ವಿಜಯಾ ಬ್ಯಾಂಕ್‌ ನಿವೃತ್ತ ಸೀನಿಯರ್‌ ಮೆನೇಜರ್‌ ಮುಂಡಾಳಗುತ್ತು ರಾಮಕೃಷ್ಣ ರೈರವರಿಗೆ ಶ್ರದ್ಧಾಂಜಲಿ

0

ಖುಷಿ, ಸಂತೋಷದಿಂದ ಜೀವನ ಸಾಗಿಸಿದ ರಾಮಕೃಷ್ಣ ರೈ- ಚಿಲ್ಮೆತ್ತಾರು ಜಗಜೀವನ್‌ದಾಸ್‌ ರೈ


ರಾಮಕೃಷ್ಣ ರೈರವರದ್ದು ಮುಗ್ದ ಮನಸು- ಅರಿಯಡ್ಕ ಕೃಷ್ಣ ರೈ

ಪುತ್ತೂರು: ವಿಜಯಾ ಬ್ಯಾಂಕ್‌ ನಿವೃತ್ತ ಸೀನಿಯರ ಮೆನೇಜರ್‌ ಮುಂಡಾಳಗುತ್ತು ರಾಮಕೃಷ್ಣ ರೈಯವರ ಉತ್ತರಕ್ರಿಯೆಯು ಜು. 19 ರಂದು ಪುತ್ತೂರು ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಜರಗಿತು. ಈ ಸಂದಭದಲ್ಲಿ ಶ್ರದ್ಧಾಂಜಲಿ ಸಭೆ ಜರಗಿತು.

ಚಿತ್ರ- ಉಮಾಪ್ರಸಾದ್‌ ರೈ ನಡುಬೈಲು


ಪುತ್ತೂರು ತಾಲೂಕು ಬಂಟರ ಸಂಘದ ಉಪಾಧ್ಯಕ್ಷ ಚಿಲ್ಮೆತ್ತಾರು ಜಗಜೀವನ್‌ದಾಸ್‌ ರೈರವರು ಮಾತನಾಡಿ ಕುಟುಂಬದ ಮೇಲೆ ಅಕ್ಕರೆ ಅಭಿಮಾನವನ್ನು ಹೊಂದಿದ್ದ ಮುಂಡಾಳಗುತ್ತು ರಾಮಕೃಷ್ಣ ರೈಯವರು ತನ್ನ ಬದುಕನ್ನು ಅತ್ಯಂತ ಖುಷಿ ಮತ್ತು ಸಂತೋಷದಿಂದ ಸಾಗಿಸಿದ ವ್ಯಕ್ತಿಯಾಗಿದ್ದರು. ಪುಸ್ತಕವನ್ನು ಅತ್ಯಂತ ಪ್ರೀತಿಯಿಂದ ಓದುತ್ತಿದ್ದರು. ಕುಟುಂಬ ಹಾಗೂ ಸಮಾಜದಲ್ಲಿ ಗೌರವದ ಸ್ಥಾನವನ್ನು ರಾಮಕೃಷ್ಣ ರೈಯವರು ಪಡೆದಿದ್ದರು ಎಂದು ನುಡಿನಮನ ಸಲ್ಲಿಸಿದ್ದರು.


ವಿಜಯಾ ಬ್ಯಾಂಕ್‌ ನಿವೃತ್ತ ಅಧಿಕಾರಿ ಅರಿಯಡ್ಕ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆರವರು ಮಾತನಾಡಿ ಬ್ಯಾಂಕ್‌ ಅಧಿಕಾರಿಯಾಗಿ ರಾಮಕೃಷ್ಣ ರೈಯವರು ಎಲ್ಲರ ಪ್ರೀತಿ ಪಾತ್ರರಾಗಿದ್ದರು. ಬ್ಯಾಂಕ್‌ನಲ್ಲಿ ಕೌಟುಂಬಿಕ ವಾತಾವರಣವನ್ನು ತೋರಿಸಿಕೋಡುವ ಮೂಲಕ ಜನಪ್ರೀತಿಯ ಅಧಿಕಾರಿಯಾಗಿದ್ದರು ಎಂದು ಹೇಳಿದರು.


ಮುಂಡಾಳಗುತ್ತು ರಾಮಕೃಷ್ಣ ರೈಯವರ ಪತ್ನಿ ಅರಿಯಡ್ಕ ಸುಚೇತಾ ಆರ್‌ ರೈ, ಮಕ್ಕಳಾದ ಪ್ರೀತಿ ಶೆಟ್ಟಿ, ಸುಪ್ರಿಯ ಶೆಟ್ಟಿ, ಅಳಿಯ ಪವನ್‌ ಶೆಟ್ಟಿ ಮೊಮ್ಮಗಳು ಕಿಶಾ ಶೆಟ್ಟಿ, ಸಹೋದರಿ ಮುಂಡಾಳಗುತ್ತು ಲಕ್ಷ್ಮೀ ರಾಮಯ್ಯ ರೈ, ಸಹೋದರ ಮುಂಡಾಳಗುತ್ತು ಮನೋಹರ್‌ ರೈ, ಮುಂಡಾಳಗುತ್ತು ಹರಿಪ್ರಸಾದ್‌ ರೈ , ಅನಿತಾ ಹೇಮನಾಥ ಶೆಟ್ಟಿ, ವನಿತಾ ಸುಧಾಕರ ಶೆಟ್ಟಿ, ಸರಿತಾ ಸಂದೀಪ್‌ ರೈ, ಶಿಲ್ಪ ಹರಿಪ್ರಸಾದ್‌ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಭಾರತೀಯ ರಿಸವ್‌ ಬ್ಯಾಂಕ್‌ನ ಮಾಜಿ ನಿರ್ದೇಶಕ ಅಗರಿ ನವೀನ್‌ ಭಂಡಾರಿ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು, ನಿವೃತ್ತ ಡಿವೈಎಸ್‌ಪಿ ಮುಂಡಾಳಗುತ್ತು ಶಾಂತಾರಾಮ ರೈ, ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಬೂಡಿಯಾರ್‌ ರಾಧಾಕೃಷ್ಣ ರೈ, ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನ್ಯಾಕ್‌, ಕಡಮಜಲು ಸುಭಾಷ್‌ ರೈ, ರಾಮಯ್ಯ ರೈ ತಿಂಗಳಾಡಿ, ಪ್ರಮೋದ್‌ ಕುಮಾರ್‌ ರೈ, ರಮೇಶ್‌ ರೈ ಬಳ್ಳಿಕಾನ, ನಿವೃತ್ತ ಡಿವೈಎಸ್‌ಪಿ ಭಾಸ್ಕರ್‌ ರೈ, ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ನರೇಂದ್ರ ರೈ ದೇರ್ಲ, ಎಚ್‌.ಶ್ರೀಧರ್‌ ರೈ ಹೊಸಮನೆ, ಜಯಸೂರ್ಯ ರೈ ಮಾದೋಡಿ, ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿಗಳು, ಬ್ಯಾಂಕ್‌ ಅಫ್‌ ಬರೋಡಾದ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು ಸೇರಿದಂತೆ ಆರುನೂರಕ್ಕು ಹೆಚ್ಚು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here