ಪುತ್ತೂರು: ನವ ತಲೆಮಾರಿಗೆ ಧಾರ್ಮಿಕ ಜ್ಞಾನವನ್ನು ಧಾರೆಯೆರೆದು ಅವರನ್ನು ಸುಸಂಸ್ಕೃತ ಪ್ರಜೆಗಳಾಗಿ ರೂಪಿಸುವಲ್ಲಿ ಮದ್ರಸ ಅಧ್ಯಾಪಕರ ಸೇವೆಯು ಮಹತ್ತರವಾಗಿದೆಯೆಂದು ಬಪ್ಪಳಿಗೆ ಮಸೀದಿಯ ಖತೀಬರಾದ ಸಿರಾಜುದ್ದೀನ್ ಫೈಝಿ ನುಡಿದರು. ಅವರು ಬಪ್ಪಳಿಗೆ ಮದ್ರಸದಲ್ಲಿ ನಡೆದ ಮುಅಲ್ಲಿಂ ಡೇ ಆಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಜಮಾಅತ್ ಸಮಿತಿ ಅಧ್ಯಕ್ಷರಾದ ಹಾಜೀ ಅಬ್ದುಲ್ ಹಮೀದ್ ಲವ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮದ್ರಸ ಮುಖ್ಯೋಪಾಧ್ಯಾಯರಾದ ಶಾಫಿ ಮೌಲವಿ ಸಂದೇಶ ಭಾಷಣ ಮಾಡಿದರು.
ಯುವಕ ಸಮಿತಿಯಿಂದ ಗೌರವಾರ್ಪಣೆ:
ಅನ್ಸಾರುಲ್ ಇಸ್ಲಾಂ ಯುವಕ ಸಮಿತಿ ಆಶ್ರಯದಲ್ಲಿ ಮದ್ರಸದಲ್ಲಿ ಸೇವೆ ಸಲ್ಲಿಸುತ್ತಿರುವ ಮುಅಲ್ಲಿಮರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
SKSBV ಆಶ್ರಯದಲ್ಲಿ ಮದ್ರಸ ವಿದ್ಯಾರ್ಥಿಗಳು ಅಧ್ಯಾಪಕರಿಗೆ ಕಿರು ನಗದನ್ನು ಕಾಣಿಕೆಯಾಗಿ ನೀಡಿ ಸನ್ಮಾನಿಸಿದರು.
ಮುಅಲ್ಲಿಂ ಸಹಾಯ ಫಂಡ್ ಹಸ್ತಾಂತರ ಮುಅಲ್ಲಿಮರ ಕ್ಷೇಮಾಭಿವೃದ್ಧಿಗಾಗಿ ಕೇಂದ್ರ ಸಮಿತಿಯು ಹಮ್ಮಿಕೊಂಡ ನಾನೋನ್ಮುಖ ಕಾರ್ಯ ಚಟುವಟಿಕೆಗಳಿಗೆ ಕೋಟ್ಯಂತರ ರೂಪಾಯಿಗಳ ವೆಚ್ಚ ತಗಲುತ್ತಿದ್ದು,ಈ ಕಾರ್ಯಕ್ರಮಗಳ ಸಹಾಯಕ್ಕಾಗಿ ಮೊಹಲ್ಲಾದಲ್ಲಿ ಸಂಗ್ರಹಿಸಿದ ಐದು ಸಾವಿರ ರೂಪಾಯಿ ಸಹಾಯಧನವನ್ನು ಮಸೀದಿ -ಮದ್ರಸ ಸಮಿತಿ ಅಧ್ಯಕ್ಷ ರಾದ ಲವ್ಲಿ ಹಮೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಯು.ಕೆ.ಕೋಶಾಧಿಕಾರಿ ಪಿ.ಕೆ.ಮುಹಮ್ಮದ್ ರವರು ಸದ್ರ್ ಉಸ್ತಾದರ ಮೂಲಕ ರೇಂಜ್ ಗೆ ವರ್ಗಾಯಿಸಿದರು.
ಮದ್ರಸ ವಿದ್ಯಾರ್ಥಿಗಳಾದ ಸಾಬಿತ್,ಮುಬೀನ್,ರಈಸ್, ಸಫ್ವಾನ್ ರವರಿಂದ ಇಶಲ್ ಡೇ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಮಾರಂಭದಲ್ಲಿ ಡಾಕ್ಟರ್ ನಝೀರ್ ಅಹ್ಮದ್ ಶುಭಕೋರಿ ಮಾತನಾಡಿದರು. ಮಸೀದಿಯ ಮಾಜಿ ಅಧ್ಯಕ್ಷರಾದ ಬಿ.ಹೆಚ್.ಮುಹಮ್ಮದ್ ಹಾಜಿ, ಅಧ್ಯಾಪಕರಾದ ಉಮರ್ ಮುಸ್ಲಿಯಾರ್, ಅಬ್ದುಲ್ ರವೂಫ್ ಮನ್ನಾನಿ, ಅಬ್ದುಲ್ಲಾ ಹಾಜಿ, ಅಬ್ದುಲ್ ಅಝೀಝ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಜಮಾಅತ್ ಬಾಂಧವರು ಯುವಕ ಸಮಿತಿ ಕಾರ್ಯಕರ್ತರು ಭಾಗವಹಿಸಿದ್ದರು. ಮದ್ರಸ ಅಧ್ಯಾಪಕ ತಮೀಂ ಅನ್ಸಾರಿ ಸ್ವಾಗತಿಸಿ ವಂದಿಸಿದರು.
ಸಾಮೂಹಿಕ ಖಬರ್ ಝಿಯಾರತ್ ಹಾಗೂ ದುಆಃ ಕಾರ್ಯಕ್ರಮದ ಪ್ರಾರಂಭದಲ್ಲಿ ಕಬರ್ ಝಿಯಾರತ್ ನಡೆಸಿ, ಖತ್ಮುಲ್ ಕುರ್ಆನ್ ಹದಿಯಾ ಮಾಡಿ ದುಆಃ ಮಾಡಲಾಯಿತು.