ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ

0

ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ದಿನವನ್ನು ಆಚರಿಸಲಾಯಿತು.

ಗಣ್ಯರು ಗಿಡ ನೆಟ್ಟು ಸಾಂಕೇತಿಕವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಐದನೇ ತರಗತಿಯ ಜೀಯಾ ‘ವನಮಹೋತ್ಸವದ ಮಹತ್ವ’ ಇದರ ಕುರಿತು ಕಿರು ಭಾಷಣ ನೀಡಿದರು.


2023-24ನೇ ಶೈಕ್ಷಣಿಕ ಸಾಲಿನ ರಕ್ಷಕ -ಶಿಕ್ಷಕ ಸಂಘದ ಉಪಾಧ್ಯಕ್ಷ ವಿವೇಕ್ ಆಳ್ವ ಇವರು ಮಾತನಾಡಿ “ಮರಗಳ ಸಂಖ್ಯೆ ಕ್ಷೀಣಿಸುವುದು ಗಂಭೀರ ಸಮಸ್ಯೆಯಾಗಿದೆ ಹಾಗಾಗಿ ಮುಂದಿನ ಪೀಳಿಗೆಯ ಭವಿಷ್ಯವನ್ನು ಸದೃಢವನ್ನಾಗಿ ಮಾಡಲು ಗಿಡ ನೆಟ್ಟು ಅದನ್ನು ಪೋಷಿಸಿ, ಪ್ರಾಣಿ -ಪಕ್ಷಿಗಳೂ ಸೇರಿದಂತೆ ಇಡೀ ಪರಿಸರವನ್ನು ಸಂರಕ್ಷಿಸುವುದು, ವಿದ್ಯಾರ್ಥಿಗಳಾದ ನಮ್ಮೆಲ್ಲರ ಕರ್ತವ್ಯ” ಎಂದು ಮನಮುಟ್ಟುವಂತೆ ಹೇಳಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಯಿದೆ ದೇವುಸ್ ಚರ್ಚಿನ ಸಹಾಯಕ ಧರ್ಮಗುರು ಅತೀ ವಂದನೀಯ ಲೋಹಿತ್ ಮಸ್ಕರೇನ್ಹಸ್ ಮಾತನಾಡಿ “ಗಿಡ ನೆಡುವುದರ ಜೊತೆಗೆ ಪ್ಲಾಸ್ಟಿಕ್ ಮಿತ ಬಳಕೆ ಹಾಗೂ ಮರುಬಳಕೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು .


ಬಳಿಕ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಅರ್ಥಪೂರ್ಣ ಗೀತೆ , ನೃತ್ಯ ಸೇರಿದಂತೆ ಕಿರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವನಮಹೋತ್ಸವದ ಅಂಗವಾಗಿ ಭಾರತ್ ಸ್ಕೌಟ್-ಗೈಡ್ ವಿದ್ಯಾರ್ಥಿಗಳಿಂದ ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಆರಾಧ್ಯ ಸ್ವಾಗತಿಸಿ, ವೆಲೆನ್ ಡಿಸೋಜಾ ವಂದಿಸಿದರು. ಆಶಿತಾ ಡಿಸೋಜಾ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here