ಪುತ್ತೂರು: ಬೆಟ್ಟಂಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯಲಿರುವ 38ನೇ ವರುಷದ ಗಣೇಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಹಾಗೂ ವಿವಿಧ ಸಮಿತಿ ರಚನೆಯ ಸಭೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜು.17ರಂದು ನಡೆಯಿತು. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾವಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಅಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಬಳಿಕ ಗಣೇಶೋತ್ಸವ ಕಾರ್ಯಕ್ರಮ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ರಚನೆ ಮಾಡಲಾಯಿತು.
ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಕೋಶಾಧಿಕಾರಿ ರಂಜಿತ್ ತಲೆಪ್ಪಾಡಿ, ಸದಸ್ಯರಾದ ಅರುಣ್ ಪ್ರಕಾಶ್ ರೈ ಮದಕ, ಸೀತಾರಾಮ ಗೌಡ ಮಿತ್ತಡ್ಕ, ಡಾ.ಸುಬ್ರಹ್ಮಣ್ಯ ವಾಗ್ಲೆ, ಕೃಷ್ಣಪ್ರಸಾದ್ ಬೆಟ್ಟಂಪಾಡಿ, ದಾಮೋದರ ಕಜೆ, ಸಂತೋಷ್ ರೈ ಗುತ್ತು, ತಿಲಕ್‌ರಾಜ್ ಕಜೆ, ಸತೀಶ್ ಗೌಡ ಪಾರ, ಸನತ್ ಕುಮಾರ್ ರೈ ತೋಟದಮೂಲೆ, ಜಗದೀಶ್ ಸುವರ್ಣ ಬದಿನಾರು, ಶೇಷನ್ ಪಾರ, ಗಣೇಶ್ ಹೊಳ್ಳ ಪಾರ, ಯತೀಶ್ ಕೋರ್ಮಂಡ, ವಿಜೇಶ್, ವಿಶಾಖ್‌ರಾಜ್, ಯೋಗಿಶ್ ಸುವರ್ಣ ಬದಿನಾರು, ಉದಯ ಕಕ್ಕೂರು, ಸತೀಶ್ ರೈ ಮೂರ್ಕಾಜೆ, ರಮೇಶ್ ಗೌಡ ಬಳ್ಳಿತ್ತಡ್ಡ, ಕೃಷ್ಣಪ್ರಸಾದ್ ಹೊಳ್ಳ, ಶರತ್ ಕುಮಾರ್ ಪಾರ, ಹರಿಪ್ರಸಾದ್ ಬೆಟ್ಟಂಪಾಡಿ, ಬಾಲಕೃಷ್ಣ ರೈ ಮೂರ್ಕಾಜೆ, ಶೇಷಪ್ಪ ರೈ ಮೂರ್ಕಾಜೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಧನಂಜಯ ರೆಂಜ ಸ್ವಾಗತಿಸಿ ಶಿವಪ್ರಸಾದ್ ತಲೆಪ್ಪಾಡಿ ವಂದಿಸಿದರು.