25ನೇ ಅಂತರ್ರಾಷ್ಟ್ರೀಯ ಜಾಂಬೂರಿ: ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 4 ವಿದ್ಯಾರ್ಥಿಗಳು, ಓರ್ವ ಶಿಕ್ಷಕಿ ದಕ್ಷಿಣ ಕೊರಿಯಕ್ಕೆ

0

ಪುತ್ತೂರು: ದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಸೆಮೇಗಮ್ ಜಿಯೋನ್ಲಬುಕ್ (SeaMan Geum Jellabuk-Do) Draw your Dream ಎಂಬ ಧ್ಯೇಯದೊಂದಿಗೆ ಆ. 1 ರಿಂದ 12ರವರೆಗೆ ದಕ್ಷಿಣ ಕೊರಿಯದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಜಾಂಬೂರಿ ಉತ್ಸವಕ್ಕೆ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 4 ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕಿ ಆಯ್ಕೆಗೊಂಡಿದ್ದಾರೆ.

ಜುಲೈ 31 ಕ್ಕೆ ಮಂಗಳೂರಿನಿಂದ 46 ವಿದ್ಯಾರ್ಥಿಗಳು ಮತ್ತು 5 ಶಿಕ್ಷಕರು ಬೆಂಗಳೂರು ಮತ್ತು ಹಾಂಕಾಂಗ್ ಮೂಲಕ ಸೌತ್ ಕೋರಿಯಕ್ಕೆ ತೆರಳಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಎರಲ್ ಶಮನ್ ಡಿ’ ಸೋಜ (ಎಡ್ವಿನ್ ಸಂತಾನ್ ಡಿ’ ಸೋಜ ಮತ್ತು ಶಾಲೆಟ್ ಜೇನ್ ರೆಬೆಲ್ಲೊರವರ ಪುತ್ರ), ಸೈಲಸ್ ಆಶ್ಲಿ ಡಿ.ಆಲ್ಮೇಡಾ (ಪ್ಲೇವಿ ಸುನಿತಾ ಪಿರೇರಾ ಮತ್ತು ಸಂತೋಷ್ ಡಿ. ಆಲ್ಮೇಡಾರವರ ಪುತ್ರ), ವೈಷ್ಣವಿ (ಹರ್ಷ ಡಿ ಎಸ್ ಮತ್ತು ಕವಿತಾ ಕೆ.ರವರ ಪುತ್ರಿ), ಎ. ಸಮೃದ್ಧಿ ಚೌಟ (ಎ. ಬಿ. ಷುಷ್ಪರಾಜ್ ಚೌಟ ರವರ ಪುತ್ರಿ), ಹಾಗೂ ಶಿಕ್ಷಕಿ ಮೈತ್ರೇಯಿ (ವಿಜಯ ಸರ್ವಿಸಸ್‌ನ ಡಿ.ಶ್ಯಾಮ ಮಂಜುನಾಥ ಪ್ರಸಾದರವರ ಪತ್ನಿ) ಇವರು ದಕ್ಷಿಣ ಕೋರಿಯದಲ್ಲಿ ನಡೆಯಲಿರುವ ಜಾಂಬೂರಿಯಲ್ಲಿ ಭಾಗವಹಿಸಲಿದ್ದಾರೆ. ವಿವಿಧ ದೇಶಗಳೊಂದಿಗೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಸಾಹಸಮಯ ಚಟುವಟಿಕೆಯಲ್ಲಿ ನಮ್ಮ ಸ್ಕೌಟ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಶಾಲಾಮುಖ್ಯೋಪಾಧ್ಯಾಯಿನಿ ಸಿಸ್ಟರ್ ಶಾಂತಿ ಆಗ್ನೇಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here