ಪುತ್ತೂರು: ಕಟ್ಟತ್ತಾರಿನ ಅನಿವಾಸಿಗರ ಸಂಘಟನೆ ಸಮಸ್ತ ಗಲ್ಫ್ ಬ್ರದರ್ಸ್ ಇದರ 5ನೇ ವಾರ್ಷಿಕ ಮಹಾಸಭೆ ಶರೀಫ್ ಮುಗುಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಮೀರ್ ಪೈಝಿ ಪ್ರಾರ್ಥನೆ ಮೂಲಕ ಮಹಾಸಭೆ ಉದ್ಘಾಟಿಸಿದರು. ನವಾಝ್ ಪ್ರಾಸ್ತಾವಿಕ ಭಾಷಣ ಮಾಡಿದರು. ಖಾದರ್ ನಿಡ್ಯಾಣ ವಾರ್ಷಿಕ ವರದಿ ಮಂಡಿಸಿದರು. ಅಧ್ಯಕ್ಷತೆ ವಹಿಸಿದ್ದ ಶರೀಫ್ ಮುಗುಳಿ ಮಾತನಾಡಿ ಕಳೆದ ವರ್ಷ ಸಂಘಟನೆ ಮೂಲಕ ಮಾಡಿದ ಕಾರ್ಯಚಟುವಟಿಕೆಯನ್ನು ವಿವರಿಸಿದರು.
ಗೌರವಾಧ್ಯಕ್ಷ ಝುಬೈರ್ ಹಾಜಿ ಚುನಾವಣಾಧಿಕಾರಿಯಾಗಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಸಮಸ್ತ ಗಲ್ಫ್ ಬ್ರದರ್ಸ್ ಕಟ್ಟತ್ತಾರು ಸಮಿತಿಯ 2023-2024ನೇ ಸಾಲಿನ ಗೌರವಾಧ್ಯಕ್ಷರಾಗಿ ಕೆ.ಎ.ಶರೀಫ್ ದುಬೈ, ಅಧ್ಯಕ್ಷರಾಗಿ ಶರೀಫ್ ಮುಗುಳಿ ಸೌದಿ ಅರೇಬಿಯಾ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮೂಸಲ್ ಕರೀಂ ಬದ್ರಿಯಾ ದುಬೈ ಅವರನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಬಶೀರ್ ನಂಜೆ ಮಸ್ಕತ್, ಉಪಾಧ್ಯಕ್ಷರಾಗಿ ಹನೀಫ್ ಬದ್ರಿಯಾ ದಬೈ ಸಂಘಟನಾ ಕಾರ್ಯದರ್ಶಿಯಾಗಿ ಖಾದರ್ ನಿಡ್ಯಾಣ ದುಬೈ, ಜೊತೆ ಕಾರ್ಯದರ್ಶಿಯಾಗಿ ನವಾಝ್ ದುಬೈ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಝುಬೈರ್ ಹಾಜಿ ಮಸ್ಕತ್, ರೌಫ್ ಬಿ.ಎಸ್ ಶಾರ್ಜಾ, ಸಲಾಂ ಮಲ್ಲಕ್ಕೂಟ ಕತಾರ್, ಇಕ್ಬಾಲ್ ಕೆ ಎಸ್ ಅಬುಧಾಬಿ, ಜಾಬಿರ್ ದುಬೈ, ಮುಸ್ತಫಾ ಬಿ.ಎಂ ಸೌದಿ ಅರೇಬಿಯಾ, ಇಬ್ರಾಹಿಂ ಹಝ್ರತ್ ಕತಾರ್ ಆಯ್ಕೆಯಾದರು. ಕೆ.ಎ ಶರೀಫ್ ವಂದಿಸಿದರು.