ನೆಲ್ಯಾಡಿಯ ಶೇಖ್ ಆದಂ ಸಾಹೇಬ್‌ರವರಿಗೆ ‘ವಿಶ್ವ ವಿದ್ಯಾಜ್ಞಾನ ರತ್ನ’ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

0

ನೆಲ್ಯಾಡಿ: ಡಾ.ಎಸ್.ಎಸ್.ಪಾಟೀಲ್‌ರವರ ಸಾರಥ್ಯದ ಹುಬ್ಬಳ್ಳಿಯಿಂದ ಪ್ರಸಾರಗೊಳ್ಳುವ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯವರು ನೀಡುವ 2023ನೇ ಸಾಲಿನ ‘ವಿಶ್ವ ವಿದ್ಯಾಜ್ಞಾನ ರತ್ನ’ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದ ನೆಲ್ಯಾಡಿಯ ಶೇಖ್ ಆದಂ ಸಾಹೇಬ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ವಗ್ಗ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕರಾಗಿರುವ ಶೇಖ್ ಆದಂ ಸಾಹೇಬ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಧಾರವಾಡ ರಂಗಾಯಣದ ಸಭಾ ಭವನದಲ್ಲಿ ನಡೆದ ವಿಶ್ವದರ್ಶನ 2ನೇ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿಶ್ವದರ್ಶನ ಕನ್ನಡ ದಿನಪತ್ರಿಕೆ ಹಾಗೂ ಕರ್ನಾಟಕ ಪ್ರಜಾ ದರ್ಶನ ಪತ್ರಿಕೆ,ಹುಬ್ಬಳ್ಳಿ ಇದರ ಸಂಪಾದಕ ಡಾ| ಎಸ್.ಎಸ್.ಪಾಟೀಲ್ ಹಾಗೂ ಇತರೇ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

LEAVE A REPLY

Please enter your comment!
Please enter your name here