ಅಂತರಾಷ್ಟ್ರೀಯ ಖ್ಯಾತಿಯ ಸುನ್ನಿ ಪಂಡಿತ ಸಯ್ಯದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ಸುಳ್ಯಕ್ಕೆ ಆಗಮನ- ಹರ್ಲಡ್ಕ ವಿಲ್ಲಾ ಉದ್ಘಾಟನೆ ಯಲ್ಲಿ ಭಾಗಿ

0

ಕೇರಳದ ಮಲಪ್ಪುರo ಜಿಲ್ಲೆಯ ಮಅದ್ದೀನ್ ಅಕಾಡೆಮಿಯ ಸ್ಥಾಪಕರು, ಅಂತರಾಷ್ಟ್ರೀಯ ಭಾವೈಕ್ಯ ವೇದಿಕೆಯ ಮುಖ್ಯ ಸಲಹೆಗಾರರಾದ ಸಯ್ಯದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಞಳ್ ಸುಳ್ಯಕ್ಕೆ ಭೇಟಿ ನೀಡಿ ಮುತಅಲ್ಲಿಂ ಸಂಗಮದಲ್ಲಿ ಭಾಗಿಯಾಗಿದ್ದಾರೆ. ಬಳಿಕ ನಾವೂರು ಅನ್ಸಾರಿಯಾ ಬಳಿ ಉದ್ಯಮಿ ಅಬ್ದುಲ್ ಲತೀಫ್ ಹರ್ಲಡ್ಕ ನಿರ್ಮಿಸಿರುವ ನೂತನ ಮನೆ ಹರ್ಲಡ್ಕ ವಿಲ್ಲಾ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಅದೂರ್ ಮಜಲಿಸ್ ಅಶ್ರಫ್ ತಂಞಳ್, ಹದ್ದಾದ್ ತಂಞಳ್, ಹಸನುಲ್ ಅಹದಲಿ ತಂಞಳ್, ಇಸ್ಮಾಯಿಲ್ ಹಾದಿ ತಂಞಳ್, ಕೆಪಿಸಿಸಿ ವಕ್ತಾರ ಟಿ. ಎಂ. ಶಹೀದ್ ಗಾಂಧಿನಗರ ಜಮಾಅತ್ ಅಧ್ಯಕ್ಷ ಕೆ. ಎಂ. ಮುಸ್ತಫ ಮೊದಲಾದವರು ಉಪಸ್ಥಿತರಿದ್ದರು. ಸುಳ್ಯ ಭೇಟಿಯ ಸವಿನೆನಪಿಗೆ ತಂಞಳ್ ರವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here