ಕೆದಿಲ ಅನುದಾನಿತ ಸರಕಾರಿ ಶಾಲೆಗೆ ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

0

117 ವರ್ಷದ ಸರಕಾರಿ ಶಾಲೆ ಉಳಿಸುವಲ್ಲಿ ಸಹಕಾರ ನೀಡುವಂತೆ ಊರವರ ಮನವಿ


ಪುತ್ತೂರು: ಬಂಟ್ವಾಳ ತಾಲೂಕು ವ್ಯಾಪ್ತಿಯ ಕೆದಿಲ ಸರಕಾರಿ ಅನುದಾನಿತ ಹಿ ಪ್ರಾ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಉಂಟಾಗಿದ್ದು ಈ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಮತ್ತು ಸ್ಥಳೀಯ ಶಿಕ್ಷಣ ಪ್ರೇಮಿಗಳು ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಿದ್ದು ಪುತ್ತೂರು ಶಾಸಕ ಅಶೋಕ್ ರೈ ಭೇಟಿ ನೀಡಿ ಪ್ರಮುಖರ ಜೊತೆ ಮಾತುಕತೆ ನಡೆಸಿದರು.


ಈ ಸಂದರ್ಬದಲ್ಲಿ ಮಾತನಾಡಿದ ಶಾಲಾ ಸಂಚಾಲಕ ಚಂದ್ರಶೇಖರ ಬಟ್ ಕುಕ್ಕಜೆ, ರವರು ಕೆದಿಲ ಅನುದಾನಿತ ಸರಕಾರಿ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿ ತನಕ ಕನ್ನಡ ಮಾಧ್ಯಮ ತರಗತಿಗಳು ನಡೆಯುತ್ತಿದೆ. ಶಾಲೆಯಲ್ಲಿ 32 ಮಂದಿ ವಿದ್ಯಾರ್ಥಿಗಳಿದ್ದು ಓರ್ವ ಶಿಕ್ಷಕರೂ ಇದ್ದಾರೆ. ಈ ಶಾಲೆಗೆ 117 ವರ್ಷಗಳ ಇತಿಹಾಸವಿದೆ. ಈ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಸೇರಿ ಇಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭ ಮಾಡುತ್ತಿದ್ದೇವೆ. ಸರಕಾರದಿಂದ ಸಹಾಯವನ್ನು ನಾವು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಶಾಸಕರಲ್ಲಿ ಮನವಿ ಮಾಡಿದರು. ಸ್ಥಳೀಯ ವಿದ್ಯಾರ್ಥಿಗಳು ಪುತ್ತೂರು ನಗರದ ಶಾಲೆಗೆ ಶಿಕ್ಷಣಕ್ಕಾಗಿ ತೆರಳುತ್ತಿದ್ದು ಇಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ವ್ಯವಸ್ಥೆ ಇಲ್ಲದೆ ಇರುವ ಕಾರಣ ವಿದ್ಯಾರ್ಥಿಗಳ ದಾಖಲಾತಿಯೂ ಇಲ್ಲದಂತಾಗಿದೆ ಎಂದು ಶಾಸಕರಿಗೆ ತಿಳಿಸಿದರು.


ಈ ಸಂದರ್ಭದಲ್ಲಿ ಅಧ್ಯಕ್ಷ ಚಂಧ್ರಶೇಖರ ಭಟ್ ಬಡೆಕ್ಕಿಲ, ಕೋಶಾಧಿಕಾರಿ ಕೃಷ್ಣಮೂರ್ತಿ,ಕಟ್ಟಡ ಸಮಿತಿ ಉಪಾಧ್ಯಕ್ಷ , ಸದಸ್ಯರಾದ ಉದಯಕೃಷ್ಣ ಬೀಡಿಗೆ, ಸತ್ಯನಾರಾಯಣ ಇಂಜಿನಿಯರ್, ಸುಬ್ರಹ್ಮಣ್ಯ ಬೀಡಿಗೆ, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ, ಸುಭ್ರಾಯ ಭಟ್‌ ಅಂಡಪುಣಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here