





ಪುತ್ತೂರು: ಕುರಿಯ ಉಳ್ಳಾಲ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನದ ವತಿಯಿಂದ ಜು.16ರಂದು ಯಕ್ಷಗಾನ ತಾಳಮದ್ದಳೆ ನಡೆಯಿತು.



ಡಿಂಬ್ರಿ ಗುತ್ತು ಕೊರಗಪ್ಪ ರೈ ಹಾಗೂ ವಸಂತಿ ರೈ ಇವರ ಸೇವಾರ್ಥ ರಂಗಪೂಜೆ ಹಾಗೂ ’ಭೀಷ್ಮ ಪ್ರತಿಜ್ಞೆ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಜಯಪ್ರಕಾಶ್ ನಾಕೂರು, ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶಂತನು), ಗುಂಡ್ಯಡ್ಕ ಈಶ್ವರ ಭಟ್ (ದಾಶರಾಜ ), ಭಾಸ್ಕರ ಶೆಟ್ಟಿಸಾಲ್ಮರ (ಮತ್ಸ್ಯಗಂಧಿ) ಗುಡ್ಡಪ್ಪ ಬಲ್ಯ (ದೇವವೃತ)ಸಹಕರಿಸಿದರು. ರವೀಂದ್ರನಾಥ ರೈ ಬಳ್ಳಮಜಲಉ ಸ್ವಾಗತಿಸಿ, ಉದ್ಯಮಿ ಅರುಣ್ ರೈ ವಂದಿಸಿದರು.














