ಗ್ಯಾರಂಟಿ ಯೋಜನೆಗಳ ನೋಂದಣಿಗೆ ವ್ಯವಸ್ಥೆ: ಕಾವು ಹೇಮನಾಥ ಶೆಟ್ಟಿ
ಪುತ್ತೂರು: ರಾಜ್ಯದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ನೋಂದಣಿಗಾಗಿ ಇಂದಿರಾ ಸೇವಾ ಸಿಂಧು ಕೇಂದ್ರವನ್ನು ನಿಡ್ಪಳ್ಳಿ ಗ್ರಾಮದ ತಂಬುತ್ತಡ್ಕದಲ್ಲಿ ಪ್ರಾರಂಭ ಮಾಡಲಾಗಿದ್ದು, ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಪಾಣಾಜೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಭಾರತಿ ಶಿವಪ್ಪ ಪೂಜಾರಿ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ, ನಗರ ಸಭೆಯ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಲಾನ್ಸಿ ಮಸ್ಕರೇನಸ್, ಕೃಷ್ಣ ಪ್ರಸಾದ್ ಆಳ್ವಾ, ರಾಜ್ಯ ಎನ್ ಎಸ್ ಯುಐನ ಉಪಾಧ್ಯಕ್ಷ ಫಾರೂಕ್ ಬಾಯಬೇ, ಶಮೂನ್ ಹಾಜಿ ಪರ್ಲಡ್ಕ, ಬಷೀರ್ ಪರ್ಲಡ್ಕ, ಹನೀಫ್ ಪುಣ್ಚತ್ತಾರ್, ಮೋನಪ್ಪ ಪೂಜಾರಿ ಕೆರೆಮಾರು, ಗ್ರಾಮ ಪಂಚಾಯತ್ ಸದಸ್ಯೆ ಗ್ರೇಟಾ ಡಿ ಸೋಜಾ, ಪ್ರಖ್ಯಾತ್ ಸಾಲ್ಯಾನ್, ಹರೀಶ್ ಕೋಟ್ಯಾನ್ ನಿಡ್ಪಳ್ಳಿ, ಅಶೋಕ್ ಸಂಪ್ಯ, ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಒಂದನೇ ವಾರ್ಡ್ ನ ಅಭ್ಯರ್ಥಿ ಸತೀಶ್ ಶೆಟ್ಟಿ ಯವರು ನವೀನ್ ನಾಯ್ಕ್ ಬೆದ್ರಾಳ, ಲಕ್ಷ್ಮಣ ನಾಯ್ಕ ಕೋಡಿ, ಬಾಲಚಂದ್ರ ಮಣಿಯಾಣಿ, ಆಲಿ ಕುಂಞಿ ತಂಬುತಡ್ಕ, ಗ್ರಾಮ ಪಂಚಾಯತ್ ಸದಸ್ಯ ಅವಿನಾಶ್ ರೈ ಕುಡ್ಚಿಲ, ತಾರಾನಾಥ್ ನುಲಿಯಾಲು, ಭಾಸ್ಕರ ಕರ್ಕೇರ, ತುಕಾರಾಮ್ ದೊಂಬಟಕೇರಿ ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.