ಶ್ವಾನದ ಮರಿಯ ಕುತ್ತಿಗೆಗೆ ಬಿಗಿದ ಹಗ್ಗ- ಮಾನವೀಯತೆ ಮೆರೆದ ರಾಜೇಶ್ ಬನ್ನೂರು

0

ಪುತ್ತೂರು:ಬೀದಿಯಲ್ಲಿ ಬಿಟ್ಟು ಹೋದ ಶ್ವಾನದ ಮರಿಯೊಂದರ ಕುತ್ತಿಗೆಯ ಹಗ್ಗ ಬಿಚ್ಚದೇ ಇದ್ದ ಪರಿಣಾಮ ಕುತ್ತಿಗೆಯ ಸುತ್ತ ಗಂಭೀರ ಗಾಯವಾಗಿರುವುದನ್ನು ಗಮನಿಸಿದ ಶ್ವಾನಪ್ರಿಯ ರಾಜೇಶ್ ಬನ್ನೂರು ಅವರು ವೈದ್ಯರ ಸಹಕಾರದೊಂದಿಗೆ ಶ್ವಾನದ ಕುತ್ತಿಗೆಯ ಹಗ್ಗವನ್ನು ಬಿಚ್ಚಿಸಿ ಗಾಯಕ್ಕೆ ಚಿಕಿತ್ಸೆ ನೀಡಿದ ಘಟನೆ ಜು.14ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆದಿದೆ.

ಅದೆಷ್ಟೋ ಮಂದಿ ಹೆಣ್ಣು ಶ್ವಾನ ಮರಿಗಳನ್ನು ಬೀದಿಯಲ್ಲಿ ಬಿಟ್ಟು ಹೋಗುತ್ತಾರೆ.ಆದರೆ ಹಾಗೆ ಬೀದಿಪಾಲಾದ ಶ್ವಾನದ ಮರಿಗೆ ಅನ್ನ ಹಾಕುವ ರಾಜೇಶ್ ಬನ್ನೂರು ಅವರು ದೇವಳದ ಗದ್ದೆಯ ಬಳಿ ಕುತ್ತಿಗೆ ಬಿಗಿತದಿಂದ ಸಂಕಟಪಡುತ್ತಿದ್ದ ಶ್ವಾನದ ಮರಿಯನ್ನು ಗಮನಿಸಿ ಪಶು ವೈದ್ಯ ಡಾ.ಪ್ರಸನ್ನ ಹೆಬ್ಬಾರ್ ಅವರಿಗೆ ಮಾಹಿತಿ ನೀಡಿದರು.ಅವರು ಬಂದ ಬಳಿಕ ದೇವಳದ ನಿತಿನ್‌ರವರ ಸಹಕಾರದೊಂದಿಗೆ ಶ್ವಾನದ ಕುತ್ತಿಗೆಯ ಹಗ್ಗವನ್ನು ತುಂಡರಿಸಿ, ಅದರ ಕುತ್ತಿಗೆ ಸುತ್ತ ಉಂಟಾಗಿದ್ದ ಗಂಭೀರ ಗಾಯಕ್ಕೆ ಔಷಧ ಹಾಕಿದ್ದಾರೆ.ಸದ್ಯ ಶ್ವಾನ ಬದುಕಿದ್ದು ದೇವಳದ ಬಳಿಯಿದೆ.ಯಾರೋ ಮಾನವರು ಶ್ವಾನದ ಕುತ್ತಿಗೆಯ ಹಗ್ಗವನ್ನು ಬಿಗಿದು ಬೀದಿಗೆ ಬಿಟ್ಟಿದ್ದಾರೆ. ಅವರಿಗೆ ಮಾನವೀಯತೆ ಇದ್ದರೆ ಕುತ್ತಿಗೆಯ ಹಗ್ಗವನ್ನು ಬಿಚ್ಚಿ ಬಿಡುತ್ತಿದ್ದರು.ಶ್ವಾನ ಬೆಳೆಯುವಾಗ ಅದರ ಕುತ್ತಿಗೆಯ ಹಗ್ಗ ಬಿಗಿಯುತ್ತದೆ ಎಂದು ರಾಜೇಶ್ ಬನ್ನೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here