ಪುತ್ತಿಲ ಪರಿವಾರ ಒಳಮೊಗ್ರು ಗ್ರಾಮ ಸಮಿತಿ ರಚನೆ

0

ಅಧ್ಯಕ್ಷ ರಿತೇಶ್ ರೈ ಕೋಡಿಬೈಲು, ಕಾರ್ಯದರ್ಶಿ ಶರತ್ ಕುಮಾರ್

ಪುತ್ತೂರು: ಪುತ್ತಿಲ ಪರಿವಾರ ಒಳಮೊಗ್ರು ಗ್ರಾಮ ಸಮಿತಿ ರಚನೆಯು ಇತ್ತೀಚೆಗೆ ಮುಂಡಾಲ ಮರಾಠಿ ಸಮಾಜಭವನದಲ್ಲಿ ನಡೆಯಿತು. ಒಳಮೊಗ್ರು ಗ್ರಾಮ ಸಮಿತಿ ಅಧ್ಯಕ್ಷರಾಗಿ ರಿತೇಶ್ ರೈ ಕೋಡಿಬೈಲು ಮತ್ತು ಕಾರ್ಯದರ್ಶಿಯಾಗಿ ಶರತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.


ಉಳಿದಂತೆ ಬೂತ್ ಸಂಖ್ಯೆ 159ರಲ್ಲಿ ಅಧ್ಯಕ್ಷರಾಗಿ ಉದಯ, ಕಾರ್ಯದರ್ಶಿಯಾಗಿ ಸುರೇಶ್, ಬೂತ್ ಸಂಖ್ಯೆ 160ರಲ್ಲಿ ಅಧ್ಯಕ್ಷರಾಗಿ ಪ್ರಸನ್ನ, ಕಾರ್ಯದರ್ಶಿಯಾಗಿ ಜಗದೀಶ್, ಬೂತ್ 161ರಲ್ಲಿ ಅಧ್ಯಕ್ಷರಾಗಿ ಸತೀಶ್, ಕಾರ್ಯದರ್ಶಿಯಾಗಿ ಸಂದೇಶ್, ಬೂತ್ 162ರಲ್ಲಿ ಅಧ್ಯಕ್ಷರಾಗಿ ಮೋಹನ್ ರೈ, ಕಾರ್ಯದರ್ಶಿಯಾಗಿ ಸಚಿನ್, ಬೂತ್ 163ರಲ್ಲಿ ಅಧ್ಯಕ್ಷರಾಗಿ ಸತೀಶ್ ರೈ ನೀರ್ಪಾಡಿ, ಕಾರ್ಯದರ್ಶಿಯಾಗಿ ಮನೋಜ್ ಶೆಟ್ಟಿ, ಬೂತ್ 164ರಲ್ಲಿ ಅಧ್ಯಕ್ಷರಾಗಿ ಹರಿಪ್ರಸಾದ್, ಕಾರ್ಯದರ್ಶಿಯಾಗಿ ಪದ್ಮನಾಭ ಅವರನ್ನು ಆಯ್ಕೆ ಮಾಡಲಾಗಿದೆ. ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಉಮೇಶ್ ಕೋಡಿಬೈಲು, ರೂಪೇಶ್ ನಾಯ್ಕ್, ಸಂಪತ್ ರೈ ಗ್ರಾಮದ ಸಲಹೆಗಾರ ಮೋಹನ್‌ದಾಸ್ ರೈ ಅವರು ಆಯ್ಕೆ ಪ್ರಕ್ರಿಯೆ ನಡೆಸಿದರು.


LEAVE A REPLY

Please enter your comment!
Please enter your name here