ಯುವಜನ ಮೇಳಗಳಿಗೆ ಅನುದಾನ ನೀಡಲುಶಾಸಕಿ ಭಾಗೀರಥಿ ಮುರುಳ್ಯ ವಿಧಾನಸಭೆಯಲ್ಲಿ ಆಗ್ರಹ

0

ಕಾಣಿಯೂರು: ಇಲಾಖಾ ವತಿಯಿಂದ ಈ ಹಿಂದೆ ನಡೆಯುತ್ತಿದ್ದ ಯುವಜನ ಮೇಳಗಳು ಮತ್ತೆ ನಡೆಯಬೇಕು. ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಯುವಜನ ಮೇಳಗಳಿಗೆ ಸರಕಾರದಿಂದ ಎರಡು ಲಕ್ಷ ರೂ. ಅನುದಾನ ನೀಡಬೇಕು ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾರೆ. ಜಾನಪದ ಹಾಗೂ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಪ್ರೋತ್ಸಾಹಿಸಲು ಮತ್ತು ಯುವಕ, ಯುವತಿಯರ ಪ್ರತಿಭೆ ಅನಾವರಣಕ್ಕೆ ಪ್ರೋತ್ಸಾಹ ನೀಡಲು ಯುವಜನ ಮೇಳಗಳು ಸಹಾಯಕವಾಗಿತ್ತು. ಈ ಹಿನ್ನಲೆಯಲ್ಲಿ ಯುವಜನ ಮೇಳಗಳನ್ನು ಸರಕಾರ ಮುಂದುವರಿಸಬೇಕು. ತಾಲೂಕು ಮಟ್ಟದ ಯುವಜನ ಮೇಳಕ್ಕೆ ಎರಡು ಲಕ್ಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು. ಯುವಜನ ಮೇಳದ ಬಗ್ಗೆ ಪ್ರಶ್ನಿಸಿದರೆ ಯುವಜನೋತ್ಸವ ಅಂತ ಉತ್ತರ ಬಂದಿದೆ. ಯುವಜನೋತ್ಸವ ಬೇಡ, ಯುವ ಜನೋತ್ಸವದಲ್ಲಿ ಎಲ್ಲಾ ಸ್ಪರ್ಧಾ ವಿಭಾಗಗಳು ಸೇರುವುದಿಲ್ಲ. ಆದುದರಿಂದ ಯುವಜನ ಮೇಳಗಳು ಮುಂದುವರಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದಕ್ಕೆ ಉತ್ತರಿಸಿದ ಇಲಾಖಾ ಸಚಿವ 1980ರಿಂದ ಇಲಾಖೆಯಿಂದ ಯುವಜನ ಮೇಳ ನಡೆಸುತ್ತಾ ಬಂದಿದೆ. ಅನುದಾನದ ಕೊರತೆಯಿಂದ 2018 ರಿಂದ 2022ರವರೆಗೆ ಯುವಜನ ಮೇಳಗಳಿಗೆ ಅನುದಾನ ಬಿಡುಗಡೆ ಆಗಿಲ್ಲ. ಇಲಾಖೆಯಲ್ಲಿ ಚರ್ಚಿಸಿ ಮುಂದೆ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here