರು ತಪ್ಪು ಮಾಡಿದ್ದಾರೆ. ಅಲ್ಲಿನ ಚಯರ್ ಗಳಿಗೆ ಹಾನಿ ಮಾಡಲಾಗಿದೆ. ಇದಕ್ಕೆ ಪಟ್ಟಣ ಪಂಚಾಯತ್ ಅಽಕಾರಿಗಳೇ ಹೊಣೆಯಾಗಿದ್ದಾರೆ ಎಂದು ಕಡಬ ತಾಲೂಕು ಭೀಮ್ ಆರ್ಮಿ ಅಧ್ಯಕ್ಷ ರಾಘವ ಕಳಾರ ಆರೋಪಿಸಿದ್ದಾರೆ.